ಬಲೂಚಿಸ್ತಾನ: ಶಾಲಾ ಬಸ್​ ಮೇಲೆ ಆತ್ಮಾಹುತಿ ಬಾಂಬ್ ದಾಳಿ, ನಾಲ್ವರು ಮಕ್ಕಳು ಸಾವು, 38 ಮಂದಿಗೆ ಗಾಯ

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಶಾಲಾ ಬಸ್​ ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ನಾಲ್ವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ, 38 ಮಂದಿಗೆ ಗಂಭೀರ ಗಾಯಗಳಾಗಿವೆ. ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದರೆ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಲೇ ಇರುತ್ತದೆ ಹೀಗಾಗಿ ಅನುಮಾನವು ಬಲೂಚ್ ಪ್ರತ್ಯೇಕವಾದಿಗಳ ಕಡೆಗೆ ಮೂಡುವುದು ಸಹಜ.

ಬಲೂಚಿಸ್ತಾನ: ಶಾಲಾ ಬಸ್​ ಮೇಲೆ ಆತ್ಮಾಹುತಿ ಬಾಂಬ್ ದಾಳಿ, ನಾಲ್ವರು ಮಕ್ಕಳು ಸಾವು, 38 ಮಂದಿಗೆ ಗಾಯ
ಬಸ್

Updated on: May 21, 2025 | 12:12 PM

ಬಲೂಚಿಸ್ತಾನ, ಮೇ 21: ಪಾಕಿಸ್ತಾನ(Pakistan)ದಲ್ಲಿ ಶಾಲಾ ಬಸ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಶಾಲಾ ಬಸ್​ಗೆ ಬಾಂಬ್​ ಇರಿಸಿದ್ದ ಕಾರು ಬಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಕ್ಕಳು ಸಜೀವ ದಹನವಾಗಿದ್ದಾರೆ. 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ಖುಜ್ದಾರ್ ಜಿಲ್ಲೆಯಲ್ಲಿ ಬಸ್​ವೊಂದು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ದಾಳಿ ನಡೆದಿದೆ. ಎಂದು ಸ್ಥಳೀಯ ಉಪ ಆಯುಕ್ತ ಯಾಸಿರ್ ಇಕ್ಬಾಲ್ ತಿಳಿಸಿದ್ದಾರೆ.

ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದರೆ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಲೇ ಇರುತ್ತದೆ ಹೀಗಾಗಿ ಅನುಮಾನವು ಬಲೂಚ್ ಪ್ರತ್ಯೇಕವಾದಿಗಳ ಕಡೆಗೆ ಮೂಡುವುದು ಸಹಜ.

ಇದನ್ನೂ ಓದಿ
ಸೇನಾ ಕಾರ್ಯಾಚರಣೆಯ ಲೈವ್ ಬೇಡ: ಟಿವಿ ಚಾನೆಲ್​ಗಳಿಗೆ ರಕ್ಷಣಾ ಇಲಾಖೆ ಸೂಚನೆ
ಪಾಕ್​ ಜನ ಪ್ರಧಾನಿ ಶೆಹಬಾಜ್ ವಿರುದ್ಧ ಗರಂ ಆಗಿದ್ದೇಕೆ?
ಭಾರತೀಯ ಸೇನೆ ದಾಳಿ ಮಾಡಿದ ಪಾಕಿಸ್ತಾನದ ನಗರಗಳ ಇತಿಹಾಸವೇನು ಗೊತ್ತೇ?
ಭಾರತದಿಂದ ಎರಡನೇ ಬಾರಿ ದಾಳಿ, ಅಕ್ಷರಶಃ ನಲುಗಿದ ಪಾಕ್, ಏನೇನಾಯ್ತು?

ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಕ್ಕಳ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅಪರಾಧಿಗಳನ್ನು ಮೃಗಗಳು ಎಂದು ಕರೆದಿದ್ದಾರೆ. ಮುಗ್ದ ಮಕ್ಕಳನ್ನುಗುರಿಯಾಗಿಸಿಕೊಂಡು ನಡೆಸಿರುವ ದಾಳಿ ಸಂಪೂರ್ಣ ಅನಾಗರಿಕತೆಯ ಕೃತ್ಯ ಎಂದಿದ್ದಾರೆ.

ಮತ್ತಷ್ಟು ಓದಿ: ಪಾಕಿಸ್ತಾನದ ಸೇನೆ ಮೇಲೆ ಬಲೂಚಿಸ್ತಾನ ಗ್ರೆನೇಡ್‌ ದಾಳಿ

ಬಲೂಚಿಸ್ತಾನ್ ದೀರ್ಘಕಾಲದ ದಂಗೆಯ ತಾಣವಾಗಿದ್ದು, 2019 ರಲ್ಲಿ ಯುನೈಟೆಡ್ ಸ್ಟೇಟ್ಸ್ ಭಯೋತ್ಪಾದಕ ಸಂಘಟನೆ ಎಂದು ಗೊತ್ತುಪಡಿಸಿದ ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಸೇರಿದಂತೆ ಪ್ರತ್ಯೇಕತಾವಾದಿ ಗುಂಪುಗಳು ಆಗಾಗ ದಾಳಿ ನಡೆಸುತ್ತಿರುತ್ತವೆ.

ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನ್ ಪ್ರಾಂತ್ಯದ ಕಿಲ್ಲಾ ಅಬ್ದುಲ್ಲಾ ನಗರದ ಮಾರುಕಟ್ಟೆಯ ಬಳಿ ಕಾರ್ ಬಾಂಬ್ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ. ಇಂತಹ ಹೆಚ್ಚಿನ ದಾಳಿಗಳ ಹೊಣೆಯನ್ನು ಬಿಎಲ್‌ಎ ಹೊತ್ತಿದ್ದು, ಪಾಕಿಸ್ತಾನವು ನೆರೆಯ ಭಾರತದ ಬೆಂಬಲವನ್ನು ಹೊಂದಿದೆ ಎಂದು ಹೇಳಿಕೊಳ್ಳುತ್ತದೆ.

ಮಾರ್ಚ್‌ನಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾದ ಬಿಎಲ್‌ಎ ದಂಗೆಕೋರರು ಬಲೂಚಿಸ್ತಾನದಲ್ಲಿ ನೂರಾರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲಿನ ಮೇಲೆ ನಡೆಸಿದ ದಾಳಿಯಲ್ಲಿ 33 ಜನರು ಸಾವನ್ನಪ್ಪಿದ್ದರು, ಅದರಲ್ಲಿ ಹೆಚ್ಚಿನವರು ಸೈನಿಕರಾಗಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:11 pm, Wed, 21 May 25