ನಿಮ್ಮ ದೇಶ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಒಂದು ದಿನದ ನಂತರ, ಪಾಕಿಸ್ತಾನದ ವಿದೇಶಾಂಗ ಸಚಿವರು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮೇಲೆ ವೈಯಕ್ತಿಕ ದಾಳಿ ನಡೆಸಿದ್ದಾರೆ. ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಹುಡುಕುತ್ತಿದ್ದಾಗ ಪಾಕಿಸ್ತಾನದಲ್ಲಿ ಹೇಗೆ ನೆಲೆಸಿದ್ದನೆಂಬುದನ್ನು ಭಾರತದ ವಿದೇಶಾಂಗ ಸಚಿವರು ಎತ್ತಿ ತೋರಿಸಿದ್ದಕ್ಕೆ ಪ್ರತಿಕ್ರಿಯಿಸಿದ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto Zardari) ಮೋದಿಯನ್ನು ಗುಜರಾತಿನ ಕಟುಕ ಎಂದು ಕರೆದಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾಡಿದ ಭಾಷಣದಲ್ಲಿ ಎಸ್ ಜೈಶಂಕರ್ ಅವರು ಪಾಕಿಸ್ತಾನವು ಒಸಾಮಾ ಬಿನ್ ಲಾಡೆನ್‌ಗೆ ಹೇಗೆ ಆತಿಥ್ಯ ನೀಡಿತ್ತು, 2001ರಲ್ಲಿ ಸಂಸತ್ತಿನ ಮೇಲಿನ ದಾಳಿ ಸೇರಿದಂತೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೇಗೆ ಪ್ರಾಯೋಜಿಸುತ್ತಿದೆ ಎಂಬುದನ್ನು ಹೇಳಿದ್ದಾರೆ. ನಾವು ಉತ್ತಮ ಪರಿಹಾರಗಳನ್ನು ಹುಡುಕುತ್ತಿರುವಾಗ, ಅಂತಹ ಬೆದರಿಕೆಗಳ ಸಾಮಾನ್ಯೀಕರಣವನ್ನು ನಾವು ಎಂದಿಗೂ ಒಪ್ಪಿಕೊಳ್ಳಬಾರದು. ಜಗತ್ತು ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸುವದನ್ನು ಸಮರ್ಥಿಸುವ ಪ್ರಶ್ನೆಯೂ ಉದ್ಭವಿಸಬಾರದು. ಗಡಿಯಾಚೆಗಿನ ಭಯೋತ್ಪಾದನೆಯ ರಾಜ್ಯಗಳ ಪ್ರಾಯೋಜಕತ್ವಕ್ಕೆ ಇದು ಖಂಡಿತವಾಗಿಯೂ ಅನ್ವಯಿಸುತ್ತದೆ. ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ನೀಡುವುದು ಮತ್ತು ನೆರೆಯ ಸಂಸತ್ತಿನ ಮೇಲೆ ದಾಳಿ ಮಾಡುವವರು ಈ ಮಂಡಳಿಯ ಮುಂದೆ ಉಪದೇಶ ಮಾಡುವ ಅರ್ಹತೆ ಹೊಂದಿಲ್ಲ ಎಂದು ಜೈಶಂಕರ್ ಅವರು ಪಾಕಿಸ್ತಾನವನ್ನು ನೇರಾ ನೇರ ಟೀಕಿಸಿದ್ದರು.
