ಇಸ್ಲಾಮಾಬಾದ್, ಏಪ್ರಿಲ್ 25: ಭಯೋತ್ಪಾದನೆ(Terrorism) ಬೆಂಬಲಿಸುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನವು ತಮ್ಮ ನೀಚ ಕೃತ್ಯವನ್ನು ಒಪ್ಪಿಕೊಂಡಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್(Khawaja Asif) ನಾವು 3 ದಶಕಗಳಿಂದ ಈ ನೀಚ ಕೆಲಸ ಮಾಡುತ್ತಿದ್ದೀವಿ ಎಂದು ಹೇಳಿದ್ದಾರೆ. ಒಂದು ಸಂದರ್ಶನದಲ್ಲಿ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಭಯೋತ್ಪಾದಕರಿಗೆ ಆಶ್ರಯ ನೀಡಿರುವುದಾಗಿ ಒಪ್ಪಿಕೊಂಡರು. ಮಾಧ್ಯಮ ವರದಿಗಳ ಪ್ರಕಾರ ಸಂದರ್ಶನವೊಂದರಲ್ಲಿ ಆಸಿಫ್ ಅವರ ಬಳಿ ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ಒದಗಿಸುತ್ತಿದೆ ಮತ್ತು ತರಬೇತಿ ನೀಡುವ ದೀರ್ಘ ಇತಿಹಾಸ ಹೊಂದಿದೆ ಎನ್ನುವ ಆರೋಪದ ಬಗ್ಗೆ ನೀವೇನು ಹೇಳುತ್ತೀರಿ ಎಂದು ಕೇಳಿದಾಗ ಖ್ವಾಜಾ, ನಾವು 3 ದಶಕಗಳಿಂದ ಅಮೆರಿಕಕ್ಕಾಗಿ ಈ ಕೊಳಕು ಕೆಲಸ ಮಾಡುತ್ತಿದ್ದೇವೆ. ಅದು ತಪ್ಪು ನಾವು ಅದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ ಎಂದರು. ಇದನ್ನೂ ಓದಿ Video: ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ ಪ್ಯಾಂಟ್ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ ...
Published On - 2:08 pm, Fri, 25 April 25