ಆರ್ಥಿಕ ಹೊರೆ; ಚಹಾ ಸೇವನೆ ಕಡಿಮೆ ಮಾಡುವಂತೆ ನಾಗರಿಕರಿಗೆ ಒತ್ತಾಯಿಸಿದ ಪಾಕ್ ಸಚಿವ

| Updated By: ರಶ್ಮಿ ಕಲ್ಲಕಟ್ಟ

Updated on: Jun 16, 2022 | 11:23 AM

ಪಾಕಿಸ್ತಾನ ಕೆಲವು ತಿಂಗಳುಗಳಿಂದ ತೀವ್ರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದು, ಇದು ಆಹಾರ, ಅನಿಲ ಮತ್ತು ತೈಲ ಬೆಲೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಆರ್ಥಿಕ ಹೊರೆ; ಚಹಾ ಸೇವನೆ ಕಡಿಮೆ ಮಾಡುವಂತೆ ನಾಗರಿಕರಿಗೆ ಒತ್ತಾಯಿಸಿದ ಪಾಕ್ ಸಚಿವ
ಪ್ರಾತಿನಿಧಿಕ ಚಿತ್ರ
Image Credit source: manorama.com
Follow us on

ದೇಶದ  ಆರ್ಥಿಕತೆಯನ್ನು ಸರಿದೂಗಿಸುವುದಕ್ಕಾಗಿ ಪಾಕಿಸ್ತಾನದ (Pakistan) ಯೋಜನೆ ಮತ್ತು ಅಭಿವೃದ್ಧಿಯ ಫೆಡರಲ್ ಸಚಿವ ಅಹ್ಸಾನ್ ಇಕ್ಬಾಲ್ (Ahsan Iqbal) ಕಡಿಮೆ ಚಹಾವನ್ನು (Tea) ಕುಡಿಯುವಂತೆ ನಾಗರಿಕರನ್ನು ಒತ್ತಾಯಿಸಿದ್ದಾರೆ. ಆಮದುಗಳು ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡವನ್ನು ಉಂಟುಮಾಡುವುದರಿಂದ ಪಾಕಿಸ್ತಾನಿಗಳು ತಮ್ಮ ಚಹಾ ಸೇವನೆಯನ್ನು ದಿನಕ್ಕೆ ಒಂದು ಅಥವಾ ಎರಡು ಕಪ್‌ಗಳಷ್ಟು ಕಡಿಮೆ ಮಾಡಬಹುದು ಎಂದು ಅಹ್ಸಾನ್ ಇಕ್ಬಾಲ್ ಹೇಳಿದ್ದಾರೆ. ಪಾಕಿಸ್ತಾನ ಸಾಲ ಪಡೆದು ಚಹಾ ಆಮದು ಮಾಡಿಕೊಳ್ಳುತ್ತಿದೆ ಎಂದು ಇಕ್ಬಾಲ್ ಸುದ್ದಿಗಾರರಿಗೆ ತಿಳಿಸಿದರು. ಪ್ರಸ್ತುತ ಆರ್ಥಿಕ ವರ್ಷದ ಫೆಡರಲ್ ಬಜೆಟ್ ದಾಖಲೆಯ ಪ್ರಕಾರ ಪಾಕಿಸ್ತಾನವು ಕಳೆದ ಆರ್ಥಿಕ ವರ್ಷಕ್ಕಿಂತ ₹13 ಶತಕೋಟಿ (USD 60 ಮಿಲಿಯನ್) ಮೌಲ್ಯದ ಚಹಾವನ್ನು ಆಮದು ಮಾಡಿಕೊಂಡಿದೆ ಎಂದು ತೋರಿಸಿದೆ.  2019ರಲ್ಲಿ ಎರಡೂ ಪಕ್ಷಗಳು ಒಪ್ಪಿಕೊಂಡ $6 ಬಿಲಿಯನ್ ಬೇಲ್ಔಟ್ ಒಪ್ಪಂದವನ್ನು ಮರುಪ್ರಾರಂಭಿಸಲು ಕಳೆದ ವಾರ ಐಎಂಎಫ್​​ಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿ ಸರ್ಕಾರವು 2022-23 ಗಾಗಿ $47 ಶತಕೋಟಿಯ ಹೊಸ ಬಜೆಟ್ ಮಂಡಿಸಿದೆ.

220 ಮಿಲಿಯನ್ ದಕ್ಷಿಣ ಏಷ್ಯಾದ ರಾಷ್ಟ್ರವು ವಿಶ್ವದ ಅತಿದೊಡ್ಡ ಚಹಾ ಆಮದುದಾರರಾಗಿದ್ದು, 2020 ರಲ್ಲಿ $640 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಚಹಾ ಖರೀದಿಸಿದೆ. ಪಾಕಿಸ್ತಾನವು ಕೆಲವು ತಿಂಗಳುಗಳಿಂದ ತೀವ್ರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದು, ಇದು ಆಹಾರ, ಅನಿಲ ಮತ್ತು ತೈಲ ಬೆಲೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಏತನ್ಮಧ್ಯೆ, ಅದರ ವಿದೇಶಿ ಕರೆನ್ಸಿ ಮೀಸಲು ವೇಗವಾಗಿ ಕುಸಿಯುತ್ತಿದೆ. ರಾಯಿಟರ್ಸ್ ಪ್ರಕಾರ, ಸೆಂಟ್ರಲ್ ಬ್ಯಾಂಕ್ ಹೊಂದಿರುವ ನಿಧಿಗಳು ಫೆಬ್ರವರಿ ಅಂತ್ಯದಲ್ಲಿ $ 16.3 ಶತಕೋಟಿಯಿಂದ ಮೇ ತಿಂಗಳಲ್ಲಿ $ 10 ಶತಕೋಟಿಗೆ ಕುಸಿದಿದೆ.

ಇದನ್ನೂ ಓದಿ
ICC Awards: ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿ ಗೆದ್ದ ಪಾಕಿಸ್ತಾನದ ಯುವ ಮಹಿಳಾ ಕ್ರಿಕೆಟರ್
Crime News: ಮೂರು ಆಸ್ಪತ್ರೆಗಳಲ್ಲಿ 545 ಅತ್ಯಾಚಾರ ಪ್ರಕರಣಗಳು..!
ಅಂಗಾಂಗಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಚೇತರಿಕೆ ಸಾಧ್ಯವಿಲ್ಲ: ಪರ್ವೇಜ್​​ ಮುಷರಫ್ ಕುಟುಂಬ ಟ್ವೀಟ್

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 11:17 am, Thu, 16 June 22