ಭಾರತಕ್ಕೆ ಆಗಮಿಸಿದ ಯುಎಇ ಅಧ್ಯಕ್ಷರಿಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಕೆಲವೇ ಗಂಟೆಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಅವರ ಈ ಭೇಟಿ ಭಾರೀ ಕುತೂಹಲ ಮೂಡಿಸಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಯುಎಇ ಅಧ್ಯಕ್ಷರನ್ನು ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಬರಮಾಡಿಕೊಂಡರು. ವಿಮಾನ ಇಳಿಯುತ್ತಿದ್ದಂತೆ ಯುಎಇ ಅಧ್ಯಕ್ಷರಿಗೆ ಬಿಗಿಯಾದ ಅಪ್ಪುಗೆ ನೀಡಿ ಸ್ವಾಗತಿಸಿದ ಪ್ರಧಾನಿ ಮೋದಿ ಬಳಿಕ ತಮ್ಮ ಕಾರಿನಲ್ಲಿಯೇ ಅವರನ್ನು ಕರೆದುಕೊಂಡು ಹೋಗುವ ಮೂಲಕ ಮತ್ತೊಮ್ಮೆ ಕಾರು ರಾಜತಾಂತ್ರಿತೆಯಿಂದ ಗಮನ ಸೆಳೆದಿದ್ದಾರೆ.

ಭಾರತಕ್ಕೆ ಆಗಮಿಸಿದ ಯುಎಇ ಅಧ್ಯಕ್ಷರಿಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
Pm Modi With Uae President

Updated on: Jan 19, 2026 | 6:31 PM

ನವದೆಹಲಿ, ಜನವರಿ 19: ಇಂದು ಭಾರತಕ್ಕೆ ಭೇಟಿ ನೀಡಿದ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಅಪ್ಪುಗೆಯ ಮೂಲಕ ಯುಎಇ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ ವಿಮಾನ ನಿಲ್ದಾಣದಿಂದ ಹೊರಡುವ ಮುನ್ನ ಭಾರತೀಯ ಸಾಂಪ್ರದಾಯಿಕ ನೃತ್ಯ, ಡೋಲು ವಾದ್ಯಗಳ ಮೂಲಕ ಯುಎಇ ಅಧ್ಯಕ್ಷರನ್ನು ಸ್ವಾಗತಿಸಲಾಯಿತು.

ಯುಎಇ ಅಧ್ಯಕ್ಷರು ಕೇವಲ 2 ಗಂಟೆಗಳ ಕಾಲ ದೆಹಲಿಯಲ್ಲಿ ಇರಲಿದ್ದು, ನಂತರ ವಾಪಾಸ್ ತೆರಳಲಿದ್ದಾರೆ ಎನ್ನಲಾಗಿದೆ. ಇರಾನ್-ಯುಎಸ್ ಸಂಬಂಧಗಳು ಹದಗೆಟ್ಟಿರುವುದು, ಗಾಜಾದಲ್ಲಿ ನಡೆಯುತ್ತಿರುವ ಅಸ್ಥಿರತೆ, ಸೌದಿ ಅರೇಬಿಯಾ ಮತ್ತು ಯುಎಇ ಒಳಗೊಂಡ ಯೆಮೆನ್‌ನಲ್ಲಿ ಬಗೆಹರಿಯದ ಸಂಘರ್ಷದಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಈ ಸಮಯದಲ್ಲಿ ಈ ಭೇಟಿ ಮಹತ್ವ ಪಡೆದಿದೆ.


ಇಂದು ಸಂಜೆ ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷರು ದೆಹಲಿಯ ಪ್ರಧಾನಿ ನಿವಾಸದಲ್ಲಿ ವಿಶೇಷವಾದ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಯ ಸಮಯದಲ್ಲಿ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಮತ್ತು ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಪ್ರಧಾನಿ ಮೋದಿ ಮುಂದೆ 10 ಸಾವಿರ ಕಲಾವಿದರಿಂದ ಬಾಗುರುಂಬಾ ನೃತ್ಯ ಪ್ರದರ್ಶನ

ನನ್ನ ಸಹೋದರರಾದ ಯುಎಇ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಸ್ವಾಗತಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅವರ ಭೇಟಿ ಅವರು ಭಾರತ-ಯುಎಇ ಸ್ನೇಹಕ್ಕೆ ನೀಡುವ ಮಹತ್ವವನ್ನು ತೋರಿಸುತ್ತದೆ. ನಮ್ಮ ಚರ್ಚೆಗಳಿಗಾಗಿ ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.


ಯುಎಇ ಅಧ್ಯಕ್ಷರಾದ ನಂತರ ಅಲ್ ನಹ್ಯಾನ್ ಅವರು ಭಾರತಕ್ಕೆ ನೀಡುತ್ತಿರುವ ಮೂರನೇ ಅಧಿಕೃತ ಭೇಟಿ ಇದಾಗಿದೆ. ಒಟ್ಟಾರೆಯಾಗಿ, ಭಾರತಕ್ಕೆ ಇದು ಅವರ 5ನೇ ಭೇಟಿ. ಇರಾನ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಗಳು 5,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ನಂತರ ಉದ್ವಿಗ್ನತೆ ಹೆಚ್ಚಿರುವ ಬೆನ್ನಲ್ಲೇ ಅಲ್ ನಹ್ಯಾನ್ ಭಾರತಕ್ಕೆ ಇಂದು ಭೇಟಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