Covid-19 Origin: ಕೊವಿಡ್-19 ಮೂಲ ತಿಳಿಯಲು ಎಂದಿಗೂ ಸಾಧ್ಯವಾಗದಿರಬಹುದು ಎನ್ನುತ್ತಿವೆ ಅಮೆರಿಕ ಗುಪ್ತಚರ ಸಂಸ್ಥೆಗಳು

ಕೊವಿಡ್-19 ಸೋಂಕಿನ ಮೂಲವನ್ನು ಎಂದಿಗೂ ತಿಳಿಯಲು ಸಾಧ್ಯವಾಗದಿರಬಹುದು ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ತಮ್ಮ ವರದಿಯಲ್ಲಿ ಹೇಳಿವೆ.

Covid-19 Origin: ಕೊವಿಡ್-19 ಮೂಲ ತಿಳಿಯಲು ಎಂದಿಗೂ ಸಾಧ್ಯವಾಗದಿರಬಹುದು ಎನ್ನುತ್ತಿವೆ ಅಮೆರಿಕ ಗುಪ್ತಚರ ಸಂಸ್ಥೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 30, 2021 | 11:47 AM

ಅಮೆರಿಕದ ಗುಪ್ತಚರ ಸಂಸ್ಥೆ ಶುಕ್ರವಾರ ಹೇಳಿರುವ ಪ್ರಕಾರ, ಕೊವಿಡ್- 19 ಕಾಯಿಲೆ ಮೂಲವನ್ನು ಅವರು ಗುರುತಿಸಲು ಎಂದಿಗೂ ಸಾಧ್ಯವಾಗದಿರಬಹುದು. ಹೊಸದಾಗಿ, ಹೆಚ್ಚು ಮಾಹಿತಿಯುಳ್ಳ ತಮ್ಮ ಪರಿಶೀಲನೆಯ ಅವತರಣಿಕೆಯಲ್ಲಿ ಈ ಅಂಶ ತಿಳಿಸಿದ್ದಾರೆ. ಈ ಕೊರೊನಾ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡಿತೆ ಅಥವಾ ಪ್ರಯೋಗಾಲಯದಿಂದ ಸೋರಿಕೆ ಆಯಿತೆ ಎಂಬುದು ಈ ಪರಿಶೀಲನೆಯ ಹೂರಣ. ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ (ODNI) ಈ ಬಗ್ಗೆ ತಿಳಿಸಿರುವಂತೆ, ಮನುಷ್ಯರಿಗೆ ಸಾರ್ಸ್-COV-2 ಮೊದಲಿಗೆ ಹೇಗೆ ಸೋಂಕು ಹಬ್ಬಿತು ಅನ್ನೋದು ಸಹಜವಾದ ಮೂಲ ಮತ್ತು ಪ್ರಯೋಗಾಲಯದ ಸೋರಿಕೆ ಎರಡೂ ವಾದವನ್ನು ಗಮನದಲ್ಲಿ ಇಟ್ಟುಕೊಂಡು, ಪರಿಶೀಲನೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಆದರೆ ವಿಶ್ಲೇಷಕರು ಯಾವುದೇ ನಿರ್ದಿಷ್ಟ ಅಥವಾ ಹೆಚ್ಚಿನ ಸಾಧ್ಯತೆ ಬಗ್ಗೆ ಹೀಗೇ ಎಂದು ಮೌಲ್ಯಮಾಪನ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿರುವುದಾಗಿ ವರದಿ ಹೇಳಿದೆ.

ಕೊರೊನಾ ಸೋಂಕನ್ನು ಜೈವಿಕ ಅಸ್ತ್ರದಂತೆ ಬಳಸಲು ಸೃಷ್ಟಿಸಿದ್ದು ಎಂಬ ಗುಮಾನಿಯನ್ನು ಸಹ ವರದಿಯಲ್ಲಿ ನಿರಾಕರಿಸಲಾಗಿದೆ. ಈ ವಾದಕ್ಕೆ, “ವುಹಾನ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಗೆ ನೇರ ಸಂಪರ್ಕ ಇಲ್ಲ” ಮತ್ತು ತಪ್ಪಾದ ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ವರದಿ ಬಿಡುಗಡೆ ಆಗಿರುವುದು ಶುಕ್ರವಾರ (ಅಕ್ಟೋಬರ್ 29, 2021). ಆಗಸ್ಟ್​ನಲ್ಲಿ ಜೋ ಬೈಡನ್ ಆಡಳಿತ ಬಿಡುಗಡೆ ಮಾಡಿದ ವರದಿಯ 90 ದಿನಗಳ ಪರಿಶೀಲನೆಯ ಅಪ್​ಡೇಟ್​ ಇದಾಗಿದೆ. ರಾಜಕೀಯ ಒಳಜಗಳ ಮುಂದು ಮಾಡಿಕೊಂಡು ಜಾಗತಿಕ ಮಟ್ಟದಲ್ಲಿ ಕೊರೊನಾ ಹಬ್ಬಲು ಚೀನಾ ಕಾರಣ ಎಂದು ನಿಂದಿಸುವ ಬದಲಿಗೆ ಸರ್ಕಾರಗಳು ತಮ್ಮ ನಾಗರಿಕರ ರಕ್ಷಣೆಗೆ ಶೀಘ್ರವಾಗಿ ಧಾವಿಸಬೇಕಿತ್ತು ಎಂದು ಮಾತುಗಳು ಕೇಳಿಬರುತ್ತಿರುವ ಮಧ್ಯೆ ಈ ವರದಿ ಬಂದಿದೆ.

