Pakistan Crisis: ಸರ್ಕಾರಿ ನೌಕರರ ಸಂಬಳ ಕಡಿತ, ಪೆಟ್ರೋಲ್ ಮೇಲೆ ಸುಂಕ ಹೆಚ್ಚಳ; ಪಾಕಿಸ್ತಾನಕ್ಕೆ ಕಠಿಣ ಷರತ್ತು ವಿಧಿಸಿದ ಐಎಂಎಫ್

IMF: ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಶೇ 17ರಷ್ಟು ಸರಕು ಸೇವಾ ಸುಂಕ (Goods and Services Tax - GST) ವಿಧಿಸಬೇಕು ಎಂಬ ಷರತ್ತನ್ನು ಪಾಕ್ ಸರ್ಕಾರವು ಈಗಾಗಲೇ ಒಪ್ಪಿದೆ.

Pakistan Crisis: ಸರ್ಕಾರಿ ನೌಕರರ ಸಂಬಳ ಕಡಿತ, ಪೆಟ್ರೋಲ್ ಮೇಲೆ ಸುಂಕ ಹೆಚ್ಚಳ; ಪಾಕಿಸ್ತಾನಕ್ಕೆ ಕಠಿಣ ಷರತ್ತು ವಿಧಿಸಿದ ಐಎಂಎಫ್
ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿದೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 05, 2023 | 8:45 AM

ಇಸ್ಲಾಮಾಬಾದ್: ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯು – ಐಎಂಎಫ್ (International Monetary Fund – IMF) ಹಣಕಾಸು ಬಿಕ್ಕಟ್ಟಿನಿಂದ ದಿವಾಳಿಯಾಗುವ ಸ್ಥಿತಿಗೆ ತಲುಪಿರುವ ಪಾಕಿಸ್ತಾನಕ್ಕೆ ಕಠಿಣ ಷರತ್ತುಗಳನ್ನು ವಿಧಿಸಿದೆ. ಷರತ್ತುಗಳಿಗೆ (Bailout Conditions) ಒಪ್ಪಿದರೆ ಮಾತ್ರ ತುರ್ತಾಗಿ ಬೇಕಿರುವ ಲಕ್ಷಾಂತರ ಡಾಲರ್​ ಒದಗಿಸಲಾಗುವುದು ಎಂಬ ಐಎಂಎಫ್ ಷರತ್ತಿನ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ವಿವರಿಸಿದ್ದಾರೆ. ಪಾಕಿಸ್ತಾನದ ಆರ್ಥಿಕ ವಿದ್ಯಮಾನದ ಕುರಿತ 10 ಮುಖ್ಯ ಬೆಳವಣಿಗೆಗಳು ಇಲ್ಲಿದೆ.

