ಪಾಕಿಸ್ತಾನದಲ್ಲಿ ಗುಂಡಿನ ಚಕಮಕಿ, ಸೇನಾ ನಾಯಕ ಸಾವು ಹಾಗೂ 10 ಉಗ್ರರ ಹತ್ಯೆ

ಪಾಕಿಸ್ತಾನದ ಖೈಬರ್ ಫಖ್ತುಂಖ್ವಾದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಪಾಕಿಸ್ತಾನದ ಸೇನಾ ನಾಯಕ ಸಾವನ್ನಪ್ಪಿದ್ದು, 10 ಉಗ್ರರು ಕೂಡ ಹತರಾಗಿದ್ದಾರೆ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಂಘಟನೆಗೆ ಸೇರಿದ ಕನಿಷ್ಠ 10 ಉಗ್ರರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನಿ ಸೇನಾ ಕ್ಯಾಪ್ಟನ್ ಕೂಡ ಸಾವನ್ನಪ್ಪಿದ್ದಾರೆ.

ಪಾಕಿಸ್ತಾನದಲ್ಲಿ  ಗುಂಡಿನ ಚಕಮಕಿ, ಸೇನಾ ನಾಯಕ ಸಾವು ಹಾಗೂ 10 ಉಗ್ರರ ಹತ್ಯೆ
ಪಾಕಿಸ್ತಾನ ಸೇನಾ ಕ್ಯಾಪ್ಟನ್
Image Credit source: X

Updated on: Mar 21, 2025 | 11:47 AM

ಇಸ್ಲಾಮಾಬಾದ್, ಮಾರ್ಚ್​ 21: ಪಾಕಿಸ್ತಾನದ ಖೈಬರ್ ಫಖ್ತುಂಖ್ವಾದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಪಾಕಿಸ್ತಾನದ ಸೇನಾ ನಾಯಕ ಹಸ್ನೈನ್ ಅಖ್ತರ್ ಸಾವನ್ನಪ್ಪಿದ್ದು, 10 ಉಗ್ರರು ಕೂಡ ಹತರಾಗಿದ್ದಾರೆ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಂಘಟನೆಗೆ ಸೇರಿದ ಕನಿಷ್ಠ 10 ಉಗ್ರರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನಿ ಸೇನಾ ಕ್ಯಾಪ್ಟನ್ ಕೂಡ ಮೃತಪಟ್ಟಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ದಕ್ಷಿಣ ವಜೀರಿಸ್ತಾನದ ಗಡಿಯಲ್ಲಿರುವ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಕರ್ರಿ ಮಲಾಂಗ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನ ಸೇನೆಯ ಪ್ರಕಾರ, ಕಾರ್ಯಾಚರಣೆಯಲ್ಲಿ ಇನ್ನೂ ಮೂವರು ಸೈನಿಕರು ಗಾಯಗೊಂಡಿದ್ದಾರೆ.  ಪಾಕಿಸ್ತಾನ ಸರಣಿ ಭಯೋತ್ಪಾದಕ ದಾಳಿ ಎದುರಿಸುತ್ತಿದೆ. ಇತ್ತೀಚೆಗೆ, ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ರೈಲು ಅಪಹರಣ ಘಟನೆಯು ಕೋಲಾಹಲವನ್ನು ಸೃಷ್ಟಿಸಿತ್ತು. ಇದರಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) 400 ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಯಾಣಿಕರು ಸೇರಿದಂತೆ ಇಡೀ ರೈಲನ್ನು ಅಪಹರಿಸಿತ್ತು.

ಘಟನೆಯ ಬಗ್ಗೆ ಬಿಎಲ್‌ಎಎ ಮತ್ತು ಪಾಕಿಸ್ತಾನ ಸೇನೆಯಿಂದ ವಿಭಿನ್ನ ಹೇಳಿಕೆಗಳು ಬಂದಿದ್ದವು. ಪಾಕಿಸ್ತಾನ ಸೇನೆಯು 33 ಭಯೋತ್ಪಾದಕರನ್ನು ಕೊಂದು ಬಹುತೇಕ ಎಲ್ಲಾ ಒತ್ತೆಯಾಳುಗಳನ್ನು ರಕ್ಷಿಸಿದೆ ಎಂದು ಹೇಳಿತ್ತು. ಕೆಲವೇ ಒತ್ತೆಯಾಳುಗಳು ಮಾತ್ರ ಕೊಲ್ಲಲ್ಪಟ್ಟರು. 214 ಒತ್ತೆಯಾಳುಗಳೊಂದಿಗೆ ಹಲವಾರು ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಬಿಎಲ್‌ಎ ಹೇಳಿಕೊಂಡಿದೆ.

