ಭಾರತಕ್ಕೆ ಹೆದರಿದ್ದಾರೆ ಪಾಕ್ ಸೇನಾ ಮುಖ್ಯಸ್ಥ; ವೈರಲ್ ಆಯ್ತು ಅಸಿಮ್ ಮುನೀರ್ ವಿಡಿಯೋ
ಪಾಕಿಸ್ತಾನದ ಜನರು ದಾಳಿಯ ಭಯದಿಂದ ಅಸಿಮ್ ಮುನೀರ್ ಬಂಕರ್ ಒಳಗೆ ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳುವ ಹಂತಕ್ಕೆ ಅಲ್ಲಿನ ಪರಿಸ್ಥಿತಿ ತೀವ್ರಗೊಂಡಿದೆ. ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜಿಯಾ ಉಲ್ ಹಕ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ನೆನಪುಗಳನ್ನು ಪದೇ ಪದೇ ಚರ್ಚಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಅದರ ನಡುವೆ ಅಸಿಮ್ ಮುನೀರ್ ಅವರ ಈ ವರ್ತನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇಸ್ಲಮಾಬಾದ್, ಡಿಸೆಂಬರ್ 29: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ (Asim Munir) ಭಾರತಕ್ಕೆ ಹೆದರಿದ್ದಾರೆ. ಭಾರತದಿಂದ ಭಯಭೀತರಾಗಿರುವ ಅವರು ಗುಂಡು ನಿರೋಧಕ ಗೇರ್ ಮತ್ತು ಗಾಜಿನ ಬಾಕ್ಸ್ನೊಳಗೆ ನಿಂತು ಭಾಷಣ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನಿರಂತರ ಭಯದಲ್ಲಿ ಬದುಕುತ್ತಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದಲ್ಲಿ ವೈರಲ್ ಆಗುತ್ತಿರುವ ಸಾಮಾಜಿಕ ಮಾಧ್ಯಮದ ಪೋಸ್ಟ್ಗಳ ಪ್ರಕಾರ, ಅಸಿಮ್ ಮುನೀರ್ ತುಂಬಾ ಭಯಗೊಂಡಿದ್ದಾರೆ.
ಇದರಿಂದಲೇ ಅವರು ಮುಂಭಾಗದಿಂದ ಹಿಂದಕ್ಕೆ ಆವರಿಸುವ ಗುಂಡು ನಿರೋಧಕ ಜಾಕೆಟ್ ಧರಿಸದೆ ಯಾರನ್ನೂ ಭೇಟಿಯಾಗುವುದಿಲ್ಲ. ಸೇನಾ ಪ್ರಧಾನ ಕಚೇರಿಯ ಒಳಗೆ ಸಹ, ಅವರು ಸಭೆಗಳ ಸಮಯದಲ್ಲಿ ಗುಂಡು ನಿರೋಧಕ ಗಾಜಿನ ಪರದೆಯ ಹಿಂದೆ ಕುಳಿತುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ತಮ್ಮ ದೇಶದ ಸೇನಾ ಮುಖ್ಯಸ್ಥರು ಅಂತಹ ಭಯದಲ್ಲಿ ವಾಸಿಸುತ್ತಿರುವ ದೃಶ್ಯವು ಪಾಕಿಸ್ತಾನಿ ನಾಗರಿಕರಲ್ಲಿ ಕೋಪ ಮತ್ತು ಅಪಹಾಸ್ಯವನ್ನು ಉಂಟುಮಾಡಿದೆ. ನಮ್ಮ ದೇಶದೊಳಗೇ ಈ ರೀತಿ ಹೆದರುತ್ತಾ ಬದುಕುತ್ತಿರುವ ಇವರು ಭಾರತವನ್ನು ಹೇಗೆ ಎದುರಿಸುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.
Asim Munir addresses his own corp commanders hiding behind bullet proof glass. You can see the reflection in the video🤣🤣
Which military commander is scared of his own subordinates. Apparently the great brave Pakistani general is scared of his own corp commanders🤣🤣 pic.twitter.com/41xAXdzmyz
— Vajra (@BholeNath_wasi) December 28, 2025
ಇದನ್ನೂ ಓದಿ: ಭಾರತದ ಆಪರೇಷನ್ ಸಿಂಧೂರ್ ವೇಳೆ ನೂರ್ ಖಾನ್ ವಾಯುನೆಲೆಗೆ ಹಾನಿ; ಒಪ್ಪಿಕೊಂಡ ಪಾಕಿಸ್ತಾನ
ಪಾಕಿಸ್ತಾನದ ಸೇನಾ ಪ್ರಧಾನ ಕಚೇರಿಯ ಒಳಗಿನಿಂದ ಅಸಿಮ್ ಮುನೀರ್ ಪಾಕಿಸ್ತಾನಿ ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊ ಪಾಕಿಸ್ತಾನಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಗುಂಡು ನಿರೋಧಕ ಗಾಜಿನ ಶೀಟ್ ಹಿಂದೆ ಕುಳಿತು ಮಾತನಾಡುತ್ತಿರುವುದು ಕಂಡುಬರುತ್ತದೆ. ಪತ್ರಕರ್ತರಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಅನೇಕ ಪಾಕಿಸ್ತಾನಿಗಳು ಈಗ ಮುನೀರ್ ಅವರನ್ನು ಭಯಭೀತ ಫೀಲ್ಡ್ ಮಾರ್ಷಲ್ ಎಂದು ಕರೆಯುತ್ತಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




