ಭಾರತದ ಮೇಲೆ ಪ್ರತಿ ದಾಳಿಯ ಯೋಚನೆಯನ್ನೂ ಮಾಡ್ಬೇಡಿ, ಪಾಕ್​ಗೆ ಅಮೆರಿಕ ತಾಕೀತು

Operation Sindoor: ಭಾರತದ ಮೇಲೆ ಪ್ರತಿ ದಾಳಿ ಮಾಡುವ ಆಲೋಚನೆಯೂ ಬೇಡ ಎಂದು ಅಮೆರಿಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ನೀವು ದಾಳಿ ಮಾಡಿದ್ರೆ ನಾವು ಪ್ರತಿದಾಳಿ ಮಾಡ್ತೀವಿ ಎಂದು ಅಮೆರಿಕ ಎಚ್ಚರಿಕೆ ಕೊಡುತ್ತಲೇ ಇತ್ತು. ಆದರೆ ಭಾರತದ ದಾಳಿಗೆ ಪಾಕ್ ಭಯಪಟ್ಟಂತೆ ತೋರುತ್ತಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಮಾಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಇಂದು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಭಾರತವು ಆಪರೇಷನ್ ಸಿಂಧೂರ್ ಮೂಲಕ ದಾಳಿ ನಡೆಸಿದ್ದರು.

ಭಾರತದ ಮೇಲೆ ಪ್ರತಿ ದಾಳಿಯ ಯೋಚನೆಯನ್ನೂ ಮಾಡ್ಬೇಡಿ, ಪಾಕ್​ಗೆ ಅಮೆರಿಕ ತಾಕೀತು
ಭಾರತದ ಮೇಲೆ ಪ್ರತಿ ದಾಳಿ ಮಾಡುವ ಆಲೋಚನೆಯನ್ನು ಕೂಡ ಮಾಡಬೇಡಿ ಎಂದು ಅಮೆರಿಕ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಪಾಕಿಸ್ತಾನದ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ ಪಾಕಿಸ್ತಾನದ ಪ್ರತಿ ದಾಳಿಯ ಯೋಜನೆ ಈಗ ದುರ್ಬಲಗೊಳ್ಳುತ್ತಿರುವಂತೆ ಕಾಣುತ್ತಿದೆ.

Updated on: May 07, 2025 | 2:16 PM

ವಾಷಿಂಗ್ಟನ್, ಮೇ 07: ‘‘ಭಾರತದ ಮೇಲೆ ಪ್ರತಿ ದಾಳಿ ಮಾಡುವ ಆಲೋಚನೆಯನ್ನು ಕೂಡ ಮಾಡಬೇಡಿ’’ ಎಂದು ಅಮೆರಿಕ ಪಾಕಿಸ್ತಾನ(Pakistan)ಕ್ಕೆ ಅಮೆರಿಕ ತಾಕೀತು ಮಾಡಿದೆ. ಪಾಕಿಸ್ತಾನದ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ ಪಾಕಿಸ್ತಾನದ ಪ್ರತಿ ದಾಳಿಯ ಯೋಜನೆ ಈಗ ದುರ್ಬಲಗೊಳ್ಳುತ್ತಿರುವಂತೆ ಕಾಣುತ್ತಿದೆ.

ನೀವು ದಾಳಿ ಮಾಡಿದ್ರೆ ನಾವು ಪ್ರತಿದಾಳಿ ಮಾಡ್ತೀವಿ ಎಂದು ಅಮೆರಿಕ ಎಚ್ಚರಿಕೆ ಕೊಡುತ್ತಲೇ ಇತ್ತು. ಆದರೆ ಭಾರತದ ದಾಳಿಗೆ ಪಾಕ್ ಭಯಪಟ್ಟಂತೆ ತೋರುತ್ತಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಮಾಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಇಂದು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಭಾರತವು ಆಪರೇಷನ್ ಸಿಂಧೂರ್ ಮೂಲಕ ದಾಳಿ ನಡೆಸಿದ್ದರು.

ಈ ಮಧ್ಯೆ ಅಮೆರಿಕ ಕೂಡ ಕಠಿಣ ನಿಲುವು ತಳೆದು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದೆ. ಭಾರತದ ಮಿಲಿಟರಿ ಕ್ರಮಕ್ಕೆ ಪಾಕಿಸ್ತಾನ ಪ್ರತಿಕ್ರಿಯಿಸುವ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಎಂದು ಹೇಳಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ಪ್ರತಿಕ್ರಿಯೆಯು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಬಹುದು, ಆದ್ದರಿಂದ ಸಂಯಮವನ್ನು ಕಾಯ್ದುಕೊಳ್ಳುವುದು ಮುಖ್ಯ ಎಂದು ಅವರು ಎಚ್ಚರಿಸಿದರು.

ಇದನ್ನೂ ಓದಿ
ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು?
ಆಪರೇಷನ್ ಸಿಂಧೂರ್​​ಗೆ ಷೇರುಮಾರುಕಟ್ಟೆಯಿಂದ ಮಿಶ್ರಪ್ರತಿಕ್ರಿಯೆ
ಆಪರೇಷನ್ ಸಿಂಧೂರ್ ಎಂದರೇನು? ಈ ದಾಳಿಗೆ ಭಾರತ ಇದೇ ಹೆಸರಿಟ್ಟಿದ್ದೇಕೆ?
ಮಾಕ್ ಡ್ರಿಲ್​ಗೆ ಭಾರತ ಸಜ್ಜು, ಇಸ್ರೇಲ್​ನಂತೆ ದಾಳಿ ನಡೆಯಲಿದೆ ಎಂದ ಪಾಕ್

ಮತ್ತಷ್ಟು ಓದಿ: Vyomika Singh: ಆಪರೇಷನ್ ಸಿಂಧೂರ್ ನೇತೃತ್ವವಹಿಸಿದ್ದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಯಾರು?

ಪಾಕಿಸ್ತಾನಕ್ಕೆ ಅಮೆರಿಕದಿಂದ ಕಠಿಣ ಸಂದೇಶ
ವೈಮಾನಿಕ ದಾಳಿಯ ನಂತರ ಅಮೆರಿಕ ಪಾಕಿಸ್ತಾನಕ್ಕೆ ಬಲವಾದ ಸಂದೇಶವನ್ನು ನೀಡಿದೆ. ಭಾರತದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳುವುದನ್ನು ತಡೆಯಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸ್ಪಷ್ಟಪಡಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಹಕ್ಕು ಭಾರತಕ್ಕೆ ಇದೆ ಮತ್ತು ಈ ವಿಷಯದಲ್ಲಿ ಪಾಕಿಸ್ತಾನ ಏನನ್ನೂ ಮಾಡಲು ಧೈರ್ಯ ಮಾಡಬಾರದು ಎಂದು ಅವರು ಹೇಳಿದರು.
ತಾಳ್ಮೆಯ ಬಗ್ಗೆ ಸಲಹೆ
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ನೇರವಾಗಿ ಮಾತನಾಡಿ, ಸಂಯಮದಿಂದ ವರ್ತಿಸುವಂತೆ ಸಲಹೆ ನೀಡಿದ್ದಾಗಿಯೂ ರೂಬಿಯೊ ಹೇಳಿದರು. ಭಾರತ-ಪಾಕಿಸ್ತಾನದ ಪರಿಸ್ಥಿತಿಯನ್ನು ಅಮೆರಿಕ ಗಮನಿಸುತ್ತಿದೆ ಮತ್ತು ಈ ಉದ್ವಿಗ್ನತೆ ಶೀಘ್ರದಲ್ಲೇ ಶಾಂತಿಯುತವಾಗಿ ಬಗೆಹರಿಯುತ್ತದೆ ಎಂದು ಆಶಿಸುತ್ತಿದೆ ಎಂದು ಅವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಬರೆದಿದ್ದಾರೆ.

ಈ ಬೆಳವಣಿಗೆಗಳ ನಡುವೆ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಮಾತನಾಡಿ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿದರು. ಅದೇ ಸಮಯದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಪರಿಸ್ಥಿತಿಯ ಬಗ್ಗೆ ಹೇಳಿಕೆ ನೀಡುತ್ತಾ, ಭಾರತ ಮತ್ತು ಪಾಕಿಸ್ತಾನ ಬಹಳ ಸಮಯದಿಂದ ಉದ್ವಿಗ್ನತೆಯಿಂದ ಕೂಡಿವೆ, ಆದರೆ ಈಗ ಈ ಸಂಘರ್ಷ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ಹೇಳಿದರು.

ಭಾರತದ ವೈಮಾನಿಕ ದಾಳಿಯ ನಂತರ ಪಾಕಿಸ್ತಾನದಿಂದ ಪ್ರತೀಕಾರದ ಸಾಧ್ಯತೆಯಿದೆ, ಆದರೆ ಅಮೆರಿಕದ ಎಚ್ಚರಿಕೆಯ ನಂತರ ಪಾಕಿಸ್ತಾನದ ತಂತ್ರ ಬದಲಾಗಬಹುದು. ಪ್ರಸ್ತುತ ಅಂತಾರಾಷ್ಟ್ರೀಯ ಸಮುದಾಯವು ಭಾರತದ ಪರವಾಗಿ ನಿಂತಿರುವಂತೆ ಕಾಣುತ್ತಿದೆ.

ಭಯೋತ್ಪಾದಕರಿಗೆ ಅಡಗಿಕೊಳ್ಳಲು ಜಾಗವಿಲ್ಲ
ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ಈಗ ಅಡಗಿಕೊಳ್ಳಲು ಜಾಗವಿಲ್ಲ ಎಂದು ಭಾರತಕ್ಕೆ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಹೇಳಿದ್ದಾರೆ. ಹಾಗೆಯೇ ಅಮಾಯಕರನ್ನು ಕೊಂದು ಅಡಗಿಕುಳಿತರೇ ಯಾರೂ ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