Video: ರೋಮ್​​ನಲ್ಲಿ ಶಿವ ಸ್ತೋತ್ರ ಪಠಿಸಿದ ಯುವತಿಯೆದುರು ಕೈ ಮುಗಿದು ನಿಂತ ಪ್ರಧಾನಿ ಮೋದಿ; ಕೇಮ್​ ಚೋ ಎಂಬ ಪ್ರಶ್ನೆಗೆ ಸೂಪರ್​ ಉತ್ತರ

| Updated By: Lakshmi Hegde

Updated on: Oct 30, 2021 | 12:13 PM

ಪ್ರಧಾನಿ ನರೇಂದ್ರ ಮೋದಿ ಇಂದು ಜಿ 20 ಶೃಂಗಸಭೆಯಲ್ಲಿ, ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ ಸೇರಿ ಇತರ ಜಾಗತಿಕ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ.  ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಬಳಿಕ ಪ್ರಧಾನಿ ಮೋದಿ ವ್ಯಾಟಿಕನ್​ ಸಿಟಿಗೆ ಭೇಟಿಕೊಡಲಿದ್ದಾರೆ.

Video: ರೋಮ್​​ನಲ್ಲಿ ಶಿವ ಸ್ತೋತ್ರ ಪಠಿಸಿದ ಯುವತಿಯೆದುರು ಕೈ ಮುಗಿದು ನಿಂತ ಪ್ರಧಾನಿ ಮೋದಿ; ಕೇಮ್​ ಚೋ ಎಂಬ ಪ್ರಶ್ನೆಗೆ ಸೂಪರ್​ ಉತ್ತರ
ನರೇಂದ್ರ ಮೋದಿಯವರ ಎದುರು ಶಿವನ ಸ್ತೋತ್ರ ಪಠಿಸಿದ ಯುವತಿ
Follow us on

ಪ್ರಧಾನಿ ನರೇಂದ್ರ ಮೋದಿ (PM Modi)ಯವರು ನಿನ್ನೆಯಿಂದ ಇಟಲಿ ಪ್ರವಾಸದಲ್ಲಿದ್ದಾರೆ. ಇಂದು ನಡೆಯಲಿರುವ ಜಿ20 ಶೃಂಗಸಭೆ(G 20 Summit)ಯಲ್ಲಿ ಅವರು ಮಾತನಾಡಲಿದ್ದಾರೆ. ನಿನ್ನೆ ಬೆಳಗ್ಗೆ 9.40ರ ಹೊತ್ತಿಗೆ ಇಟಲಿ ತಲುಪಿರುವ ಅವರು ಮೊದಲು ರೋಮ್​​ನಲ್ಲಿರುವ ಪಿಯಾಝಾ ಗಾಂಧಿಗೆ ಭೇಟಿ ನೀಡಿ, ಅಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಗೌರವ ನಮನ ಸಲ್ಲಿಸಿದರು. ಅಲ್ಲಿರುವ ಭಾರತೀಯ ಮೂಲದವರ ಜತೆ ಸಂವಾದದಲ್ಲಿ ಪಾಲ್ಗೊಂಡರು.

ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಲ್ಲಿರುವ ಭಾರತೀಯವರು ಶಿವ ತಾಂಡವ ಸ್ತೋತ್ರ ಪಠಿಸುವ ಮೂಲಕ ಸ್ವಾಗತಿಸಿದ್ದರು. ಅದಾದ ಮೇಲೆ ಗಾಂಧಿಗೆ ಗೌರವ ಸಲ್ಲಿಸುವ ವೇಳೆ ನೆರೆದಿದ್ದ ಭಾರತೀಯ ಮೂಲದ ಜನರು, ಮೋದಿಯವರ ಬಳಿ ಗುಜರಾತಿ ಭಾಷೆಯಲ್ಲಿ ‘ನರೇಂದ್ರ ಭಾಯ್​ ಕೆಮ್​ ಚೋ?’ ಎಂದು ಕೇಳಿದ್ದಾರೆ. ಅಂದರೆ ಹೇಗಿದ್ದೀರಿ(How Are You)? ಎಂದು ಅರ್ಥ. ಪ್ರಧಾನಿ ನರೇಂದ್ರ ಮೋದಿಯವರು ಅದಕ್ಕೆ ಪ್ರತಿಯಾಗಿ ಗುಜರಾತಿ ಭಾಷೆಯಲ್ಲೇ ಉತ್ತರ ನೀಡಿದ್ದು, ಮಾಜಾ ಮಾಚೋ ( Maja ma chho-ನಾನು ಚೆನ್ನಾಗಿದ್ದೇನೆ) ಎಂದು ನಗುತ್ತ ಹೇಳಿದ್ದಾರೆ. ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್​ ಆಗಿದೆ.

