Peru Gold Mine Tragedy: ಧಗ ಧಗನೆ ಹೊತ್ತಿ ಉರಿದ ಚಿನ್ನದ ಗಣಿ, 27 ಮಂದಿ ಸಾವು

|

Updated on: May 08, 2023 | 7:52 AM

ಪೆರುವಿನ ಚಿನ್ನದ ಗಣಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ, 27 ಮಂದಿ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಘಟನೆ ನಡೆದ ಸ್ಥಳ ಚಿಕ್ಕ ಚಿನ್ನದ ಗಣಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Peru Gold Mine Tragedy: ಧಗ ಧಗನೆ ಹೊತ್ತಿ ಉರಿದ ಚಿನ್ನದ ಗಣಿ, 27 ಮಂದಿ ಸಾವು
ಚಿನ್ನದ ಗಣಿ ಅಗ್ನಿ ಅವಘಡ
Follow us on

ಪೆರುವಿನ ಚಿನ್ನದ ಗಣಿ(Gold Mine) ಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ, 27 ಮಂದಿ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಘಟನೆ ನಡೆದ ಸ್ಥಳ ಚಿಕ್ಕ ಚಿನ್ನದ ಗಣಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಚಿನ್ನದ ಗಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಯಾಂಕ್ವಿಹುವಾ ಈ ಚಿಕ್ಕ ಚಿನ್ನದ ಗಣಿ ನಡೆಸುತ್ತಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಕಂಪನಿಯಿಂದ ಯಾವುದೇ ಹೇಳಿಕೆ ನೀಡಿಲ್ಲ. ಸ್ಥಳೀಯ ಪ್ರಾಸಿಕ್ಯೂಟರ್ ಜಿಯೋವಾನಿ ಮ್ಯಾಟೋಸ್ ಸ್ಥಳೀಯ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದಾರೆ. ಚಿನ್ನದ ಗಣಿ ಬೆಂಕಿಯ ಘಟನೆಯಲ್ಲಿ 27 ಜನರು ಸಾವನ್ನಪ್ಪಿದ್ದಾರೆ, ಇದನ್ನು ಯಾಂಕ್ವಿಹುವಾ ಪೊಲೀಸ್ ಠಾಣೆ ದೃಢಪಡಿಸಿದೆ.

ಪೆರು ವಿಶ್ವದ ಅಗ್ರ ಹಾಗೂ ಎರಡನೇ ಅತಿದೊಡ್ಡ ತಾಮ್ರ ಉತ್ಪಾದಿಸುವ ದೇಶ, ಪೆರುವಿನ ಇಂಧನ ಮತ್ತು ಗಣಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಈ ಘಟನೆಯು 2000 ರಿಂದೀಚೆಗೆ ನಡೆದ ಅತ್ಯಂತ ಭೀಕರ ಗಣಿ ಅಪಘಾತವಾಗಿದೆ. ಇಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಅಪಘಾತಗಳು ನಡೆಯುತ್ತಲೇ ಇರುತ್ತವೆ.

ಮತ್ತಷ್ಟು ಓದಿ: ಚಿನ್ನದಂತಹ ಬದುಕು ನಡೆಸಬೇಕಿದ್ದ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಜೀವನ ಮೂರಾಬಟ್ಟೆಯಾಗಿದೆ! ಲಾಭವೇ ತಂದುಕೊಟ್ಟರೂ ಸರ್ಕಾರದ ನಿರ್ಲಕ್ಷ್ಯ

ಕಳೆದ ವರ್ಷ ದೇಶಾದ್ಯಂತ ಸುಮಾರು 38 ಮಂದಿ ಸಾವನ್ನಪ್ಪಿದ್ದರು. 2002 ರಲ್ಲಿ, ಪೆರುವಿನಲ್ಲಿ ವಿವಿಧ ಗಣಿಗಾರಿಕೆ ಅಪಘಾತಗಳಲ್ಲಿ ಸುಮಾರು 73 ಜನರು ಸಾವನ್ನಪ್ಪಿದ್ದರು. ದೂರದ ಕಾಂಡೆಸುಯೋಸ್ ಪ್ರಾಂತ್ಯದ ಗಣಿಯಲ್ಲಿ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಸಂತ್ರಸ್ತರ ಶವಗಳನ್ನು ಹೊರತೆಗೆಯುವ ಮೊದಲು ರಕ್ಷಣಾ ತಂಡಗಳು ಗಣಿ ಭದ್ರತೆಗೆ ಪ್ರಯತ್ನಿಸುತ್ತಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅರೆಕ್ವಿಪಾ ಪ್ರದೇಶದ ಲಾ ಎಸ್ಪೆರಾಂಜಾ ಗಣಿಯಲ್ಲಿರುವ ಸುರಂಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 7:51 am, Mon, 8 May 23