Pakistan’s foreign minister’s unexpected reaction to the Indian External Affairs minister’s remarks
“I want to tell India that Osama bin Laden has been killed while the butcher of Gujarat is still alive & he is the PM of India”Says Foreign Minister of Pakistan @BBhuttoZardari pic.twitter.com/HBmhCNN9yO
— Ghulam Abbas Shah (@ghulamabbasshah) December 15, 2022
ಸಾಂಕ್ರಾಮಿಕ ರೋಗ, ಹವಾಮಾನ ಬದಲಾವಣೆ, ಸಂಘರ್ಷಗಳು ಅಥವಾ ಭಯೋತ್ಪಾದನೆಯೇ ಆಗಿರಲಿ, ವಿಶ್ವಸಂಸ್ಥೆಯ ಪರಿಣಾಮಕಾರಿತ್ವವು ನಮ್ಮ ಕಾಲದ ಪ್ರಮುಖ ಸವಾಲುಗಳನ್ನು ಎದುರಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: UN Security Council: ಭಯೋತ್ಪಾದನೆ ಕುರಿತು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಸಚಿವರ ಕಿವಿ ಹಿಂಡಿದ ಜೈಶಂಕರ್
ಭಾರತದ ಟೀಕೆಗೆ ಗುಡುಗಿದ ಬಿಲಾವಲ್
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ನ್ಯೂಯಾರ್ಕ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಪಾಕಿಸ್ತಾನದ ಬಗ್ಗೆ ಎಸ್ ಜೈಶಂಕರ್ ಅವರ ಟೀಕೆಯ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದರು. ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂಬುದನ್ನು ತಿರಸ್ಕರಿಸಿದ ಭುಟ್ಟೋ, ಪಾಕಿಸ್ತಾನವು ಭಯೋತ್ಪಾದನೆಯ ದೊಡ್ಡ ಬಲಿಪಶುವಾಗಿದೆ ಎಂದಿದ್ದಾರೆ. ಅದೇ ವೇಳೆ ಭಾರತ ವಿಶ್ವದ ಎಲ್ಲಾ ಮುಸ್ಲಿಮರನ್ನು ಭಯೋತ್ಪಾದಕರೆಂದು ಬಣ್ಣಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಜೈಶಂಕರ್ ಅವರ ಲಾಡೆನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ, ಆದರೆ ಭಾರತದ ಕಟುಕ ಬದುಕಿದ್ದಾನೆ, ಅವರು ಭಾರತದ ಪ್ರಧಾನಿ- ಇದನ್ನು ನಾನು ಭಾರತದ ವಿದೇಶಾಂಗ ವ್ಯವಹಾರಗಳ ಗೌರವಾನ್ವಿತ ಸಚಿವರಿಗೆ ನೆನಪಿಸಲು ಬಯಸುತ್ತೇನೆ. ಮೋದಿ ಪ್ರಧಾನಿಯಾಗುವವರೆಗೂ ಈ ದೇಶ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ಇದು ಆರ್‌ಎಸ್‌ಎಸ್‌ನ ಪ್ರಧಾನ ಮಂತ್ರಿ ಮತ್ತು ಆರ್‌ಎಸ್‌ಎಸ್‌ನ ವಿದೇಶಾಂಗ ಮಂತ್ರಿ. ಏನಿದು ಆರ್‌ಎಸ್‌ಎಸ್? ಆರ್‌ಎಸ್‌ಎಸ್ ಹಿಟ್ಲರ್‌ನ ಎಸ್‌ಎಸ್‌ನಿಂದ ಸ್ಫೂರ್ತಿ ಪಡೆಯುತ್ತದೆ.
ಆರ್‌ಎಸ್‌ಎಸ್‌ಗೆ ಗಾಂಧಿ ಸಿದ್ಧಾಂತದಲ್ಲಿ ನಂಬಿಕೆ ಇಲ್ಲ ಎಂದ ಬಿಲಾವಲ್, ‘ಗಾಂಧಿ ಹತ್ಯೆ ಮಾಡಿದ ಭಯೋತ್ಪಾದಕನನ್ನು ಅವರು ಹೀರೋ ಎಂದು ಆರಾಧಿಸುತ್ತಾರೆ’. ಗುಜರಾತ್ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ರೂಪಿಸುತ್ತಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಜೋಹರ್ ಟೌನ್ ಸ್ಫೋಟದ ಹಿಂದೆ ಭಾರತದ ಕೈವಾಡವಿದೆ ಎಂಬುದಕ್ಕೆ ತಮ್ಮ ಬಳಿ ಪುರಾವೆ ಇದೆ ಎಂದಿದ್ದಾರೆ.
ಆದಾಗ್ಯೂ, ತಾವು ಎಸ್ ಜೈಶಂಕರ್ ಅವರೊಂದಿಗೆ ವಾಕ್ಸಮರ ಮಾಡುತ್ತಿದ್ದೇನೆ ಎಂಬುದನ್ನು ನಿರಾಕರಿಸಿದ ಭುಟ್ಟೋ,ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿಲ್ಲ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Fri, 16 December 22