Nobel Prize in Chemistry 2021: ಬೆಂಜಮಿನ್ ಲಿಸ್ಟ್, ಡೇವಿಡ್ ಮ್ಯಾಕ್​ಮಿಲನ್​ಗೆ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ

| Updated By: ಸುಷ್ಮಾ ಚಕ್ರೆ

Updated on: Oct 06, 2021 | 5:25 PM

Nobel Prize 2021: ಜರ್ಮನಿಯ ಬೆಂಜಮಿನ್ ಲಿಸ್ಟ್ ಹಾಗೂ ಇಂಗ್ಲೆಂಡ್​ನ ಡೇವಿಡ್ ಡಬ್ಲುಸಿ ಮ್ಯಾಕ್​ಮಿಲನ್ ಕೆಮಿಸ್ಟ್ರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

Nobel Prize in Chemistry 2021: ಬೆಂಜಮಿನ್ ಲಿಸ್ಟ್, ಡೇವಿಡ್ ಮ್ಯಾಕ್​ಮಿಲನ್​ಗೆ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ
ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಬೆಂಜಮಿನ್ ಲಿಸ್ಟ್ ಹಾಗೂ ಡೇವಿಡ್ ಡಬ್ಲುಸಿ ಮ್ಯಾಕ್​ಮಿಲನ್
Follow us on

ರಸಾಯನ ಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಲಾಗಿದ್ದು, ಜರ್ಮನಿಯ ಬೆಂಜಮಿನ್ ಲಿಸ್ಟ್ ಹಾಗೂ ಇಂಗ್ಲೆಂಡ್​ನ ಡೇವಿಡ್ ಡಬ್ಲುಸಿ ಮ್ಯಾಕ್​ಮಿಲನ್ ಕೆಮಿಸ್ಟ್ರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಅಸಿಮ್ಮೆಟ್ರಿಕ್ ಆರ್ಗನೊಕಟಲಿಸಿಸ್ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಈ ಇಬ್ಬರಿಗೆ ಈ ಬಾರಿಯ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.

ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಇಂದು ರಸಾಯನ ಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಿದೆ. ಜರ್ಮನಿಯ ಬೆಂಜಮಿನ್ ಲಿಸ್ಟ್ ಮತ್ತು ಯುಕೆಯ ಡೇವಿಡ್ ಮ್ಯಾಕ್‌ಮಿಲನ್‌ 2000ರಲ್ಲಿ ಸ್ವತಂತ್ರವಾಗಿ ಕ್ಯಾಟಲಿಸಿಸ್​ನ ಹೊಸ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದರು.

ಸಂಶೋಧಕರು ಈಗ ಹೊಸ ಔಷಧಿಗಳಿಂದ ಹಿಡಿದು ಸೌರ ಕೋಶಗಳಲ್ಲಿ ಬೆಳಕನ್ನು ಸೆರೆ ಹಿಡಿಯಬಲ್ಲ ಅಣುಗಳವರೆಗೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಈ ರೀತಿಯಾಗಿ, ಆರ್ಗನೊಕಟಲಿಸ್ಟ್​ಗಳು ಮನುಷ್ಯಕುಲಕ್ಕೆ ಅನುಕೂವಾಗುವಂತಹ ಸಂಶೋಧನೆಗಳನ್ನು ಮಾಡುತ್ತಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮೆಚ್ಚುಗೆ ವ್ಯಕ್ತಪಡಿಸಿದೆ.

ನಿನ್ನೆಯಷ್ಟೇ 2021ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಸೈಕುರೊ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್, ಪ್ಯಾರಿಸಿಗೆ ಘೋಷಿಸಲಾಗಿತ್ತು. ಜಪಾನ್, ಜರ್ಮನಿ ಮತ್ತು ಇಟಲಿಯ ಈ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಿಸಲಾಗಿತ್ತು. ಇದೀಗ ರಸಾಯನ ಶಾಸ್ತ್ರ ವಿಭಾಗದಲ್ಲೂ ಜರ್ಮನಿಯ ವಿಜ್ಞಾನಿಗೆ ನೊಬೆಲ್ ಪ್ರಶಸ್ತಿ ಬಂದಿದೆ.

ಇದನ್ನೂ ಓದಿ: Nobel Prize 2021: ಪ್ರಸಕ್ತ ವರ್ಷದ ಭೌತಶಾಸ್ತ್ರ ಕ್ಷೇತ್ರದ ನೊಬೆಲ್​ ಪ್ರಶಸ್ತಿ ಈ ಮೂವರು ವಿಜ್ಞಾನಿಗಳಿಗೆ

Nobel Prize 2021 ಅಮೆರಿಕದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್​​ಗೆ 2021ರ ವೈದ್ಯಕೀಯ ನೊಬೆಲ್ ಪ್ರಶಸ್ತಿ

Published On - 5:21 pm, Wed, 6 October 21