ಮೊದಲು ಯುವತಿ ಮತ್ತಿಬ್ಬರು ಸೇರಿ ಪ್ರಧಾನಿ ಮೋದಿ ಎದುರು ಶಿವ ತಾಂಡವ ಸ್ತೋತ್ರ ಪಠಿಸುತ್ತಾರೆ. ಅವರ ಕೈಯಲ್ಲಿ ಭಾರತದ ಧ್ವಜ ಕೂಡ ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರು ಸ್ತ್ರೋತ್ರ ಹೇಳುವಷ್ಟೂ ಹೊತ್ತು ಪ್ರಧಾನಿ ಕೈ ಮುಗಿದು ನಿಲ್ಲುತ್ತಾರೆ. ಕೊನೆಯಲ್ಲಿ ಓಂ ನಮಃ ಶಿವಾಯ ಎಂದು ಯುವತಿಯೊಟ್ಟಿಗೆ ಇವರೂ ಧ್ವನಿಗೂಡಿಸುತ್ತಾರೆ. ಅದಾದ ಬಳಿಕ ಮಹಿಳೆಯೊಬ್ಬರು ಕೇಮ್ ಚೋ ಎಂದು ಪ್ರಶ್ನಿಸುತ್ತಾರೆ. ಆಗ ಮಜಾ ಮಾ ಎಂದು ಪ್ರಧಾನಿ ಉತ್ತರಿಸುತ್ತಾರೆ.ಅಲ್ಲಿರುವವರೆಲ್ಲ ಭಾರತ್​ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಲೇ ಇರುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಜಿ 20 ಶೃಂಗಸಭೆಯಲ್ಲಿ, ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ ಸೇರಿ ಇತರ ಜಾಗತಿಕ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ.  ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಬಳಿಕ ಪ್ರಧಾನಿ ಮೋದಿ ವ್ಯಾಟಿಕನ್​ ಸಿಟಿಗೆ ಭೇಟಿಕೊಡಲಿದ್ದಾರೆ. ಪೋಪ್ ಫ್ರಾನ್ಸಿಸ್​ ಮತ್ತು ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್​ ಪಿಯೆಟ್ರೋ ಪರೋಲಿನ್​​ರನ್ನು ಭೇಟಿ ಮಾಡುವರು.  ಇಟಲಿಗೆ ಹೋಗುವ ಪೂರ್ವದಲ್ಲಿ ಮಾತನಾಡಿದ್ದ ಅವರು, ಸದ್ಯದ ಜಾಗತಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಈ ಜಿ20 ಶೃಂಗಸಭೆ ನಮಗೆ ವೇದಿಕೆಯಾಗಿದೆ. ಹಾಗೇ, ಆರ್ಥಿಕ ಸಬಲೀಕರಣ, ಸಾಂಕ್ರಾಮಿಕದಿಂದ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು, ಸ್ಥಿತಿಸ್ಥಾಪಕತ್ವ ಅಭಿವೃದ್ಧಿ ಸ್ಥಾಪಿಸಲು ಜಿ20 ಹೇಗೆ ಎಂಜಿನ್​ ಆಗಬಹುದು ಎಂಬುದನ್ನು ನಾವು ಚರ್ಚಿಸಲಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ:Covid-19 Origin: ಕೊವಿಡ್-19 ಮೂಲ ತಿಳಿಯಲು ಎಂದಿಗೂ ಸಾಧ್ಯವಾಗದಿರಬಹುದು ಎನ್ನುತ್ತಿವೆ ಅಮೆರಿಕ ಗುಪ್ತಚರ ಸಂಸ್ಥೆಗಳು

ಅಪ್ಪು ಯುವ ಜನತೆ ಹೃದಯದಲ್ಲಿ ಉಳಿದಿದ್ದಾರೆ; ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದ ರಾಜ್ಯಪಾಲ ಟಿಸಿ ಗೆಹ್ಲೋಟ್