ಅಮೆರಿಕದ ನಡೆ ರಾಜಕೀಯ ಪ್ರಹಸನ ಚೀನಾವು ಈ ವರದಿಯನ್ನು ಟೀಕಿಸಿದೆ. “ಕೊವಿಡ್-19 ಮೂಲವನ್ನು ಪತ್ತೆಹಚ್ಚಲು ವಿಜ್ಞಾನಿಗಳ ಬದಲಿಗೆ ತನ್ನ ಗುಪ್ತಚರ ಇಲಾಖೆಯನ್ನು ಅವಲಂಬಿಸಿರುವ ಅಮೆರಿಕದ ನಡೆ ಸಂಪೂರ್ಣ ರಾಜಕೀಯ ಪ್ರಹಸನ,” ಎಂದು ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “… ಇದು ವಿಜ್ಞಾನ-ಆಧಾರಿತ ಮೂಲಗಳ ಅಧ್ಯಯನವನ್ನು ದುರ್ಬಲಗೊಳಿಸುತ್ತದೆ ಮತ್ತು ವೈರಸ್‌ ಮೂಲವನ್ನು ಕಂಡುಹಿಡಿಯುವ ಜಾಗತಿಕ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ,” ಎಂದು ಹೇಳಿಕೆ ತಿಳಿಸಿದೆ. ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಮರು ಆಯ್ಕೆ ಬಯಸಿ ಚುನಾವಣೆಗೆ ನಿಂತಿದ್ದರು. ಆದರೆ ಕೊರೊನಾ ಹೊಡೆತಕ್ಕೆ ಅಮೆರಿಕ ಆರ್ಥಿಕತೆ ತತ್ತರಿಸಿತ್ತು. ಟ್ರಂಪ್ ಚುನಾವಣೆ ಸೋತರು. ಆ ವೇಳೆ ಅವರ ಬೆಂಬಲಿಗರು, ಕೊರೊನಾವನ್ನು “ಚೀನಾ ವೈರಸ್” ಎಂದು ಕರೆದಿದ್ದರು.

ಅಮೆರಿಕದ ಕೆಲವು ಗುಪ್ತಚರ ಸಂಸ್ಥೆಗಳು ಕೊರೊನಾ ಸೋಂಕು ಪ್ರಕೃತಿಯಿಂದಲೇ ಹುಟ್ಟಿಕೊಂಡಿದ್ದು ಎಂಬ ವಾದದ ಪರವಾಗಿ ಪ್ರಬಲವಾಗಿ ನಿಂತಿವೆ. ಆದರೆ ಈ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಸಾಕ್ಷ್ಯ ಇದ್ದು, ಈಚೆಗೆ ಕೊರೊನಾ ಸೋಂಕು ವ್ಯಾಪಕವಾಗಿ ಹಾಗೂ ಸಹಜವಾಗಿ ವನ್ಯ ಪ್ರಾಣಿಗಳಲ್ಲಿ ಹಬ್ಬುತ್ತಿದೆ. ODNI ವರದಿ ಹೇಳಿರುವಂತೆ, ಕೊರೊನಾವು ಸೋಂಕಿತ ಪ್ರಾಣಿಗಳು ಅಥವಾ ಸಂಬಂಧಿಸಿದ ವೈರಾಣು ಮೂಲದ್ದಾಗಿದೆ ಎಂಬುದರಲ್ಲಿ ಅಮೆರಿಕದ ನಾಲ್ಕು ಗುಪ್ತಚರ ಸಂಸ್ಥೆಗಳು ಮತ್ತು ವಿವಿಧ ಸಂಸ್ಥೆಗಳು “ಕಡಿಮೆ ವಿಶ್ವಾಸ” ಹೊಂದಿವೆ. ಆದರೆ ಒಂದು ಸಂಸ್ಥೆ ಮಾತ್ರ ಮೊದಲಿಗೆ ಮನುಷ್ಯರೊಬ್ಬರಲ್ಲಿ ಕೊವಿಡ್-19 ಸೋಂಕು ಬಂದಿರುವ ಸಾಧ್ಯತೆ ಪ್ರಯೋಗಾಲಯದ ಅಪಘಾತದಿಂದ ಎಂಬ ವಾದದಲ್ಲಿ ಸಾಧಾರಣವಾದ ವಿಶ್ವಾಸ ವ್ಯಕ್ತಪಡಿಸಿದೆ. ಅದು ವುಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಡೆದ ಪ್ರಯೋಗ ಅಥವಾ ಪ್ರಾಣಿಗಳ ನಿರ್ವಹಣೆ ವೇಳೆ ಸಂಭವಿಸಿರಬಹುದು ಎಂದು ಹೇಳಲಾಗಿದೆ.

