Pakistan Inflation: ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ಶೇ.500ರಷ್ಟು ದುಬಾರಿ, ಚಿಕನ್ ಬೆಲೆ ಗಗನಕ್ಕೆ, ಇತರೆ ಅಗತ್ಯ ವಸ್ತುಗಳ ಬೆಲೆ ಕುರಿತು ಮಾಹಿತಿ ಇಲ್ಲಿದೆ

ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ, 2022ರಲ್ಲಿ ಉಂಟಾದ ಭಾರಿ ಪ್ರವಾಹದಿಂದ ಉಂಟಾದ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ಮೊದಲೇ ಹಣದುಬ್ಬರವು ದೊಡ್ಡ ಹೊಡೆತ ಕೊಟ್ಟಿದೆ.

Pakistan Inflation: ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ಶೇ.500ರಷ್ಟು ದುಬಾರಿ, ಚಿಕನ್ ಬೆಲೆ ಗಗನಕ್ಕೆ, ಇತರೆ ಅಗತ್ಯ ವಸ್ತುಗಳ ಬೆಲೆ ಕುರಿತು ಮಾಹಿತಿ ಇಲ್ಲಿದೆ
ಈರುಳ್ಳಿ ಹಾಗೂ ಕೋಳಿ
Follow us
| Updated By: ನಯನಾ ರಾಜೀವ್

Updated on: Jan 11, 2023 | 8:24 AM

ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ, 2022ರಲ್ಲಿ ಉಂಟಾದ ಭಾರಿ ಪ್ರವಾಹದಿಂದ ಉಂಟಾದ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ಮೊದಲೇ ಹಣದುಬ್ಬರವು ದೊಡ್ಡ ಹೊಡೆತ ಕೊಟ್ಟಿದೆ. ಜನವರಿ 6, 2022ರಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ 36.7 ರೂ ಇದ್ದಿದ್ದು, ಜನವರಿ 5 2023ರಷ್ಟೊತ್ತಿಗೆ 220.4 ರೂ. ಆಗಿದ್ದು ಬರೋಬ್ಬರಿ ಶೇ.501ರಷ್ಟು ಹೆಚ್ಚಿದೆ. ಇನ್ನು ಡೀಸೆಲ್ ಬೆಲೆ ಶೇ. 61 ರಷ್ಟು ಹೆಚ್ಚಾಗಿದ್ದರೆ, ಪೆಟ್ರೋಲ್ ಬೆಲೆ ಶೇ. 48ರಷ್ಟು ಏರಿಕೆಯಾಗಿದೆ. ಅಕ್ಕಿ, ಬೇಳೆಕಾಳುಗಳು, ಗೋಧಿ ಬೆಲೆ ಒಂದು ವರ್ಷದಲ್ಲಿ ಸುಮಾರು ಶೇ.50ರಷ್ಟು ಏರಿಕೆ ಕಂಡಿವೆ. ಒಂದು ಕೆಜಿ ಚಿಕನ್ ಬೆಲೆ 385 ರೂ ಆಗಿದ್ದು, ಶೇ. 85.5 ರಷ್ಟು ಹೆಚ್ಚಳವಾದಂತಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಪ್ರಕಾರ, ಪಾಕಿಸ್ತಾನದಲ್ಲಿ ಹಣದುಬ್ಬರವು 2021ರಲ್ಲಿ ಶೇ.12.3ರಷ್ಟಿದ್ದಿದ್ದು, ಡಿಸೆಂಬರ್ 2022ರಷ್ಟೊತ್ತಿಗೆ ಶೇ.24.5ಕ್ಕೆ ಅಂದರೆ ದ್ವಿಗುಣಗೊಂಡಿದೆ ಎಂದೇ ಹೇಳಬಹುದು. ಇನ್ನೊಂದೆಡೆ ಪಾಕಿಸ್ತಾನ ಸರ್ಕಾರ ಇಂಧನ ಉಳಿಸಲು ಮಾರುಕಟ್ಟೆ, ಮಾಲ್, ಮದುವೆ ಹಾಲ್‌ಗಳನ್ನು ಶೀಘ್ರವೇ ಮುಚ್ಚುವುದಾಗಿ ಘೋಷಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು, ಮಾರುಕಟ್ಟೆ ಹಾಗೂ ಮಾಲ್‌ಗಳನ್ನು ರಾತ್ರಿ 8:30ಕ್ಕೆ ಮುಚ್ಚಲಾಗುತ್ತದೆ. ಮದುವೆ ಮಂಟಪಗಳನ್ನು ರಾತ್ರಿ 10:00 ಗಂಟೆಗೆ ಮುಚ್ಚಲಾಗುತ್ತದೆ. ಈ ಕ್ರಮದಿಂದ ನಮಗೆ 60 ಶತಕೋಟಿ ರೂ. ಉಳಿತಾಯವಾಗುತ್ತದೆ ಎಂದು ತಿಳಿಸಿದ್ದರು.

