Imran Khan ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ; ಮಾರ್ಚ್ 31ರಂದು ನಡೆಯಲಿದೆ ಚರ್ಚೆ

| Updated By: ರಶ್ಮಿ ಕಲ್ಲಕಟ್ಟ

Updated on: Mar 28, 2022 | 6:37 PM

ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಗುರುವಾರ ಸದನದಲ್ಲಿ ಚರ್ಚೆ ಆರಂಭವಾಗಲಿದೆ. ಅಂದರೆ ಮಾರ್ಚ್ 31 ರಂದು ಅವಿಶ್ವಾಸ ನಿರ್ಣಯ ಮೇಲೆ ಚರ್ಚೆಯನ್ನು ನಿಗದಿಪಡಿಸಲಾಗಿದೆ.

Imran Khan ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ; ಮಾರ್ಚ್ 31ರಂದು ನಡೆಯಲಿದೆ ಚರ್ಚೆ
ಇಮ್ರಾನ್ ಖಾನ್
Follow us on

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಪದಚ್ಯುತಗೊಳಿಸುವ ಅವಿಶ್ವಾಸ ನಿರ್ಣಯವನ್ನು(No-Confidence Motion) ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾಯಿತು ಎಂದು ಕೆಳಮನೆಯ ಸ್ಪೀಕರ್ ಖಾಸಿಂ ಸೂರಿ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ (Shahbaz Sharif ) ಅವರು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಗುರುವಾರ ಸದನದಲ್ಲಿ ಚರ್ಚೆ ಆರಂಭವಾಗಲಿದೆ. ಅಂದರೆ ಮಾರ್ಚ್ 31 ರಂದು ಅವಿಶ್ವಾಸ ನಿರ್ಣಯ ಮೇಲೆ ಚರ್ಚೆಯನ್ನು ನಿಗದಿಪಡಿಸಲಾಗಿದೆ. ಒಟ್ಟು 161 ಎಂಎನ್ಎಗಳು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಬೆಂಬಲಿಸಿದವು.ಇದಕ್ಕೂ ಮುನ್ನ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸದ್ ಖೈಸರ್ ಸೋಮವಾರ ಮಂಡನೆಗೆ ಅವಕಾಶ ನೀಡಿದರೆ ಏಪ್ರಿಲ್ 4 ರಂದು ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದು ಆಂತರಿಕ ಸಚಿವ ಶೇಖ್ ರಶೀದ್ ಹೇಳಿದ್ದಾರೆ ಎಂದು ಡಾನ್ ಡಾಟ್ ಕಾಂ ವರದಿ ಮಾಡಿತ್ತು. ಕೆಲವು ವರದಿಗಳ ಪ್ರಕಾರ, ಖಾನ್ ಅವರು ತುರ್ತು ಸಭೆಯನ್ನು ಕರೆದಿದ್ದು ಈ ಹಿಂದೆ ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಸಹ ಪ್ರಾಂತ್ಯದಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿದ್ದಾರೆ. ಮಾರ್ಚ್ 8 ರಂದು, ಜಂಟಿ ವಿರೋಧ ಪಕ್ಷವು ರಾಷ್ಟ್ರೀಯ ಅಸೆಂಬ್ಲಿಯೊಂದಿಗೆ ಕಡ್ಡಾಯವಾಗಿ 14 ದಿನಗಳಲ್ಲಿ ಅಧಿವೇಶನವನ್ನು ಕರೆಯುವಂತೆ ಸ್ಪೀಕರ್‌ಗೆ ವಿನಂತಿಯನ್ನು ಸಲ್ಲಿಸಿತು.

ಗಡುವು ಮುಗಿದ ಮೂರು ದಿನಗಳ ನಂತರ ಮಾರ್ಚ್ 25 ರಂದು ಅಧಿವೇಶನ ಕರೆಯಲಾಗಿದ್ದರೂ, ಸ್ಪೀಕರ್ ಪ್ರಸ್ತಾವನೆಯನ್ನು ಮಂಡಿಸಲು ಅನುಮತಿ ನಿರಾಕರಿಸಿದರು. ಸೋಮವಾರ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿವೆ.

ಖಾನ್ ಅವರ ಪಕ್ಷದ ಸುಮಾರು 20 ಸದಸ್ಯರು ಇತ್ತೀಚೆಗೆ ಇಸ್ಲಾಮಾಬಾದ್‌ನ ಸಿಂಧ್ ಹೌಸ್‌ನಲ್ಲಿ ಆಶ್ರಯ ಪಡೆದಿದ್ದರು ಮತ್ತು ಅವರಲ್ಲಿ ಯಾರೂ ಶುಕ್ರವಾರ ರಾಷ್ಟ್ರೀಯ ಅಸೆಂಬ್ಲಿಗೆ ಹಾಜರಾಗಲಿಲ್ಲ.

ಪಾಕಿಸ್ತಾನದ  ನ್ಯಾಶನಲ್ ಅಸೆಂಬ್ಲಿಯು ಒಟ್ಟು 342 ಸದಸ್ಯರ ಬಲವನ್ನು ಹೊಂದಿದೆ. ಬಹುಮತದ ಮ್ಯಾಜಿಕ್ ನಂಬರ್ 172. ಪಿಟಿಐ ನೇತೃತ್ವದ ಒಕ್ಕೂಟವು 179 ಸದಸ್ಯರ ಬೆಂಬಲದೊಂದಿಗೆ ರಚನೆಯಾಯಿತು, ಇಮ್ರಾನ್ ಖಾನ್ ಅವರ ಪಿಟಿಐ 155 ಸದಸ್ಯರನ್ನು ಹೊಂದಿದೆ, ಮತ್ತು ನಾಲ್ಕು ಪ್ರಮುಖ ಮಿತ್ರಪಕ್ಷಗಳಾದ ಮುತ್ತಹಿದಾ ಕ್ವಾಮಿ ಮೂವ್​​ಮೆಂಟ್ – ಪಾಕಿಸ್ತಾನ್ ( MQM-P), ಪಾಕಿಸ್ತಾನ್ ಮುಸ್ಲಿಂ ಲೀಗ್-ಕ್ವೈಡ್ (PML-Q), ಬಲೂಚಿಸ್ತಾನ್ ಅವಾಮಿ ಪಾರ್ಟಿ (BAP) ಮತ್ತು ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್ (GDA) ಕ್ರಮವಾಗಿ ಏಳು, ಐದು, ಐದು ಮತ್ತು ಮೂರು ಸದಸ್ಯರನ್ನು ಹೊಂದಿದೆ.

ಇದನ್ನೂ ಓದಿ: ಪಾಕಿಸ್ತಾನ: ನಿರ್ಣಾಯಕ ಅವಿಶ್ವಾಸ ಮತಕ್ಕೆ ಮುನ್ನ ಇಮ್ರಾನ್ ಖಾನ್ ಸರ್ಕಾರದಿಂದ ಹೊರಬಂದ ಬಲೂಚ್ ಮಿತ್ರಪಕ್ಷ

Published On - 6:01 pm, Mon, 28 March 22