ನಿರ್ದಿಷ್ಟವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಕೊವಿಡ್-19 ಕಾಣಿಸಿಕೊಳ್ಳುವ ಮುನ್ನ ಸಂಬಂಧ ಪಟ್ಟ ಸೋಂಕು ಅಥವಾ ವುಹಾನ್ ಪ್ರಯೋಗಾಲಯದಲ್ಲಿ ಸೋಂಕು ನಿರ್ವಹಿಸುವ ವೇಳೆಯಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಬಂದಿದೆ ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಹೊಸ ಮಾಹಿತಿಯ ಅಗತ್ಯ ಇದೆ. ಈ ಸಂಬಂಧವಾಗಿ ಹೆಚ್ಚು ನಿಖರವಾದ ವಿವರಣೆಯನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ನಂಬುವುದಾಗಿ ಅಮೆರಿಕದ ಗುಪ್ತಚರ ಸಂಸ್ಥೆಯು ಹೇಳಿದೆ. ವರದಿಯಲ್ಲಿ ಹೇಳಿರುವ ಪ್ರಕಾರ, ಅಮೆರಿಕದ ಸಂಸ್ಥೆಗಳು ಹಾಗೂ ಜಾಗತಿಕ ವಿಜ್ಞಾನ ಸಮುದಾಯಕ್ಕೆ ಕೊವಿಡ್​-19 ಪ್ರಕರಣಗಳ ಆರಂಭದ ಕ್ಲಿನಿಕಲ್ ಮಾದರಿಗಳು ಅಥವಾ ರೋಗದ ಬಗೆಗಿನ ದತ್ತಾಂಶಗಳು ಲಭ್ಯವಾಗಿಲ್ಲ. ಒಂದು ವೇಳೆ ಇನ್ನಷ್ಟು ಸಾಕ್ಷ್ಯ ಸಿಕ್ಕಲ್ಲಿ ಈಗ ತುದಿ ಕಾಣದೆ ಉಳಿದಿರುವ ಅಂಶಗಳ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸುವುದಾಗಿ ಹೇಳಲಾಗಿದೆ.

ಕೊವಿಡ್ ಮೂಲವನ್ನು ತಿಳಿಯುವುದಕ್ಕೆ ಚೀನಾವು ಸಹಕಾರ ನೀಡುತ್ತಿಲ್ಲ ಎಂದು ಅಂತರರಾಷ್ಟ್ರೀಯ ಸಮುದಾಯದ ಟೀಕೆಯನ್ನು ಎದುರಿಸುತ್ತಿದೆ. ಚೀನಾ ರಾಯಭಾರ ಕಚೇರಿಯ ಹೇಳಿಕೆಯಲ್ಲಿ ಆ ಟೀಕೆಯನ್ನು ಸಹ ನಿರಾಕರಿಸಲಾಗಿದೆ. “ವಿಜ್ಞಾನ ಆಧಾರಿತ ಮೂಲದ ಗುರುತಿಸುವಿಕೆಯನ್ನು ನಾವು ಬೆಂಬಲಿಸುತ್ತಿದ್ದೇವೆ. ನಾವು ಸಕ್ರಿಯವಾಗಿ ತೊಡಗಿಕೊಂಡಿರುತ್ತೇವೆ. ಈ ವಿಚಾರ ರಾಜಕೀಯಗೊಳಿಸುವ ಯಾವುದೇ ಪ್ರಯತ್ನವನ್ನು ನಾವು ಬಲವಾಗಿ ವಿರೋಧಿಸುತ್ತೇವೆ,” ಎಂದು ಹೇಳಲಾಗಿದೆ. ​

ಇದನ್ನೂ ಓದಿ: ಕೊರೊನಾ ವೈರಾಣುವಿನ ಮೂಲ ಕಂಡುಹಿಡಿಯಲು ಹಲವು ರಾಷ್ಟ್ರಗಳ ಕಸರತ್ತು; ಇದೀಗ ಆ ಗುಂಪಿಗೆ ಭಾರತವೂ ಸೇರ್ಪಡೆ

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