PM Modi Egypt Visit: ನೀವು ಭಾರತದ ಹೀರೋ, ಕೈರೋದಲ್ಲಿ ಭಾರತೀಯ ಸಮುದಾಯದಿಂದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಈಜಿಪ್ಟ್(Egypt)ನಲ್ಲಿ ತಮ್ಮ ಎರಡು ದಿನಗಳ ಭೇಟಿಯನ್ನು ಆರಂಭಿಸುತ್ತಿದ್ದಂತೆ ಅಲ್ಲಿರುವ ಭಾರತೀಯ ಸಮುದಾಯದ ಸದಸ್ಯರು ಅವರನ್ನು ಭಾರತದ ಹೀರೋ ಎಂದು ಶ್ಲಾಘಿಸಿದರು.
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಈಜಿಪ್ಟ್(Egypt)ನಲ್ಲಿ ತಮ್ಮ ಎರಡು ದಿನಗಳ ಭೇಟಿಯನ್ನು ಆರಂಭಿಸುತ್ತಿದ್ದಂತೆ ಅಲ್ಲಿರುವ ಭಾರತೀಯ ಸಮುದಾಯದ ಸದಸ್ಯರು ಅವರನ್ನು ಭಾರತದ ಹೀರೋ ಎಂದು ಶ್ಲಾಘಿಸಿದರು. 26 ವರ್ಷಗಳಲ್ಲಿ ಈಜಿಪ್ಟ್‌ಗೆ ದ್ವಿಪಕ್ಷೀಯ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿಯವರಿಗೆ ರಿಟ್ಜ್ ಕಾರ್ಲ್‌ಟನ್ ಹೋಟೆಲ್‌ನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು, ಅಲ್ಲಿ ಅವರು ಪ್ರತ್ಯೇಕ ಗುಂಪುಗಳಲ್ಲಿ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು. ಅಮೆರಿಕ ಕಾಂಗ್ರೆಸ್‌ನಲ್ಲಿ ಪ್ರಧಾನಿ ಮಾಡಿದ ಭಾಷಣ ಮತ್ತು ಅವರ ನಾಯಕತ್ವದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಹೆಚ್ಚಿನ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ನೀವು ಭಾರತದ ಹೀರೋ ಎಂದು ಭಾರತೀಯ ಡಯಾಸ್ಪೊರಾ ಸದಸ್ಯರೊಬ್ಬರು ಮೋದಿಯವರಿಗೆ ಹೇಳಿದರು. ಪ್ರಧಾನಿ ಮೋದಿ ಪ್ರತಿಕ್ರಿಯಿಸಿ, ವಿದೇಶದಲ್ಲಿ ವಾಸಿಸುವವರು ಸೇರಿದಂತೆ ಪ್ರತಿಯೊಬ್ಬ ಭಾರತೀಯರ ಪ್ರಯತ್ನಗಳು ದೇಶದ ಯಶಸ್ಸಿಗೆ ಕಾರಣವಾಗಿವೆ ಎಂದು ಹೇಳಿದರು.
ಮತ್ತಷ್ಟು ಓದಿ: ಕೈರೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಐತಿಹಾಸಿಕ ಮಸೀದಿಯೊಳಗೊಂದು ಸುತ್ತು
ಶನಿವಾರ ಈಜಿಪ್ಟ್‌ಗೆ ತಮ್ಮ ಚೊಚ್ಚಲ ರಾಜ್ಯ ಪ್ರವಾಸವನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಲಸಿಗರು ಮತ್ತು ಬೋಹ್ರಾ ಸಮುದಾಯದ ಸದಸ್ಯರನ್ನು ಭೇಟಿ ಮಾಡಿದರು. ಭಾರತದ ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಪುನಃಸ್ಥಾಪಿಸಲಾದ ಕೈರೋದ ಐತಿಹಾಸಿಕ ಅಲ್-ಹಕೀಮ್ ಮಸೀದಿಗೆ ಭಾನುವಾರ ಭೇಟಿ ನೀಡಿದ್ದಾರೆ.
Deeply moved by the warm welcome from the Indian diaspora in Egypt. Their support and affection truly embody the timeless bonds of our nations. Also noteworthy was people from Egypt wearing Indian dresses. Truly, a celebration of our shared cultural linkages. pic.twitter.com/rTqQcz3tz7
— Narendra Modi (@narendramodi) June 24, 2023
ನಾನು ಕಳೆದ 27 ವರ್ಷಗಳಿಂದ ಈಜಿಪ್ಟ್‌ನಲ್ಲಿ ವಾಸಿಸುತ್ತಿದ್ದೇನೆ ಮತ್ತು ಬೋಹ್ರಾ ಸಮುದಾಯಕ್ಕೆ ಸೇರಿದ್ದೇನೆ. ಇಂದು ಪ್ರಧಾನಿ ಮೋದಿಯವರನ್ನು ಭೇಟಿಯಾಗುವುದು ಒಂದು ವಿಶಿಷ್ಟ ಅನುಭವವಾಗಿದೆ. ಪ್ರಧಾನಿ ನಮ್ಮ ಸಮುದಾಯದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. . ನಮ್ಮ ಪ್ರಧಾನಿ ನಮ್ಮನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ ಎಂದು ಭಾರತೀಯ ವಲಸಿಗರೊಬ್ಬರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