Pakistan Rupee: ಪಾಕಿಸ್ತಾನದ ಕರೆನ್ಸಿ ಮೌಲ್ಯ ದಾಖಲೆ ಕುಸಿತ; ಸಾಲಮನ್ನಾಕ್ಕಾಗಿ ವಿಶ್ವದೆದುರು ಮೊರೆಯಿಟ್ಟ ಸರ್ಕಾರ

Pakistan Currency: ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಪಾಕಿಸ್ತಾನ ಸರ್ಕಾರವು ಕರೆನ್ಸಿ ವಿನಿಮಯ ಕೇಂದ್ರಗಳ ಮೇಲಿನ ಹಿಡಿತ ಸಡಿಲಿಸಿದ ನಂತರದ ಹಠಾತ್ ಬೆಳವಣಿಗೆಯಲ್ಲಿ ಪಾಕಿಸ್ತಾನದ ಕರೆನ್ಸಿ ತನ್ನ ಮೌಲ್ಯ ಕಳೆದುಕೊಂಡಿತು.

Pakistan Rupee: ಪಾಕಿಸ್ತಾನದ ಕರೆನ್ಸಿ ಮೌಲ್ಯ ದಾಖಲೆ ಕುಸಿತ; ಸಾಲಮನ್ನಾಕ್ಕಾಗಿ ವಿಶ್ವದೆದುರು ಮೊರೆಯಿಟ್ಟ ಸರ್ಕಾರ
ಪಾಕಿಸ್ತಾನದ ಕರೆನ್ಸಿ ಮೌಲ್ಯ ಕಳೆದುಕೊಂಡಿದ್ದು, ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.
Follow us
TV9 Web
| Updated By: Digi Tech Desk

Updated on:Jan 27, 2023 | 12:12 PM

ಇಸ್ಲಾಮಾಬಾದ್: ಅಮೆರಿಕದ ಡಾಲರ್ (US dollar) ಎದುರು ಪಾಕಿಸ್ತಾನದ ಕರೆನ್ಸಿಯು ₹ 255ಕ್ಕೆ ಕುಸಿದಿದು (Pakistan Economic Crisis). ಇದು ಈವರೆಗಿನ ಗರಿಷ್ಠ ಕುಸಿತ ಎನಿಸಿದೆ. ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಪಾಕಿಸ್ತಾನ ಸರ್ಕಾರವು ಕರೆನ್ಸಿ ವಿನಿಮಯ ಕೇಂದ್ರಗಳ ಮೇಲಿನ ಹಿಡಿತ ಸಡಿಲಿಸಿದ ನಂತರದ ಹಠಾತ್ ಬೆಳವಣಿಗೆಯಲ್ಲಿ ಪಾಕಿಸ್ತಾನದ ಕರೆನ್ಸಿ ಮೌಲ್ಯ ಶೇ 10ರಷ್ಟು ಕಡಿಮೆಯಾಯಿತು. ಪಾಕಿಸ್ತಾನವು ಮತ್ತೊಮ್ಮೆ ವಿಶ್ವ ಹಣಕಾಸು ನಿಧಿ (International Monetary Fund – IMF) ಮತ್ತು ವಿಶ್ವ ಸಮುದಾಯದ ಎದುರು ಹೊಸ ಸಾಲ ಹಾಗೂ ಸಾಲಮನ್ನಾಕ್ಕಾಗಿ ಬೇಡಿಕೆಯಿಟ್ಟಿದೆ.

