Operation Sindhu: ನೇಪಾಳ, ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೆ ಭಾರತ ಸಿದ್ಧತೆ, 517 ಭಾರತೀಯರ ಸ್ಥಳಾಂತರ

ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಈ ಸಂಘರ್ಷಣೆಯಲ್ಲಿ ಹಲವು ಸಾವು- ನೋವುಗಳು ಸಂಭವಿಸಿದೆ. ಇದೀಗ ಭಾರತ ಇರಾನ್​​ನಲ್ಲಿರುವ ತಮ್ಮ ಪ್ರಜೆಗಳನ್ನು ಆಪರೇಷನ್ ಸಿಂಧು ಮೂಲಕ ಭಾರತಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಇದೀಗ ಭಾರತೀಯ ಪ್ರಜೆಗಳ ಜತೆಗೆ ಭಾರತದ ಪಕ್ಕ ರಾಷ್ಟ್ರಗಳಾದ ನೇಪಾಳ ಹಾಗೂ ಶ್ರೀಲಂಕಾದ ಜನರನ್ನು ಕೂಡ ಸ್ಥಳಾಂತರ ಮಾಡಲಾಗುತ್ತಿದೆ. ಇಲ್ಲಿಯವರೆಗೆ 517 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ.

Operation Sindhu: ನೇಪಾಳ, ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೆ ಭಾರತ ಸಿದ್ಧತೆ, 517 ಭಾರತೀಯರ ಸ್ಥಳಾಂತರ
ಸಾಂದರ್ಭಿಕ ಚಿತ್ರ

Updated on: Jun 21, 2025 | 11:52 AM

ಇಸ್ರೇಲ್ ಮತ್ತು ಇರಾನ್ (Israel-Iran conflict) ನಡುವೆ ಭಾರೀ ಬಿಕ್ಕಟ್ಟು ಉಂಟಾಗಿದೆ. ಇರಾನ್​​ ಮೇಲೆ ಇಸ್ರೇಲ್​​​​ ದಾಳಿ ಮಾಡಿದೆ. ಇರಾನ್​​ ಕೂಡ ಪ್ರತಿದಾಳಿಯನ್ನು ನಡೆಸಿದೆ. ಇದರ ನಡುವೆ ಇರಾನ್​ ಹಾಗೂ ಇಸ್ರೇಲ್​​ನಲ್ಲಿರುವ ಭಾರತದ ಪ್ರಜೆಗಳನ್ನು ಆಪರೇಷನ್​​ ಸಿಂಧು ಮೂಲಕ ಭಾರತಕ್ಕೆ ಕರೆಸಿಕೊಳ್ಳುತ್ತಿದೆ. ಆದರೆ ಇದರ ಜತೆಗೆ ಭಾರತದ ಅಕ್ಕ-ಪಕ್ಕ ರಾಷ್ಟ್ರದ ಪ್ರಜೆಗಳನ್ನು ಕೂಡ ಭಾರತದ ಕಾಪಾಡಿದೆ. ಇಂದು ಕೂಡ (ಜೂ.21)  ಇಸ್ರೇಲ್​​ ಇರಾನ್​​ ಯುದ್ಧ ಮುಂದುವರಿದಿದೆ. ಈ ಯುದ್ಧದ ನಡುವೆ ಸಿಲುಕಿಕೊಂಡಿರುವ ನೇಪಾಳ ಹಾಗೂ ಶ್ರೀಲಂಕಾದ ಪ್ರಜೆಗಳನ್ನು ಕೂಡ ಭಾರತ ರಾಯಭಾರ ಕಚೇರಿ ಕಾಪಾಡಿದೆ. ನೇಪಾಳ ಹಾಗೂ ಶ್ರೀಲಂಕಾ ಸರ್ಕಾರದ ಕೋರಿಕೆ ಮೇರೆಗೆ ಭಾರತದ ಇರಾನ್​​ನಲ್ಲಿರುವ ಅವರ ಪ್ರಜೆಗಳನ್ನು ಕಾಪಾಡಿದೆ.

ಈ ಸ್ಥಳಾಂತರ ಕಾರ್ಯದಲ್ಲಿ ನೇಪಾಳ ಹಾಗೂ ಶ್ರೀಲಂಕಾದ ಪ್ರಜೆಗಳು ಕೂಡ ಭಾಗಿಯಾಗಲಿದ್ದಾರೆ ಎಂದು ಇರಾನ್​​ನಲ್ಲಿರುವ ಭಾರತದ ರಾಯಭಾರಿ ಕಚೇರಿ ಹೇಳಿದೆ. ನೇಪಾಳ ಮತ್ತು ಶ್ರೀಲಂಕಾ ನಾಗರಿಕರಿಗೆ ರಾಯಭಾರ ಕಚೇರಿ ತುರ್ತು ಸಂಪರ್ಕ ಸಂಖ್ಯೆಯನ್ನು ಸಹ ಒದಗಿಸಿದೆ. ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಆಪರೇಷನ್ ರೈಸಿಂಗ್ ಲಯನ್ ಅಡಿಯಲ್ಲಿ ಟೆಹ್ರಾನ್ ಮೇಲೆ ದಾಳಿಯನ್ನು ನಡೆಸಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಪಶ್ಚಿಮ ಏಷ್ಯಾದಿಂದ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವ ನಿರ್ಣಾಯಕ ಕಾರ್ಯಾಚರಣೆಯಾದ ಆಪರೇಷನ್ ಸಿಂಧುವನ್ನು ಭಾರತ ಪ್ರಾರಂಭಿಸಿತ್ತು.

