ಬಲೂಚಿಸ್ತಾನದಲ್ಲಿ ಸಂಭವಿಸಿದ ಎರಡು ಆತ್ಮಹತ್ಯಾ ಬಾಂಬ್ ಸ್ಫೋಟಗಳಿಗೆ ಭಾರತವೇ ಕಾರಣ ಎಂದ ಪಾಕಿಸ್ತಾನ

ಬಲೂಚಿಸ್ತಾನದಲ್ಲಿ ಶುಕ್ರವಾರ ನಡೆದ ಎರಡು ಆತ್ಮಹತ್ಯಾ ಬಾಂಬ್ ಸ್ಫೋಟಗಳಲ್ಲಿ ಭಾರತದ ಗುಪ್ತಚರ ಸಂಸ್ಥೆ ಭಾಗಿಯಾಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ವಾಸ್ತವವಾಗಿ, ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸಲು ಜನರು ಗುಂಪು ಸೇರುತ್ತಿದ್ದಾಗ ಬಲೂಚಿಸ್ತಾನದ ಮಸ್ತಂಗ್ ಜಿಲ್ಲೆಯ ಮಸೀದಿಯ ಬಳಿ ಸ್ಫೋಟ ಸಂಭವಿಸಿದೆ. ಕೆಲವು ಗಂಟೆಗಳ ನಂತರ, ಖೈಬರ್ ಪಖ್ತುಂಖ್ವಾದ ಹಂಗುವಿನ ದೋಬಾ ಪೊಲೀಸ್ ಠಾಣೆ ಬಳಿಯ ಮಸೀದಿಯೊಳಗೆ ಸ್ಫೋಟ ಸಂಭವಿಸಿದೆ.

ಬಲೂಚಿಸ್ತಾನದಲ್ಲಿ ಸಂಭವಿಸಿದ ಎರಡು ಆತ್ಮಹತ್ಯಾ ಬಾಂಬ್ ಸ್ಫೋಟಗಳಿಗೆ ಭಾರತವೇ ಕಾರಣ ಎಂದ ಪಾಕಿಸ್ತಾನ
ಆತ್ಮಹತ್ಯಾ ಬಾಂಬ್ ದಾಳಿ
Image Credit source: IndiaToday

Updated on: Oct 01, 2023 | 10:59 AM

ಬಲೂಚಿಸ್ತಾನದಲ್ಲಿ ಶುಕ್ರವಾರ ನಡೆದ ಎರಡು ಆತ್ಮಹತ್ಯಾ ಬಾಂಬ್ ಸ್ಫೋಟ(Bomb Blast)ಗಳಲ್ಲಿ ಭಾರತದ ಗುಪ್ತಚರ ಸಂಸ್ಥೆ ಭಾಗಿಯಾಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ವಾಸ್ತವವಾಗಿ, ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸಲು ಜನರು ಗುಂಪು ಸೇರುತ್ತಿದ್ದಾಗ ಬಲೂಚಿಸ್ತಾನದ ಮಸ್ತಂಗ್ ಜಿಲ್ಲೆಯ ಮಸೀದಿಯ ಬಳಿ ಸ್ಫೋಟ ಸಂಭವಿಸಿದೆ. ಕೆಲವು ಗಂಟೆಗಳ ನಂತರ, ಖೈಬರ್ ಪಖ್ತುಂಖ್ವಾದ ಹಂಗುವಿನ ದೋಬಾ ಪೊಲೀಸ್ ಠಾಣೆ ಬಳಿಯ ಮಸೀದಿಯೊಳಗೆ ಸ್ಫೋಟ ಸಂಭವಿಸಿದೆ.

ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ಪಾಕಿಸ್ತಾನದ ಗೃಹ ಸಚಿವ ಸರ್ಫರಾಜ್ ಬುಗ್ತಿ ಅವರು ಆತ್ಮಾಹುತಿ ದಾಳಿಯಲ್ಲಿ ಭಾರತದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RAW) ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಬಾಂಬ್‌ನ ಡಿಎನ್‌ಎಯನ್ನು ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಅಪರಿಚಿತ ದಾಳಿಕೋರನ ವಿರುದ್ಧ ಕೊಲೆ ಮತ್ತು ಭಯೋತ್ಪಾದನೆಯ ಆರೋಪಗಳೊಂದಿಗೆ ಎಫ್‌ಐಆರ್ ದಾಖಲಿಸಲಾಗಿದೆ.

ಯಾವುದೇ ಗುಂಪು ಇಲ್ಲಿಯವರೆಗೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದಾಗ್ಯೂ, ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಶುಕ್ರವಾರದ ಸ್ಫೋಟದಲ್ಲಿ ತಾವು ಭಾಗಿಯಾಗಿಲ್ಲ ಎಂದು ವರದಿ ಹೇಳಿದೆ. ಘಟನೆಯ ಕುರಿತು ತನಿಖೆ ಮುಂದುವರೆದಿದೆ ಮತ್ತು ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.

ಮತ್ತಷ್ಟು ಓದಿ: Balochistan Bomb Blast:ಬಲೂಚಿಸ್ತಾನದ ಮಸೀದಿ ಬಳಿ ಬಾಂಬ್ ಸ್ಫೋಟ, 20ಕ್ಕೂ ಅಧಿಕ ಮಂದಿ ಸಾವು, ಹಲವರಿಗೆ ಗಾಯ

ಮಸೀದಿ ಬಳಿ ಪ್ರಬಲ ಬಾಂಬ್ ಸ್ಫೋಟಗೊಂಡಿದೆ. ಕನಿಷ್ಠ 58 ಜನರು ಸಾವನ್ನಪ್ಪಿದರು ಮತ್ತು 100 ಜನರು ಗಾಯಗೊಂಡರು. ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ, ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸಲು ಜನರು ರ್ಯಾಲಿಗಾಗಿ ಸೇರಿದ್ದಾಗ ಸ್ಫೋಟ ಸಂಭವಿಸಿದೆ. ಮಸ್ತುಂಗ್ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿದೆ.

ಈ ಮಧ್ಯೆ, ಖೈಬರ್ ಪಖ್ತುಂಖ್ವಾದ ಹಂಗುವಿನ ದೋಬಾ ಪೊಲೀಸ್ ಠಾಣೆ ಬಳಿಯ ಮಸೀದಿಯೊಳಗೆ ಸ್ಫೋಟ ಸಂಭವಿಸಿದೆ. ಈ ಅವಧಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದರು, 12 ಮಂದಿ ಗಾಯಗೊಂಡರು. ಸ್ಫೋಟದ ರಭಸಕ್ಕೆ ಮಸೀದಿಯ ಮೇಲ್ಛಾವಣಿ ಕುಸಿದಿದೆ. ಸುಮಾರು 30ರಿಂದ 40 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ದಾಳಿಯ ಹಿನ್ನೆಲೆಯಲ್ಲಿ ಬಲೂಚಿಸ್ತಾನದ ಉಸ್ತುವಾರಿ ಸರ್ಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us