ಪಾಕ್​ನಲ್ಲಿ ಭಾರತ ಭಯೋತ್ಪಾದನೆ ಹರಡುತ್ತಿದೆಯಂತೆ: ಸಾಲು ಸಾಲು ಸುಳ್ಳು ಆರೋಪಗಳ ಮಾಡಿದ ಪಾಕ್

ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಪಾಕಿಸ್ತಾನವು ಭಾರತದ ಮೇಲೆ ಸಾಲು ಸಾಲು ಸುಳ್ಳು ಆರೋಪಳನ್ನು ಮಾಡಿದೆ. ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯಲ್ಲಿ ತಮ್ಮ ಕುಮ್ಮಕ್ಕಿದೆ ಎಂದು ಒಪ್ಪಿಕೊಳ್ಳುವ ಬದಲು ಭಾರತದ ಮೇಲೆ ಹರಿಹಾಯ್ದಿದೆ. ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಭಾರತದ ವಿರುದ್ಧ ಇತ್ತೀಚೆಗೆ ಮಾಡಿದ ಸಂವೇದನಾಶೀಲ ಆರೋಪಗಳು ಬೆಳಕಿಗೆ ಬಂದಿವೆ.

ಪಾಕ್​ನಲ್ಲಿ ಭಾರತ  ಭಯೋತ್ಪಾದನೆ ಹರಡುತ್ತಿದೆಯಂತೆ:  ಸಾಲು ಸಾಲು ಸುಳ್ಳು ಆರೋಪಗಳ ಮಾಡಿದ ಪಾಕ್
ಚೌಧರಿ

Updated on: May 04, 2025 | 10:25 AM

ಇಸ್ಲಾಮಾಬಾದ್, ಮೇ 04: ಇಡೀ ಜಗತ್ತು ಪಹಲ್ಗಾಮ್(Pahalgam) ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ವಿವಿಧ ದೇಶಗಳು ಭಾರತವನ್ನು ಬೆಂಬಲಿಸುತ್ತಿವೆ. ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಭಾರತದ ವಿರುದ್ಧ ಇತ್ತೀಚೆಗೆ ಮಾಡಿದ ಆರೋಪಗಳು ಈಗ ಬೆಳಕಿಗೆ ಬಂದಿವೆ.

ಏಪ್ರಿಲ್ 29ರಂದು ಪತ್ರಿಕಾಗೋಷ್ಠಿ ನಡೆಸಿದ್ದು, ಭಾರತ ಸರ್ಕಾರ ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದ್ದಾರೆ. ಭಾರತ ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದೆ ಎಂಬುದಕ್ಕೆ ತಮ್ಮ ಬಳಿ ಪುರಾವೆಗಳಿವೆ, ಆದರೆ ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಆರೋಪಗಳನ್ನು ಬೆಂಬಲಿಸಲು ಭಾರತವು ಯಾವುದೇ ದೃಢವಾದ ಪುರಾವೆಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ
ಬನ್ನೇರುಘಟ್ಟ ಜೂ, ಸಫಾರಿಗೆ ಆನ್​ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಎಚ್ಚರ
‘ಭಾರತವನ್ನು ದ್ವೇಷಿಸುತ್ತೇನೆ’: ವೈದ್ಯೆ ಅಫೀಫ ಫಾತಿಮಾ ದೇಶ ವಿರೋಧಿ ಪೋಸ್ಟ್
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ಸೌಲಭ್ಯ
ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆನ್​ಲೈನ್ ವಂಚನೆ: ಎಚ್ಚರದಿಂದಿರಿ

ಭಾರತವು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿದೆ ಮತ್ತು ಪಾಕಿಸ್ತಾನದ ಸಾರ್ವಭೌಮತ್ವವನ್ನು ದುರ್ಬಲಗೊಳಿಸಲು ಭಯೋತ್ಪಾದಕ ಜಾಲಗಳನ್ನು ನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದರು. ಪಾಕಿಸ್ತಾನದೊಳಗೆ ನೆಲಬಾಂಬ್‌ಗಳು (ಐಇಡಿಗಳು), ಸ್ಫೋಟಕಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ಮೂಲಕ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ಮಾಡಲು ಭಯೋತ್ಪಾದಕರನ್ನು ಪ್ರಚೋದಿಸುತ್ತಿದೆ ಎಂದು ಐಎಸ್‌ಪಿಆರ್ ಡಿಜಿ ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಪಹಲ್ಗಾಮ್​ ದಾಳಿ: ಉಗ್ರರಲ್ಲಿ ಒಬ್ಬ ಪಾಕಿಸ್ತಾನ ಸೇನೆಯ ಮಾಜಿ ಕಮಾಂಡೋ

ಈ ಪುರಾವೆಗಳು ದೀರ್ಘಕಾಲದ ಪಾಕಿಸ್ತಾನ ವಿರೋಧಿ ನೀತಿಯ ಭಾಗವಾಗಿದ್ದು, ಇದು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯ ರೂಪದಲ್ಲಿ ಬಹಿರಂಗಗೊಳ್ಳುತ್ತಿದೆ ಎಂದು ಅವರು ಹೇಳಿದರು. ಸುಳ್ಳು ಆರೋಪದ ನಂತರ, ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ಮೂಲಕ, ವೀಸಾಗಳನ್ನು ರದ್ದುಗೊಳಿಸುವ ಮೂಲಕ ಮತ್ತು ವಾಘಾ-ಅಟ್ಟಾರಿ ಗಡಿಯನ್ನು ಮುಚ್ಚುವ ಮೂಲಕ ಏಕಪಕ್ಷೀಯ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

ಅಂತಹ ಪರಿಸ್ಥಿತಿಯಲ್ಲಿ, ಅಗತ್ಯ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ಭಾರತೀಯ ರಾಜತಾಂತ್ರಿಕರು ಮತ್ತು ಮಿಲಿಟರಿ ಸಲಹೆಗಾರರನ್ನು ದೇಶವನ್ನು ತೊರೆಯುವಂತೆ ಆದೇಶಿಸಿತು. ಭಾರತೀಯ ನಾಗರಿಕರ ವೀಸಾಗಳನ್ನು ರದ್ದುಗೊಳಿಸಲಾಗಿದೆ. ಆದಾಗ್ಯೂ, ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಸಿಖ್ ಯಾತ್ರಿಕರಿಗೆ ಇದರಿಂದ ವಿನಾಯಿತಿ ನೀಡಿದ್ದೇವೆ ಎಂದು ಲೆಫ್ಟಿನೆಂಟ್ ಜನರಲ್ ಚೌಧರಿ ಹೇಳಿದ್ದಾರೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಯ ಹೊಣೆಯಲ್ಲಿ ಲಷ್ಕರ್​ ಎ ತೊಯ್ಬಾದ ಟಿಆರ್​ಎಫ್​ ಹೊತ್ತುಕೊಂಡಿತ್ತು. ಬಳಿಕ ತನ್ನ ವರಸೆಯನ್ನು ಬದಲಿಸಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