ಇದನ್ನೂ ಓದಿ
ಧಮ್ಕಿಯಿಂದ ಪ್ರಯೋಜನವಾಗಿಲ್ಲ, ಇರಾನ್ ವಿರುದ್ಧ ಯುದ್ಧಕ್ಕೆ ಸಿದ್ಧವಾದ ಟ್ರಂಪ್
ಭಾರತದ ಕಡೆಯಿಂದ ಮೋದಿ ಯುದ್ಧ ನಿಲ್ಲಿಸಿದರು; ವರಸೆ ಬದಲಿಸಿದ ಟ್ರಂಪ್
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್ ಶರಣಾಗುವುದಿಲ್ಲ, ಮಧ್ಯಪ್ರವೇಶಿಸಬೇಡಿ; ಟ್ರಂಪ್​ಗೆ ಖಮೇನಿ ಎಚ್ಚರಿಕೆ

517 ಭಾರತೀಯರ ಸ್ಥಳಾಂತರ:

ಶುಕ್ರವಾರ, ಇರಾನ್‌ನ ಮಶಾದ್‌ನಿಂದ 290 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳನ್ನು ಇದ್ದರು. ಈ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ. ಇನ್ನು ಇಸ್ರೇಲ್​ ದಾಳಿಯಿಂದ ಇರಾನ್​ನಲ್ಲಿ​​​ ಕೆಟ್ಟ ಪರಿಸ್ಥಿತಿ ಉಂಟಾಗಿದೆ. ಅಲ್ಲಿನ ಭದ್ರತಾ ವ್ಯವಸ್ಥೆಗಳು ತುಂಬಾ ಕೆಟ್ಟಾಗಿದ್ದು. ಈ ಕಾರಣದಿಂದ ಅಲ್ಲಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಈ ಕಾರ್ಯಚರಣೆ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಬಂದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ಸರ್ಕಾರಕ್ಕೆ ಧನ್ಯವಾದ ಹೇಳಿದೆ. ಸಂಘರ್ಷದ ಮಧ್ಯೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಭಾರತೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಇರಾನ್ ಕೆಲಸ ಮಾಡುತ್ತಿದೆ.

ಇಲ್ಲಿದೆ ನೋಡಿ ಪೋಸ್ಟ್​​:

ತುರ್ಕಮೆನಿಸ್ತಾನದ ಅಶ್ಗಬಾತ್ ನಿಂದ ಮತ್ತೊಂದು ವಿಮಾನ ಶನಿವಾರ ಬೆಳಗಿನ ಜಾವ 3 ಗಂಟೆಗೆ ನವದೆಹಲಿಗೆ ಬಂದಿಳಿದಿದೆ. ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಇದುವರೆಗೆ 517 ಭಾರತೀಯ ಪ್ರಜೆಗಳು ಆಪರೇಷನ್ ಸಿಂಧು ಅಡಿಯಲ್ಲಿ ಇರಾನ್ ನಿಂದ ಭಾರತಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಪ್ರಶಸ್ತಿ ನೀಡುವುದಿಲ್ಲ, ಮತ್ತೆ ಕ್ರೆಡಿಟ್​​​ ಪಡೆಯಲು ಮುಂದಾದ ಟ್ರಂಪ್

ಜೂನ್ 19ರಿಂದ ಈ ಕಾರ್ಯಚರಣೆ ನಡೆದಿದೆ. ಮೊದಲು ವಿಮಾನದಲ್ಲಿ ಉರ್ಮಿಯಾ ವಿಶ್ವವಿದ್ಯಾಲಯದ 110 ಭಾರತೀಯ ವಿದ್ಯಾರ್ಥಿಗಳು ದೆಹಲಿಯಲ್ಲಿ ಇಳಿದಿದ್ದಾರೆ. ಈ ವಿದ್ಯಾರ್ಥಿಗಳನ್ನು ಭೂ ಮಾರ್ಗದ ಮೂಲಕ ಅರ್ಮೇನಿಯಾಗೆ ಸ್ಥಳಾಂತರಿಸಲಾಯಿತು, ನಂತರ ಯೆರೆವಾನ್‌ನಿಂದ ನವದೆಹಲಿಗೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಮುಂದುವರೆದಿರುವುದರಿಂದ , ಸೋಮವಾರ ಭಾರತೀಯ ರಾಯಭಾರ ಕಚೇರಿಯು ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಜಾಗರೂಕರಾಗಿರಿ, ಅನಗತ್ಯ ಚಲನೆಯನ್ನು ತಪ್ಪಿಸಿ, ರಾಯಭಾರ ಕಚೇರಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅನುಸರಿಸಿ ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸುವಂತೆ ಕೇಳಿಕೊಂಡಿದೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:49 am, Sat, 21 June 25