ಪಾಕಿಸ್ತಾನದಲ್ಲಿ ವಿದೇಶಿ ಕರೆನ್ಸಿಗಳನ್ನು ನಿರ್ವಹಿಸುವ ಕಂಪನಿಗಳು ಡಾಲರ್-ಪಾಕಿಸ್ತಾನಿ ರೂಪಾಯಿ ನಡುವಣ ವಿನಿಮಯ ಮೌಲ್ಯದ ಮೇಲಿನ ನಿಯಂತ್ರಣ ತೆಗೆದುಹಾಕಿದವು. ಮುಕ್ತ ಮಾರುಕಟ್ಟೆಯಲ್ಲಿ ಬೇಡಿಕೆ ಏಕಾಏಕಿ ಹೆಚ್ಚಾಗಿದ್ದರೆ ಡಾಲರ್ ಮೌಲ್ಯವು ಒಂದೇ ಸಮನೆ ಏರಿತು. ಒಂದೇ ದಿನದಲ್ಲಿ ಪಾಕಿಸ್ತಾನ ಕರೆನ್ಸಿ ₹ 24ರಷ್ಟು ಮೌಲ್ಯ ಕಳೆದುಕೊಂಡು, ₹ 255ಕ್ಕೆ ಮುಟ್ಟಿತು ಎಂದು ‘ಎಕ್ಸ್​ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ತನ್ನ ನೆರವು ಬೇಕಿದ್ದರೆ ಪಾಕಿಸ್ತಾನ ಸರ್ಕಾರವು ಕರೆನ್ಸಿ ಮೌಲ್ಯ ನಿರ್ಧರಿಸುವ ತನ್ನ ಅಧಿಕಾರವನ್ನು ಬಿಟ್ಟುಕೊಡಬೇಕು, ಮುಕ್ತ ಮಾರುಕಟ್ಟೆಯ ಆರ್ಥಿಕ ಶಕ್ತಿಗಳು ಕರೆನ್ಸಿ ಮೌಲ್ಯ ನಿರ್ಧರಿಸಬೇಕು ಎಂದು ವಿಶ್ವ ಹಣಕಾಸು ನಿಧಿಯ (ಐಎಂಎಫ್) ಷರತ್ತು ವಿಧಿಸಿತ್ತು. ಈ ಷರತ್ತು ಒಪ್ಪಿಕೊಂಡ ಬೆನ್ನಲ್ಲೇ ಕರೆನ್ಸಿ ಮೌಲ್ಯವು ವ್ಯಾಪಕವಾಗಿ ಕುಸಿದಿದೆ. ಪಾಕಿಸ್ತಾವು ಪ್ರಸ್ತು ಐಎಂಎಫ್​ನಿಂದ 6.5 ಶತಕೋಟಿ ಡಾಲರ್​ ಮೊತ್ತದಷ್ಟು ನೆರವು (ಸಾಲ ಅಥವಾ ಸಾಲದ ಹೊಂದಾಣಿಕೆ) ನಿರೀಕ್ಷಿಸುತ್ತಿದೆ.

ಪಾಕಿಸ್ತಾನವೇ ಐಎಂಎಫ್ ಕಳೆದ ವರ್ಷವೇ ಸಾಲಮನ್ನಾ ಘೋಷಿಸಿತ್ತು. ಆದರೆ ಹಣದ ಬಿಡುಗಡೆಯನ್ನು ತಡೆಹಿಡಿದಿತ್ತು. ಇದರಿಂದಾಗಿ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ಪಾಕಿಸ್ತಾನದಲ್ಲಿರುವ ವಿದೇಶಿ ಮೀಸಲು (forex reserve) ಪ್ರಮಾಣ ವ್ಯಾಪಕವಾಗಿ ಕುಸಿದ ಕಾರಣ ಆಹಾರ ಹಣದುಬ್ಬರ ಹೆಚ್ಚಾಯಿತು. ದೇಶದ ಕೆಲವೆಡೆ ಒಂದು ಗೋಧಿಹಿಟ್ಟನ್ನು ₹ 3,000ಕ್ಕೆ ಮಾರಲಾಗುತ್ತಿದೆ. ಆಹಾರಕ್ಕಾಗಿ ಜನರು ಕಿತ್ತಾಡುತ್ತಿರುವುದು, ಗೋಧಿ ಚೀಲ ತಂದ ಟ್ರಕ್​ಗಳ ಹಿಂದೆ ಓಡುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿದ್ಯುತ್ ವ್ಯತ್ಯಯದಿಂದಾಗಿ ಗ್ರಿಡ್ ಕುಸಿದಿದ್ದು ದೇಶವು ಕತ್ತಲೆಗೆ ಜಾರಿದೆ. ನಮಗೆ ಏನೂ ಮಾಡಲು ಆಗುತ್ತಿಲ್ಲ. ಎಲ್ಲರೂ ಸುಮ್ಮನೆ ಕುಳಿತಿದ್ದಾರೆ. ಯಾವುದೇ ಯಂತ್ರಗಳನ್ನು ಬಳಕೆ ಮಾಡಲು ಆಗುತ್ತಿಲ್ಲ ಎಂದು ಸಣ್ಣಪುಟ್ಟ ವರ್ಕ್​ಶಾಪ್ ನಡೆಸುವವರು ಅಲವತ್ತುಕೊಂಡಿದ್ದಾರೆ. ನಿರುದ್ಯೋಗ ಮತ್ತು ಹಣದುಬ್ಬರವನ್ನು ಈ ಬೆಳವಣಿಗೆ ಮತ್ತಷ್ಟು ಹೆಚ್ಚಿಸಿದೆ. ಬೆಲೆಯೇರಿಕೆ ಮತ್ತು ಹಣದುಬ್ಬರ ನಿಯಂತ್ರಿಸಲೆಂದು ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್ ಈ ವರ್ಷ ಬಡ್ಡಿದರಗಳನ್ನು ಏರಿಸಿತ್ತು. ಪ್ರಸ್ತುತ ಪಾಕಿಸ್ತಾನದ ಬಡ್ಡಿದರವು 24 ವರ್ಷಗಳ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: Pakistan Inflation: ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ಶೇ.500ರಷ್ಟು ದುಬಾರಿ, ಚಿಕನ್ ಬೆಲೆ ಗಗನಕ್ಕೆ

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 am, Fri, 27 January 23