ಪಾಕಿಸ್ತಾನ: ಗುರುತಿನ ಚೀಟಿ ತಪಾಸಣೆ ನೆಪದಲ್ಲಿ ಬಸ್ಸಿಂದ ಇಳಿಸಿ 23 ಪ್ರಯಾಣಿಕರ ಗುಂಡಿಕ್ಕಿ ಹತ್ಯೆ
ಬಂದೂಕುಧಾರಿಗಳು ಬಸ್ಸಿನಂದ ಜನರನ್ನು ಕೆಳಗಿಳಿಸಿ ಗುರುತಿನ ಚೀಟಿ ತಪಾಸಣೆ ನೆಪದಲ್ಲಿ 23 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಲೂಚಿಸ್ತಾನದಲ್ಲಿ ನಡೆದಿದೆ. ಆಕ್ರಮಣಕಾರರು ಅಂತರ-ಪ್ರಾಂತೀಯ ಬಸ್‌ಗಳು ಮತ್ತು ಟ್ರಕ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಪ್ರಯಾಣಿಕರನ್ನು ಗೆಳಗಿಳಿಸಿ ಗುರುತಿನ ಚೀಟಿ ಪರಿಶೀಲಿಸಿ ಗುಂಡಿನ ಸುರಿಮಳೆಗೈದಿದ್ದಾರೆ.
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ 23 ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಬಸ್ ನಿಲ್ಲಿಸಿ ಗುರುತಿನ ಚೀಟಿ ತಪಾಸಣೆ ನೆಪದಲ್ಲಿ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿದ ಬಂದೂಕುಧಾರಿಗಳು 23 ಪ್ರಯಾಣಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದಾರೆ.
ಆಕ್ರಮಣಕಾರರು ಅಂತರ-ಪ್ರಾಂತೀಯ ಬಸ್‌ಗಳು ಮತ್ತು ಟ್ರಕ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಪ್ರಯಾಣಿಕರನ್ನು ಗೆಳಗಿಳಿಸಿ ಗುರುತಿನ ಚೀಟಿ ಪರಿಶೀಲಿಸಿ ಗುಂಡಿನ ಸುರಿಮಳೆಗೈದಿದ್ದಾರೆ. ರಾರಶಮ್ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಪುರುಷರು ಹೆದ್ದಾರಿಯನ್ನು ತಡೆದು, ವಾಹನಗಳನ್ನು ಅಡ್ಡಿಪಡಿಸಿದರು ಮತ್ತು ಪ್ರಯಾಣಿಕರನ್ನು ಕೆಳಗಿಳಿಸಿದ್ದರು. ಮೃತರೆಲ್ಲರೂ ಎಲ್ಲರೂ ಪಂಜಾಬ್‌ನ ನಿವಾಸಿಗಳು ಎಂದು ಗುರುತಿಸಲಾಗಿದೆ.
ಹತ್ಯೆಯ ನಂತರ, ದಾಳಿಕೋರರು ಸ್ಥಳದಿಂದ ಪಲಾಯನ ಮಾಡುವ ಮೊದಲು ಹತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಹೆಚ್ಚಿನ ತನಿಖೆಗಾಗಿ ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಕರೆದಿದ್ದಾರೆ.
#Breaking:𝟐𝟑 𝐈𝐧𝐧𝐨𝐜𝐞𝐧𝐭 𝐏𝐚𝐬𝐬𝐞𝐧𝐠𝐞𝐫𝐬 𝐟𝐫𝐨𝐦 (𝐏𝐮𝐧𝐣𝐚𝐛)𝐒𝐡𝐨𝐭 𝐃𝐞𝐚𝐝’𝐀𝐟𝐭𝐞𝐫 𝐀𝐫𝐦𝐞𝐝 𝐌𝐞𝐧 𝐁𝐥𝐨𝐜𝐤 𝐇𝐢𝐠𝐡𝐰𝐚𝐲 𝐚𝐭 𝐑𝐚𝐫𝐚 𝐒𝐡𝐢𝐦, 𝐁𝐮𝐫𝐧 𝟏𝟎 𝐕𝐞𝐡𝐢𝐜𝐥𝐞𝐬 𝐢𝐧 𝐁𝐚𝐥𝐨𝐜𝐡𝐢𝐬𝐭𝐚𝐧 23 people were shot and killed 1/2#Balochistan pic.twitter.com/GBkRWFoO1z
— Mansoor Ali (@MansoorAli077) August 26, 2024
ಪಂಜಾಬ್‌ನ ಜನರನ್ನು ಗುರಿಯಾಗಿಸಿಕೊಂಡು ಇದೇ ರೀತಿಯ ದಾಳಿ ನಡೆದ ಸುಮಾರು ನಾಲ್ಕು ತಿಂಗಳ ನಂತರ ಮುಸಾಖೆಲ್ ದಾಳಿ ನಡೆದಿದೆ. ಏಪ್ರಿಲ್‌ನಲ್ಲಿ, ನೋಶ್ಕಿ ಬಳಿ ಒಂಬತ್ತು ಪ್ರಯಾಣಿಕರನ್ನು ಬಸ್‌ನಿಂದ ಇಳಿಸಲಾಯಿತು ಮತ್ತು ಅವರ ಗುರುತಿನ ಚೀಟಿಗಳನ್ನು ನೋಡಿದ ನಂತರ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದರು.
ಮತ್ತಷ್ಟು ಓದಿ: ರಿಯಾಸಿಯಲ್ಲಿ ನಡೆದ ಉಗ್ರ ದಾಳಿ ಹಿಂದಿದೆ ಪಾಕಿಸ್ತಾನದ ಈ ಭಯೋತ್ಪಾದಕ ಗುಂಪಿನ ಕೈವಾಡ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಲೂಚಿಸ್ತಾನದ ಕೆಚ್ ಜಿಲ್ಲೆಯ ಟರ್ಬತ್‌ನಲ್ಲಿ ಪಂಜಾಬ್‌ನ ಆರು ಕಾರ್ಮಿಕರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದರು. ಎಲ್ಲರೂ ದಕ್ಷಿಣ ಪಂಜಾಬ್‌ನ ವಿವಿಧ ಪ್ರದೇಶಗಳಿಂದ ಬಂದವರು.
At least 23 people from Punjab have been killed in Balochistan’s Musakhel district after BLA terrorists offloaded passengers from trucks and buses and shot at them after checking their identities : Security forces
Operation against terrorist still continues in #Balochistan. pic.twitter.com/PAaOCkoWNR
— Malik Ali Raza (@MalikAliiRaza) August 26, 2024
ಇದೇ ರೀತಿಯ ಘಟನೆ 2015 ರಲ್ಲಿ ನಡೆದಿತ್ತು, ಮುಂಜಾನೆ ಟರ್ಬತ್ ಬಳಿ ಕಾರ್ಮಿಕರ ಶಿಬಿರದ ಮೇಲೆ ಬಂದೂಕುಧಾರಿಗಳು ದಾಳಿ ಮಾಡಿದ್ದರಿಂದ 20 ಕಟ್ಟಡ ಕಾರ್ಮಿಕರು ಸಾವನ್ನಪ್ಪಿದರು. ಎಲ್ಲರೂ ಸಿಂಧ್, ಪಂಜಾಬ್ ಪ್ರಾಂತ್ಯದವರಾಗಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