Imran Khan: ಕೊಲೆ ಸಂಚು ನಡೆಸಲಾಗುತ್ತಿದೆ; ಬಂಧನದಲ್ಲಿರಿಸಿದ ಜಾಗದಲ್ಲಿ ವಾಶ್ ರೂಂ ಕೂಡಾ ಇಲ್ಲ: ಇಮ್ರಾನ್ ಖಾನ್

ಇದು ಅವರನ್ನು ಕೊಲ್ಲುವ ಪ್ರಯತ್ನವಾಗಿದೆ. ತನಗೆ ಮಲಗಲು ಬಿಡುತ್ತಿಲ್ಲ ಎಂದು ಅವರು ಹೇಳಿದರು. ಶೌಚಾಲಯ ಅಥವಾ ಹಾಸಿಗೆ ಇಲ್ಲದೆ ಕೊಳಕು ಕೋಣೆಯಲ್ಲಿ ಇರಿಸಲಾಗಿತ್ತು, ಬೆಳಿಗ್ಗೆ 3 ಗಂಟೆಗೆ ಪೊಲೀಸ್ ಲೈನ್‌ಗೆ ಕರೆತಂದಾಗಿನಿಂದ ಅವರಿಗೆ ತಿನ್ನಲು ಏನನ್ನೂ ನೀಡಲಿಲ್ಲ ಎಂದು ಖಾನ್ ಅವರ ವಕೀಲರು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Imran Khan: ಕೊಲೆ ಸಂಚು ನಡೆಸಲಾಗುತ್ತಿದೆ; ಬಂಧನದಲ್ಲಿರಿಸಿದ ಜಾಗದಲ್ಲಿ ವಾಶ್ ರೂಂ ಕೂಡಾ ಇಲ್ಲ: ಇಮ್ರಾನ್ ಖಾನ್
ಇಮ್ರಾನ್ ಖಾನ್
Follow us
|

Updated on:May 12, 2023 | 1:12 PM

ಪಾಕಿಸ್ತಾನದ (Pakistan) ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದ ನಂತರ ಅವರನ್ನು ಜೈಲಿನಲ್ಲಿ ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ಅವರಿಗೆ ಚಿತ್ರಹಿಂಸೆ ನೀಡಲಾಯಿತು ಮತ್ತು ಅವರಿಗೆ ಹೃದಯಾಘಾತ (Heart Attack) ಮಾಡಲು ಅವರ ಊಟದಲ್ಲಿ ಇನ್ಸುಲಿನ್ ಲೇಪಿಸಲಾಗಿದೆ ಎಂದು ಅವರ ವಕೀಲರು ಹೇಳಿದ್ದಾರೆ. ಪ್ರತಿಪಕ್ಷ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್, ತನಗೆ ನಿಧಾನ ಹೃದಯಾಘಾತವನ್ನು ಉಂಟುಮಾಡಲು ಚುಚ್ಚುಮದ್ದನ್ನು ನೀಡಲಾಯಿತು. ನನಗೆ ವಾಶ್ ರೂಂ ಅನ್ನು ಬಳಸಲು ಅನುಮತಿಸಲಿಲ್ಲ ಎಂದು ಆರೋಪಿಸಿದ್ದಾರೆ. ಇಮ್ರಾನ್ ಖಾನ್​​ಗೆ ಎದೆನೋವು ಇದೆ ಎಂದು ಅವರು ಹೇಳಿರುವುದಾಗಿ ಖಾನ್​​ ಅವರ ವಕೀಲರು ಹೇಳಿದ್ದಾರೆ.

ಖಾನ್ ಅವರ ಬಂಧನವನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ಕಾನೂನುಬಾಹಿರ ಎಂದು ಹೇಳಿದ್ದು ಅವರನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ. ಇಂದು ಅವರು ಇಸ್ಲಾಮಾಬಾದ್ ಹೈಕೋರ್ಟಿಗೆ ಹಾಜರಾಗಿ ಬಂಧನ ಪೂರ್ವ ಜಾಮೀನು ಪಡೆಯಲು ಮತ್ತು ನ್ಯಾಯಾಲಯದ ಹೊರಗೆ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಖಾನ್ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳದ (ಎನ್‌ಎಬಿ) ವಶದಲ್ಲಿದ್ದಾರೆ.

