PM Modi Egypt Visit: ಪ್ರಧಾನಿ ಮೋದಿಗೆ ಈಜಿಪ್ಟ್ನಲ್ಲಿ ಆರ್ಡರ್ ಆಫ್ ದಿ ನೈಲ್ ಗೌರವ
ಅಮೆರಿಕದ ಯಶಸ್ವಿ ಪ್ರವಾಸದ ನಂತರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ತಮ್ಮ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿ ಶನಿವಾರ (ಜೂನ್ 24) ಈಜಿಪ್ಟ್ ತಲುಪಿದರು.
ಅಮೆರಿಕದ ಯಶಸ್ವಿ ಪ್ರವಾಸದ ನಂತರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ತಮ್ಮ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿ ಶನಿವಾರ (ಜೂನ್ 24) ಈಜಿಪ್ಟ್ ತಲುಪಿದರು. ಭೇಟಿಯ ಎರಡನೇ ದಿನದಂದು ಅವರಿಗೆ ರಾಜಧಾನಿ ಕೈರೋದಲ್ಲಿ ಈಜಿಪ್ಟ್‌ನ ಅತ್ಯುನ್ನತ ಪ್ರಶಸ್ತಿ ಆರ್ಡರ್ ಆಫ್ ದಿ ನೈಲ್ ಅನ್ನು ನೀಡಿ ಗೌರವಿಸಲಾಯಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಪ್ರಧಾನಿ ಮೋದಿಯವರಿಗೆ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕಳೆದ 9 ವರ್ಷಗಳಲ್ಲಿ ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡಿದ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ. ಇದಕ್ಕೂ ಮುನ್ನ ಇಲ್ಲಿ, ಕೈರೋದಲ್ಲಿರುವ ದೇಶದ 11ನೇ ಶತಮಾನದ ಅಲ್-ಹಕೀಮ್ ಮಸೀದಿಗೆ ಪ್ರಧಾನಿ ಭೇಟಿ ನೀಡಿದರು, ಇದನ್ನು ಭಾರತದ ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಪುನಃಸ್ಥಾಪಿಸಲಾಗಿದೆ.
ಮತ್ತಷ್ಟು ಓದಿ: PM Modi Egypt Visit: ನೀವು ಭಾರತದ ಹೀರೋ, ಕೈರೋದಲ್ಲಿ ಭಾರತೀಯ ಸಮುದಾಯದಿಂದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ
ಮೋದಿಯವರು ಈಜಿಪ್ಟ್ ಗ್ರ್ಯಾಂಡ್ ಮುಫ್ತಿ ಶಾಕಿ ಇಬ್ರಾಹಿಂ ಕರೀಮ್ ಅಲ್ಲಂ ಜತೆಗೂ ಕೂಡ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಶಾಕಿ ಇಬ್ರಾಹಿಂ ಅಬ್ದೆಲ್ ಕರೀಂ ಅಲ್ಲಂ ಅವರು ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದೇನೆ, ಅವರು ಭಾರತದಲ್ಲಿ ಉತ್ತಮ ನೀತಿಗಳ ಮೂಲಕ ದೇಶವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ, ಭಾರತದಂತಹ ಬೃಹತ್ ರಾಷ್ಟ್ರಕ್ಕೆ ಮೋದಿ ಉತ್ತಮ ನಾಯಕರಾಗಿದ್ದಾರೆ, ಹೀಗಾಗಿಯೇ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಗ್ರ್ಯಾಂಡ್ ಮುಫ್ತಿ ಹೇಳಿದ್ದಾರೆ.
ಪ್ರವಾಸದ ಮೊದಲ ದಿನದಂದು ಪ್ರಧಾನಿ ಮೋದಿ ಅವರು ಈಜಿಪ್ಟ್ ಪ್ರಧಾನಿ ಮುಸ್ತಫಾ ಮದ್ಬೌಲಿ ಅವರನ್ನು ರಾಜಧಾನಿ ಕೈರೋದಲ್ಲಿ ಭೇಟಿಯಾದರು. ಮುಸ್ತಫಾ ಮದ್ಬೌಲಿ ಅವರು ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