ಇತ್ತೀಚೆಗೆ, ಪಾಕಿಸ್ತಾನವು ಪ್ರವಾಹ ಚೇತರಿಕೆಯ ನೆರವಿನ ರೂಪದಲ್ಲಿ ಶತಕೋಟಿ ಡಾಲರ್‌ಗಳನ್ನು ಸ್ವೀಕರಿಸಿದೆ. ಆದಾಗ್ಯೂ, ದೇಶದ ಆರ್ಥಿಕ ಪರಿಸ್ಥಿತಿಯು ಘೋರ ಸಂಕಟದಲ್ಲಿದ್ದು, ಶೀಘ್ರದಲ್ಲೇ ಹೆಚ್ಚಿನ ಹಣಕಾಸಿನ ನೆರವು ಬೇಕಾಗಬಹುದು.

ಮತ್ತಷ್ಟು ಓದಿ: Pakistan Crisis: ಪಾಕಿಸ್ತಾನದಲ್ಲಿ ಏಕಾಏಕಿ ಗೋಧಿ ಬೆಲೆಏರಿಕೆ; ವ್ಯಾಪಾರಿಗಳ ಆಟದಿಂದ ಸಂಕಷ್ಟಕ್ಕೆ ಸಿಲುಕಿದ ಸಾಮಾನ್ಯ ಜನ

ಆಹಾರ ಹಣದುಬ್ಬರ ದರವು ಡಿಸೆಂಬರ್ 2021 ರಲ್ಲಿ ಶೇಕಡಾ 11.7 ರಿಂದ ಡಿಸೆಂಬರ್ 2022 ರಲ್ಲಿ ಶೇಕಡಾ 32.7 ಕ್ಕೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಮತ್ತು ದೇಶವು ಕೇವಲ ಚಿಲ್ಲರೆ ಮಾರುಕಟ್ಟೆಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಪಾಕಿಸ್ತಾನದ ಸ್ಥೂಲ ಆರ್ಥಿಕ ಚಿತ್ರಣವೂ ಕಠೋರವಾಗಿದೆ.

ದೇಶದ ವಿದೇಶಿ ವಿನಿಮಯ ಮೀಸಲು 2021ರ ಡಿಸೆಂಬರ್​​ನಲ್ಲಿ USD 23.9 ಬಿಲಿಯನ್ ಆಗಿತ್ತು ಮತ್ತು 2022ರ ಡಿಸೆಂಬರ್​​ನಲ್ಲಿ ಕೇವಲ USD 11.4 ಶತಕೋಟಿಗೆ ಕುಸಿಯಿತು. ಪಾಕಿಸ್ತಾನದಲ್ಲಿ ಆರ್ಥಿಕತೆ ಕುಸಿಯುತ್ತಿರುವುದರಿಂದ ಈಗಾಗಲೇ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಇತ್ತೀಚೆಗಷ್ಟೇ ಹಿಟ್ಟಿನ ಬೆಲೆ ಏರಿಕೆಯನ್ನು ಕೂಡ ಜನ ಎದುರಿಸುತ್ತಿದ್ದಾರೆ. ಸರ್ಕಾರ ನಾಗಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಎಲ್​ಪಿಜಿ ಅಗತ್ಯಗಳನ್ನು ಪೂರೈಸಲು ಜನರಿಗೆ ಪ್ಲಾಸ್ಟಿಕ್ ಬ್ಯಾಗ್​ಗಳನ್ನು ಬಳಸುವಂತೆ ಒತ್ತಾಯಿಸಲಾಗುತ್ತಿದೆ.

ವಿದೇಶಿ ವಿನಿಮಯ ಏಕೆ ಮುಖ್ಯ? ವಿದೇಶಿ ವಿನಿಮಯವು ದೇಶವು ತನ್ನ ದೇಶೀಯ ಕರೆನ್ಸಿಯ ಮೌಲ್ಯವನ್ನು ಸ್ಥಿರ ದರದಲ್ಲಿ ಮತ್ತು ಡಾಲರ್‌ಗಿಂತ ಕಡಿಮೆ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದ್ರವ್ಯತೆಯನ್ನು ನಿರ್ವಹಿಸುತ್ತದೆ ಮತ್ತು ದೇಶದ ಅಂತಾರಾಷ್ಟ್ರೀಯ ಹಣಕಾಸು ಜವಾಬ್ದಾರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್