  1. ಪಾಕಿಸ್ತಾನದ ಆರ್ಥಿಕ ಸ್ಥಿತಿಗತಿಯ 9ನೇ ಪರಾಮರ್ಶೆ ನಡೆಸಿದ ಐಎಂಎಫ್ ಪ್ರತಿನಿಧಿಗಳು ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ದೇಶಕ್ಕೆ 1.1 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದಷ್ಟು ನೆರವು ಒದಗಿಸಲು ಒಪ್ಪಿದಿದೆ. ಆದರೆ ಈ ನೆರವಿಗೆ ಅರ್ಹತೆ ಪಡೆಯಲು ಪಾಕಿಸ್ತಾನವು ಸರ್ಕಾರದ ಆದಾಯ ಹೆಚ್ಚಿಸಲು ಒಂದಿಷ್ಟು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
  2. ಜಾರಿಗೊಳಿಸಬೇಕಿರುವ ಆರ್ಥಿಕ ಸುಧಾರಣೆ ಕ್ರಮಗಳ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಐಎಂಎಫ್ ಹಸ್ತಾಂತರಿಸಿದೆ. ಫೆಬ್ರುವರಿ 9ರ ಒಳಗೆ ಪಾಕಿಸ್ತಾನ ಸರ್ಕಾರದಲ್ಲಿ ಐಎಂಎಫ್ ಷರತ್ತು ಪಾಲನೆ ಕುರಿತು ಸಹಮತ ವ್ಯಕ್ತವಾದರೆ, ಐಎಂಎಫ್ ಮತ್ತು ಪಾಕ್ ಸರ್ಕಾರದ ಪ್ರತಿನಿಧಿಗಳೊಂದಿಗೆ ಒಪ್ಪಂದ ಏರ್ಪಡಲಿದೆ.
  3. ದೇಶದ ಆರ್ಥಿಕತೆಯನ್ನು ಸಮರ್ಪಕವಾಗಿ ನಿರ್ವಹಿಸುವ ಸಾಮರ್ಥ್ಯ ತನಗಿದೆ ಎಂದು ವಿಶ್ವ ಹಣಕಾಸು ಸಂಸ್ಥೆಗೆ ಪಾಕ್ ಸರ್ಕಾರ ಮನವರಿಕೆ ಮಾಡಿಕೊಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಒದಗಿಸಿದ ನೆರವನ್ನು ಪಾಕಿಸ್ತಾನವು ಸಮರ್ಪಕವಾಗಿ ಬಳಸುತ್ತದೆ ಎಂದು ಅರಿವಾದ ನಂತರವೇ ಐಎಂಎಫ್ ನೆರವು ಒದಗಿಸುತ್ತದೆ. ಒಮ್ಮೆ ಐಎಂಎಫ್ ನೆರವು ಲಭ್ಯವಾದರೆ ಇತರ ದೇಶಗಳಿಂದಲೂ ನೆರವು ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ.
  4. ವಿತ್ತೀಯ ಕೊರತೆ (ಸರ್ಕಾರದ ಆದಾಯ ಮತ್ತು ವೆಚ್ಚದ ನಡುವಣ ಅಂತರ – fiscal gap) ಕಡಿಮೆಯಾಗಬೇಕು ಎನ್ನುವುದು ಐಎಂಎಫ್ ಪಾಕಿಸ್ತಾನಕ್ಕೆ ವಿಧಿಸಿರುವ ಮೊದಲ ಅತಿಮುಖ್ಯ ಷರತ್ತಾಗಿದೆ.
  5. ಪ್ರತಿ ಲೀಟರ್ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 20ರಿಂದ 30 ಪಾಕಿಸ್ತಾನಿ ರೂಪಾಯಿಗಳನ್ನು ಹೊಸ ತೆರಿಗೆ ವಿಧಿಸಬೇಕು. ಪ್ರಸ್ತುತ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ದರವು 50 ರೂಪಾಯಿಯಿದೆ. ಇದು ಮುಂದಿನ ದಿನಗಳಲ್ಲಿ 70ರಿಂದ 80 ರೂಪಾಯಿಗೆ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.
  6. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಶೇ 17ರಷ್ಟು ಸರಕು ಸೇವಾ ಸುಂಕ (Goods and Services Tax – GST) ವಿಧಿಸಬೇಕು ಎಂಬ ಷರತ್ತನ್ನು ಪಾಕ್ ಸರ್ಕಾರವು ಈಗಾಗಲೇ ಒಪ್ಪಿದೆ. ರಾಷ್ಟ್ರಪತಿ ಅಂಕಿತದ ಸುಗ್ರೀವಾಜ್ಞೆಯೊಂದಿಗೆ ಈ ಕ್ರಮವನ್ನು ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
  7. ಪಾಕಿಸ್ತಾನದಲ್ಲಿ ಶೀಘ್ರವೇ ಪೂರಕ ಬಜೆಟ್ (mini budget) ಮಂಡನೆಯಾಗುವ ಸಾಧ್ಯತೆಯಿದ್ದು, ಸಕ್ಕರೆ ಬಳಸಿರುವ ಪಾನೀಯಗಳ ಮೇಲಿನ ಅಬಕಾರಿ ಸುಂಕವನ್ನು ಶೇ 17ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಪ್ರಸ್ತುತ ಈ ಉತ್ಪನ್ನಗಳ ಮೇಲೆ ಶೇ 13ರ ಅಬಕಾರಿ ಸುಂಕ ಇದೆ.
  8. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆಯೂ ಅಬಕಾರಿ ಸುಂಕ ಹೆಚ್ಚಿಸುವಂತೆ ಪಾಕಿಸ್ತಾನದ ಕೇಂದ್ರೀಯ ಹಣಕಾಸು ಮಂಡಳಿ ಸಲಹೆ ಮಾಡಿದೆ. ಪೂರಕ ಬಜೆಟ್​ನಲ್ಲಿ ಇದೂ ಸಹ ಪರಿಗಣನೆಯಾಗಬಹುದು.
  9. ಪಾಕಿಸ್ತಾನದ ನಾಗರಿಕ ಸೇವಾ ಅಧಿಕಾರಿಗಳ ವೇತನ ಮತ್ತು ಇತರ ವಿವರಗಳನ್ನೂ ಐಎಂಎಫ್ ಕೋರಿದೆ. BS-17ರಿಂದ BS-22ರ ಗ್ರೇಡ್​ಗಳಿಗೆ ಇತರೆಲ್ಲಾ ಸರ್ಕಾರಿ ನೌಕರರಿಗಿಂತಲೂ ಹೆಚ್ಚಿನ ವೇತನ ಮತ್ತು ಸವಲತ್ತು ಇದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಪರೋಕ್ಷ ಸೂಚನೆ ರವಾನೆಯಾಗಿದೆ.
  10. ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್ ಬಳಿಯಿದ್ದ ವಿದೇಶಿ ಮೀಸಲು ನಿಧಿಯ ಪ್ರಮಾಣವು ಶೇ 16.1ರಷ್ಟು ಕುಸಿತ ಕಂಡಿದೆ. ಪ್ರಸ್ತುತ ಪಾಕಿಸ್ತಾನದ ಬಳಿ ಕೇವಲ 3.09 ಶತಕೋಟಿ ಡಾಲರ್​ಗಳಷ್ಟು ಮೀಸಲು ಬಾಕಿಯಿದೆ. ಇದು ಕಳೆದ 10 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಇದನ್ನೂ ಓದಿ: Pakistan Crisis: ಮಿತ್ರರಾಷ್ಟ್ರಗಳ ತಿರಸ್ಕಾರ, ಐಎಂಎಫ್‌ ಕಠಿಣ ಷರತ್ತು; ದಿವಾಳಿಯಾಗುವತ್ತ ಪಾಕಿಸ್ತಾನ

Published On - 8:45 am, Sun, 5 February 23

ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?