ಕಾಶ್ಮೀರ ಮುಂತಾದ ಸಮಸ್ಯೆಗೆ ಭಾರತದ ಜೊತೆಗಿನ ಮಾತುಕತೆಯೊಂದೇ ಮಾರ್ಗ; ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
ಪಾಕಿಸ್ತಾನವು ಭಾರತದೊಂದಿಗೆ ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬಯಸುತ್ತದೆ. ಈ ಸಮಸ್ಯೆಗಳ ಪರಿಹಾರಕ್ಕೆ ಎರಡೂ ದೇಶಗಳು ಕುಳಿತು ಮಾತನಾಡುವುದೊಂದೇ ಉಳಿದಿರುವ ದಾರಿ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಕಾಶ್ಮೀರ ಸೇರಿದಂತೆ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಮಾತುಕತೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪುನರುಚ್ಚರಿಸಿದ್ದಾರೆ. "ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕೆಂದು ನಾವು ಬಯಸುತ್ತೇವೆ" ಎಂದು ಷರೀಫ್ ಹೇಳಿದ್ದಾರೆ.

ಇಸ್ಲಮಾಬಾದ್: ಕಾಶ್ಮೀರ ಸೇರಿದಂತೆ ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನು ಪಾಕಿಸ್ತಾನ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಬಯಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇಂದು ಹೇಳಿದ್ದಾರೆ. “ಕಾಶ್ಮೀರ ಒಗ್ಗಟ್ಟಿನ ದಿನ”ದಂದು ಮುಜಫರಾಬಾದ್‌ನಲ್ಲಿ ನಡೆದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಶಾಸಕಾಂಗ ಸಭೆಯ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಶೆಹಬಾಜ್ ಷರೀಫ್, ಭಾರತವು ವಿಶ್ವಸಂಸ್ಥೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಮತ್ತು ಈ ನಿಟ್ಟಿನಲ್ಲಿ ಮಾತುಕತೆಯನ್ನು ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ.
‘ಕಾಶ್ಮೀರ ಒಗ್ಗಟ್ಟಿನ ದಿನ’ವು ಕಾಶ್ಮೀರಿಗಳಿಗೆ ಬೆಂಬಲವನ್ನು ತೋರಿಸಲು ಆಯೋಜಿಸಲಾದ ವಾರ್ಷಿಕ ಪಾಕಿಸ್ತಾನಿ ಕಾರ್ಯಕ್ರಮವಾಗಿದೆ. “ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕೆಂದು ನಾವು ಬಯಸುತ್ತೇವೆ” ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.
“ಭಾರತವು ಆಗಸ್ಟ್ 5, 2019ರ ಚಿಂತನೆಯಿಂದ ಹೊರಬಂದು ವಿಶ್ವಸಂಸ್ಥೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಮತ್ತು ಈ ನಿಟ್ಟಿನಲ್ಲಿ ಮಾತುಕತೆ ಪ್ರಾರಂಭಿಸಬೇಕು” ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಗುಡಿಸಲೆದುರು ಫೋಟೋಶೂಟ್ ಮಾಡಿಸಿಕೊಳ್ಳುವವರಿಗೆ ಬಡವರ ಕುರಿತ ಭಾಷಣ ನೀರಸವಾಗೇ ಇರುತ್ತದೆ; ರಾಹುಲ್ ಗಾಂಧಿಗೆ ಮೋದಿ ಚಾಟಿ
1999ರ ಲಾಹೋರ್ ಘೋಷಣೆಯಲ್ಲಿ ಬರೆಯಲ್ಪಟ್ಟಂತೆ ಹಾಗೂ ಆಗಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಪಾಕಿಸ್ತಾನ ಭೇಟಿಯ ಸಮಯದಲ್ಲಿ ಒಪ್ಪಿಕೊಂಡಂತೆ ಪಾಕಿಸ್ತಾನದ ಷರೀಫ್ ಇಸ್ಲಾಮಾಬಾದ್ ಮತ್ತು ಭಾರತದ ಮುಂದಿನ ಏಕೈಕ ಮಾರ್ಗವೆಂದರೆ ‘ಮಾತುಕತೆ’ ಮಾತ್ರ ಎಂದು ಹೇಳಿದ್ದಾರೆ.
ಹಾಗೇ, ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರವಿಲ್ಲದ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ದೇಶದ ಸಂಬಂಧವನ್ನು ಹೊಂದಲು ಬಯಸುವುದಾಗಿ ಭಾರತವು ಪದೇ ಪದೇ ಪ್ರತಿಪಾದಿಸಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಭದ್ರತಾ ಪರಿಸ್ಥಿತಿ ಪರಿಶೀಲಿಸಿದ ಅಮಿತ್ ಶಾ; ಭಯೋತ್ಪಾದನೆ ವಿರುದ್ಧ ಹೋರಾಟ ಚುರುಕುಗೊಳಿಸಲು ಆದೇಶ
ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಹಿಂದೆಯೂ ಇದ್ದವು, ಈಗಲೂ ಇದೆ ಮತ್ತು ಶಾಶ್ವತವಾಗಿ ಇರುತ್ತವೆ. ಅವು ಭಾರತದ ನಿರ್ಣಾಯಕ ಭಾಗವಾಗಿ ಉಳಿಯುತ್ತವೆ ಎಂದು ಭಾರತ ಪಾಕಿಸ್ತಾನಕ್ಕೆ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟವು.
ಇದಲ್ಲದೆ, ಪಾಕಿಸ್ತಾನದ ಪ್ರಧಾನಿ ಭಾರತವು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದರಿಂದ ಶಾಂತಿ ಅಥವಾ ಕಾಶ್ಮೀರದ ಜನರ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಶಾಂತಿಯೇ ಪ್ರಗತಿಗೆ ದಾರಿ ಎಂದಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ಅನ್ವರುಲ್ ಹಕ್ ಅವರು ಪಾಕಿಸ್ತಾನವು ಕಾಶ್ಮೀರಿಗಳ ಅಂತಿಮ ತಾಣವಾಗಿದೆ ಎಂದಿದ್ದಾರೆ. ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೆ ಶಾಂತಿ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