ಇದನ್ನೂ ಓದಿ
ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ; ಇಸ್ಲಾಮಿಕ್ ನಾಯಕ ಸೇರಿದಂತೆ ಮೂವರಿಗೆ ಗಾಯ
ಪಾಕಿಸ್ತಾನದ ರೈಲು ಹೈಜಾಕ್; ಉಗ್ರರಿಂದ 50 ಒತ್ತೆಯಾಳುಗಳ ಹತ್ಯೆ
ಪಾಕ್​​ ವಾಯುನೆಲೆಯ ಮೇಲೆ ಉಗ್ರರ ದಾಳಿ, ಒಟ್ಟು ಆರು ಸಾವು, ಇಲ್ಲಿದೆ ವಿಡಿಯೋ
ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದು 21 ವರ್ಷ; ಭಾರತ-ಪಾಕ್ ಸಂಬಂಧ ಈಗ ಹೇಗಿದೆ?

ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಮಾಡಿದ 27 ಉಗ್ರರ ಹತ್ಯೆ, 155 ಒತ್ತೆಯಾಳುಗಳ ರಕ್ಷಣೆ

ಖೈಬರ್ ಪಖ್ತುಂಖ್ವಾದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಈ ಎನ್‌ಕೌಂಟರ್ ನಡೆದಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಈ ಸಂದರ್ಭದಲ್ಲಿ, ನಿಷೇಧಿತ ಸಂಘಟನೆಗೆ ಸೇರಿದ ಕನಿಷ್ಠ 10 ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಸೇನೆಯ ಕ್ಯಾಪ್ಟನ್ ಕೊಲ್ಲಲ್ಪಟ್ಟರು.

ಪಾಕಿಸ್ತಾನ ಸಶಸ್ತ್ರ ಪಡೆಗಳ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಈ ಮಾಹಿತಿಯನ್ನು ನೀಡಿದೆ. ಈ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಬಂದ ನಂತರ ಗುರುವಾರ ಗುಪ್ತಚರ ಆಧಾರಿತ ಕಾರ್ಯಾಚರಣೆ (ಐಬಿಒ) ಪ್ರಾರಂಭಿಸಲಾಯಿತು ಎಂದು ಸೇನೆ ತಿಳಿಸಿದೆ.

ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶಪಡಿಸಿಕೊಳ್ಳಲಾಗಿದೆ
ಭೀಕರ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ನಾಯಕ ಹಸ್ನೈನ್ ಅಖ್ತರ್ ಸಾವನ್ನಪ್ಪಿದರು. ಹತ್ಯೆಗೀಡಾದ ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಎಸ್‌ಪಿಆರ್ ತಿಳಿಸಿದೆ. ಈ ಭಯೋತ್ಪಾದಕರು ವಿವಿಧ ಕಾನೂನು ಜಾರಿ ಸಂಸ್ಥೆಗಳ ವಿರುದ್ಧ ಹಲವಾರು ದಾಳಿಗಳನ್ನು ನಡೆಸುವುದರ ಜೊತೆಗೆ ಅಮಾಯಕ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು.

ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿದೆ ಮತ್ತು ದೇಶದಿಂದ ಭಯೋತ್ಪಾದನೆಯ ಬೆದರಿಕೆಯನ್ನು ತೊಡೆದುಹಾಕಲು ಭದ್ರತಾ ಪಡೆಗಳು ಬದ್ಧವಾಗಿವೆ ಎಂದು ಅವರು ಹೇಳಿದರು. 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿದೆ. ಕಾನೂನು ಜಾರಿ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ, ವಿಶೇಷವಾಗಿ ಖೈಬರ್ ಪಖ್ತುಂಖ್ವಾದಲ್ಲಿ ಮತ್ತು ಬಲೂಚಿಸ್ತಾನದ ಗಡಿ ಪ್ರಾಂತ್ಯಗಳಲ್ಲಿ ದಾಳಿಗಳು ಹೆಚ್ಚಾಗಿವೆ.

ಕಳೆದ ವರ್ಷಗಳಿಗೆ ಹೋಲಿಸಿದರೆ 2025ರಲ್ಲಿ ಪಾಕಿಸ್ತಾನದಲ್ಲಿ ಉಗ್ರರ ದಾಳಿಗಳಲ್ಲಿ ಶೇ.42ರಷ್ಟು ಹೆಚ್ಚಾಗಿದೆ. ಈ ತಿಂಗಳಲ್ಲಿ ದೇಶಾದ್ಯಂತ 74 ಭಯೋತ್ಪಾದಕ ದಾಳಿಗಳು ನಡೆದಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:41 am, Fri, 21 March 25