ಇದು ಅವರನ್ನು ಕೊಲ್ಲುವ ಪ್ರಯತ್ನವಾಗಿದೆ. ತನಗೆ ಮಲಗಲು ಬಿಡುತ್ತಿಲ್ಲ ಎಂದು ಅವರು ಹೇಳಿದರು. ಶೌಚಾಲಯ ಅಥವಾ ಹಾಸಿಗೆ ಇಲ್ಲದೆ ಕೊಳಕು ಕೋಣೆಯಲ್ಲಿ ಇರಿಸಲಾಗಿತ್ತು, ಬೆಳಿಗ್ಗೆ 3 ಗಂಟೆಗೆ ಪೊಲೀಸ್ ಲೈನ್‌ಗೆ ಕರೆತಂದಾಗಿನಿಂದ ಅವರಿಗೆ ತಿನ್ನಲು ಏನನ್ನೂ ನೀಡಲಿಲ್ಲ ಎಂದು ಖಾನ್ ಅವರ ವಕೀಲರು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಜನಪ್ರಿಯವಾಗಿರುವ ಮಾಜಿ ಕ್ರಿಕೆಟ್ ತಾರೆ ಖಾನ್, ಕಾನೂನಿನ ಆಳ್ವಿಕೆಯನ್ನು ಪುನಃಸ್ಥಾಪಿಸಲು ಹೋರಾಟವನ್ನು ಮುಂದುವರೆಸಬೇಕೆಂದು ಜನರನ್ನು ಒತ್ತಾಯಿಸಿದರು.

ಇಮ್ರಾನ್ ಖಾನ್ ಅಥವಾ ನಾವು ಕೊಲೆಯಾಗುತ್ತೇವೆ ಎಂದು ಪಾಕಿಸ್ತಾನದ ಸಚಿವ ರಾಣಾ ಸನಾವುಲ್ಲಾ ಅವರು ಹೇಳಿದ ಒಂದು ತಿಂಗಳ ನಂತರ ಕೊಲೆ ಸಂಚು ಆರೋಪಗಳು ಬಂದಿವೆ. ಕಳೆದ ನವೆಂಬರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಬಂದೂಕು ದಾಳಿಯಿಂದ ಖಾನ್ ಬದುಕುಳಿದಿದ್ದರು.

ಇದನ್ನೂ ಓದಿ: Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಸುಪ್ರೀಂ ಆದೇಶ

ಪ್ರಕರಣವೊಂದರಲ್ಲಿ ಹಾಜರಾಗಲು ಬಂದಿದ್ದ ನ್ಯಾಯಾಲಯದಿಂದ ಖಾನ್ ಅವರನ್ನು ಬಂಧಿಸಿರುವುದನ್ನು ಸುಪ್ರೀಂಕೋರ್ಟ್ ನಿನ್ನೆ ಟೀಕಿಸಿದ್ದು, ರಿಜಿಸ್ಟ್ರಾರ್ ಅನುಮತಿಯಿಲ್ಲದೆ ವ್ಯಕ್ತಿಯನ್ನು ನ್ಯಾಯಾಲಯದ ಆವರಣದಿಂದ ಬಂಧಿಸುವಂತಿಲ್ಲ ಎಂದು ಹೇಳಿದೆ.

ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಖಾನ್ ಅವರ ಬಂಧನವು ಪಾಕಿಸ್ತಾನದಲ್ಲಿ ತಿಂಗಳುಗಟ್ಟಲೆ ರಾಜಕೀಯ ಬಿಕ್ಕಟ್ಟಿನ ನಂತರ ಮತ್ತು ಪಾಕಿಸ್ತಾನದ ಪ್ರಬಲ ಮಿಲಿಟರಿ ಹಿರಿಯ ಅಧಿಕಾರಿಯ ಕೊಲೆಯ ಸಂಚು ಆರೋಪಿಸಿ ಅವರನ್ನು ಖಂಡಿಸಿದ ಗಂಟೆಗಳ ನಂತರ ನಡೆದಿದೆ. ಖಾನ್ ಬಂಧನ ಖಂಡಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ, ಲಾಹೋರ್‌ನಲ್ಲಿ ಕಾರ್ಪ್ಸ್ ಕಮಾಂಡರ್ ಮನೆಗೆ ಬೆಂಕಿ ಹಚ್ಚಿದರು. ರಾವಲ್ಪಿಂಡಿಯಲ್ಲಿರುವ ಸೇನೆಯ ಪ್ರಧಾನ ಕಚೇರಿಗೂ ಮುತ್ತಿಗೆ ಹಾಕಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Fri, 12 May 23