
ಇಸ್ಲಾಮಾಬಾದ್, ಜೂನ್ 1: ಹಣದುಬ್ಬರ, ಕೆಟ್ಟ ಆರ್ಥಿಕತೆ ಮತ್ತು ಸಾಲದ ಹೊರೆಯಿಂದ ಬಳಲುತ್ತಿರುವ ಪಾಕಿಸ್ತಾನ ಕೊನೆಗೂ ಇತರೆ ದೇಶಗಳಿಂದ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವುದನ್ನು ಒಪ್ಪಿಕೊಂಡಿದೆ. ಕ್ವೆಟ್ಟಾದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್(Shehbaz Sharif) ಪಾಕಿಸ್ತಾನವು ಭಿಕ್ಷಾ ಪಾತ್ರೆಯೊಂದಿಗೆ ಅಲ್ಲ ಬದಲಾಗಿ ವ್ಯಾಪಾರ, ಹೂಡಿಕೆಯಲ್ಲಿ ಸಮಾನ ಪಾಲುದಾರನಾಗಿ ಜಗತ್ತಿನ ಜತೆ ಹೋಗಲು ಬಯಸುತ್ತದೆ ಎಂದು ಹೇಳಿದರು. ಪರೋಕ್ಷವಾಗಿ ಪಾಕಿಸ್ತಾನ ಭಿಕ್ಷಾ ಪಾತ್ರೆ ಹಿಡಿದು ದೇಶಗಳನ್ನು ಸುತ್ತುತ್ತಿರುವುದನ್ನು ಒಪ್ಪಿಕೊಂಡರು.
ಚೀನಾ ಪಾಕಿಸ್ತಾನದ ಅತ್ಯಂತ ವಿಶ್ವಾಸಾರ್ಹ ಸ್ನೇಹಿತ, ಸೌದಿ ಅರೇಬಿಯಾ, ಟರ್ಕಿ, ಕತಾರ್ ಮತ್ತು ಯುಎಇಯಂತಹ ದೇಶಗಳು ನಮ್ಮ ಅತ್ಯಂತ ವಿಶ್ವಾಸಾರ್ಹ ಮಿತ್ರರಾಷ್ಟ್ರಗಳಾಗಿವೆ. ಈ ಎಲ್ಲಾ ದೇಶಗಳು ಸಮಾನ ಪಾಲುದಾರರಾಗಿ ನಮ್ಮೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತವೆ. ವ್ಯಾಪಾರ, ನಾವೀನ್ಯತೆ, ಶಿಕ್ಷಣ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆಯಷ್ಟೇ, ಐಎಂಎಫ್ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ (ಸುಮಾರು 8,500 ಕೋಟಿ ರೂ.) ಹೊಸ ಸಾಲವನ್ನು ನೀಡಿದೆ. ಅದೇ ಸಮಯದಲ್ಲಿ, ಜೂನ್ ಅಂತ್ಯದ ಮೊದಲು ಪಾಕಿಸ್ತಾನಕ್ಕೆ ಚೀನಾದ ಕರೆನ್ಸಿಯಲ್ಲಿ 3.7 ಬಿಲಿಯನ್ ಡಾಲರ್ (ರೂ. 32 ಸಾವಿರ ಕೋಟಿ) ವಾಣಿಜ್ಯ ಸಾಲವನ್ನು ಮರುಪಾವತಿಸುವುದಾಗಿ ಚೀನಾ ಭರವಸೆ ನೀಡಿದೆ.
ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದ ಪಾಕಿಸ್ತಾನದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಹಣಕಾಸು ವರ್ಷದಲ್ಲಿ ಪಾಕಿಸ್ತಾನದ ರೂಪಾಯಿ ಡಾಲರ್ ವಿರುದ್ಧ ಸ್ವಲ್ಪ ಕುಸಿದಿದೆ. ಮಂಗಳವಾರ, ಒಂದು ಡಾಲರ್ ಮೌಲ್ಯ 282.2 ಪಾಕಿಸ್ತಾನಿ ರೂಪಾಯಿಗಳಿಗೆ ಸಮಾನವಾಗಿತ್ತು.
ಮತ್ತಷ್ಟು ಓದಿ: ಭಾರತದೊಂದಿಗೆ ‘ಶಾಂತಿ ಮಾತುಕತೆ’ಗೆ ಸಿದ್ಧ ಎಂದ ಪಾಕ್ ಪ್ರಧಾನಿ ಶೆಹಬಾಜ್
ಪಾಕಿಸ್ತಾನಿ ಸಂಸದ ಸೈಯದ್ ಅಲಿ ಜಾಫರ್ ಕೆಲವು ದಿನಗಳ ಹಿಂದೆ ಸಿಂಧೂ ನದಿ ನೀರು ಒಪ್ಪಂದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಿಕ್ಕಟ್ಟನ್ನು ಪರಿಹರಿಸದಿದ್ದರೆ, ಹೆಚ್ಚಿನ ಜನಸಂಖ್ಯೆ ಹಸಿವಿನಿಂದ ಸಾಯಬಹುದು ಎಂದು ಅವರು ಹೇಳಿದ್ದರು. ಸಿಂಧೂ ನದಿ ಜಲಾನಯನ ಪ್ರದೇಶ ನಮ್ಮ ಜೀವನಾಡಿ. ನಮಗೆ ಅಗತ್ಯವಿರುವ ನೀರಿನ ಮುಕ್ಕಾಲು ಭಾಗ ಹೊರಗಿನಿಂದ ಬರುತ್ತದೆ.
ಪ್ರತಿ ಹತ್ತು ಜನರಲ್ಲಿ ಒಂಬತ್ತು ಜನರು ಅಂತಾರಾಷ್ಟ್ರೀಯ ಗಡಿ ಜಲಾನಯನ ಪ್ರದೇಶಗಳಲ್ಲಿ ಜೀವನ ಸಾಗಿಸುತ್ತಾರೆ ಎಂದು ಹೇಳಿದ್ದರು. ಶೆಹಬಾಜ್ ಷರೀಫ್ ಎಷ್ಟೇ ಮಾತನಾಡಿದರೂ, ಅವರಿಗೆ ಮೂಲಭೂತ ಸಮಸ್ಯೆ ಪರಿಹರಿಸಲು ಇಷ್ಟವಿಲ್ಲ. ಅವರು ಭಯೋತ್ಪಾದಕರಿಗೆ ನೀಡುತ್ತಿರುವ ಹಣವನ್ನು ಕಡಿಮೆ ಮಾಡುತ್ತಿಲ್ಲ ಮತ್ತು ಪಾಕಿಸ್ತಾನದ ಬಜೆಟ್‌ನ ಬಹುಪಾಲು ಭಾಗವು ಹಫೀಜ್ ಸಯೀದ್ ಮತ್ತು ಅವನ ಬೆಂಬಲಿಗರನ್ನು ಬೆಂಬಲಿಸಲು ಹೋಗುತ್ತದೆ.
ಐಎಂಎಫ್‌ನಿಂದ ಸಾಲ ಪಡೆದ ನಂತರ, ಹಸಿವಿನಿಂದ ಬಳಲುತ್ತಿರುವ ಜನರಿಗೆ ಆಹಾರವನ್ನು ಒದಗಿಸುವ ಬದಲು, ಪಾಕಿಸ್ತಾನ ಮೊದಲು ಲಷ್ಕರ್‌ನ ಪ್ರಧಾನ ಕಚೇರಿಯನ್ನು ನಿರ್ಮಿಸುವುದಾಗಿ ಘೋಷಿಸಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