Crime News: ಮೂರು ಆಸ್ಪತ್ರೆಗಳಲ್ಲಿ 545 ಅತ್ಯಾಚಾರ ಪ್ರಕರಣಗಳು..!
Crime News: ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮೆಟ್ರೋ ನಗರಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಮೂರು ಆಸ್ಪತ್ರೆಗಳ ಅಂಕಿಅಂಶಗಳ ಪ್ರಕಾರ 2013 ಮತ್ತು 2019 ರ ನಡುವೆ ನಗರದಲ್ಲಿ 2,500 ಅತ್ಯಾಚಾರ ಪ್ರಕರಣಗಳು ಮತ್ತು 593 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.
ಪಾಕಿಸ್ತಾನದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಮುಖ ವರದಿಯೊಂದು ಬಹಿರಂಗವಾಗಿದೆ. ಅಚ್ಚರಿ ಎಂದರೆ ಮೂರು ವರ್ಷಗಳ ಹಿಂದಿನ ಈ ವರದಿಯಲ್ಲಿ ಕೇವಲ 3 ಆಸ್ಪತ್ರೆಯಲ್ಲೇ ಒಟ್ಟು 545 ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅಂದರೆ 2019 ರಲ್ಲಿ ಕರಾಚಿಯ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ 545 ಮಂದಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾಗಿ ದಾಖಲಾಗಿದ್ದರು. ಇವರಲ್ಲಿ 407 ಮಹಿಳೆಯರು ಅತ್ಯಾಚಾರಕ್ಕೆ ಬಲಿಯಾದರೆ, 138 ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು.
ಡಾನ್ ಪತ್ರಿಕೆ ಬಿಡುಗಡೆ ಮಾಡಿರುವ ವರದಿಯಂತೆ, ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರ, ಡಾ. ರುತ್ ಫೌ ಸಿವಿಲ್ ಆಸ್ಪತ್ರೆ ಕರಾಚಿ ಮತ್ತು ಅಬ್ಬಾಸಿ ಶಹೀದ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗಾಗಿ 417 ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನು ಕರೆತರಲಾಗಿದೆ. ಆದರೆ ಪೊಲೀಸ್ ಶಸ್ತ್ರಚಿಕಿತ್ಸಕರ ಡೇಟಾವು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ವಯಸ್ಸನ್ನು ಬಹಿರಂಗಪಡಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮೆಟ್ರೋ ನಗರಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಮೂರು ಆಸ್ಪತ್ರೆಗಳ ಅಂಕಿಅಂಶಗಳ ಪ್ರಕಾರ 2013 ಮತ್ತು 2019 ರ ನಡುವೆ ನಗರದಲ್ಲಿ 2,500 ಅತ್ಯಾಚಾರ ಪ್ರಕರಣಗಳು ಮತ್ತು 593 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸ್ ಶಸ್ತ್ರಚಿಕಿತ್ಸಕ ಡಾ.ಕರಾರ್ ಅಹಮದ್ ಅಬ್ಬಾಸಿ ತಿಳಿಸಿದ್ದಾರೆ.
2013 ರಲ್ಲಿ 325, 2014 ರಲ್ಲಿ 324, 2015 ರಲ್ಲಿ 342, 2016 ರಲ್ಲಿ 360, 2017 ರಲ್ಲಿ 331, 2018 ರಲ್ಲಿ 411 ಮತ್ತು ಕಳೆದ ವರ್ಷ 407 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸಿವೆ. ಈ ಅತ್ಯಾಚಾರ ಪ್ರಕರಣಗಳಲ್ಲಿ, 1709 ಶಂಕಿತರನ್ನು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 454 ಶಂಕಿತರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆತರಲಾಗಿದೆ. ಈ ಅಂಕಿ ಅಂಶಗಳ ಮೂಲಕ ವರ್ಷದಿಂದ ವರ್ಷಕ್ಕೆ ಪಾಕಿಸ್ತಾನದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದೆ ಎಂಬುದನ್ನು ಬಹಿರಂಗಪಡಿಸಲಾಗಿದೆ.
ಇದಕ್ಕಿಂತ ದೊಡ್ಡ ಆಘಾತಕಾರಿ ವಿಷಯವೆಂದರೆ ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 87 ಅತ್ಯಾಚಾರ ಪ್ರಕರಣಗಳು ನಡೆದಿದೆ ಎಂದು ಸರ್ಕಾರವೇ ತಿಳಿಸಿದೆ. 2019ರಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಕುರಿತು ಬಿಡುಗಡೆ ಮಾಡಲಾದ ವರದಿಯಂತೆ, ಒಂದು ವರ್ಷದಲ್ಲಿ 4,05,861 ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ನಡೆದಿದೆ. ಅಲ್ಲದೆ 2019 ರಲ್ಲಿ ಮಹಿಳೆಯರ ಮೇಲೆ 32,033 ಅತ್ಯಾಚಾರ ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೊ (ಎನ್ಸಿಆರ್ಬಿ) ತಿಳಿಸಿದೆ. ಅಂದರೆ 2019 ರಲ್ಲಿ ಪ್ರತಿದಿನ 87 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು ಎಂಬುದೇ ಆಘಾತಕಾರಿ ವಿಷಯ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.