Sun Flare: ಸೂರ್ಯನಿಂದ ಸೌರ ಜ್ವಾಲೆಗಳ ಸಿಡಿತ; ಭೂಮಿಯ ಜಿಪಿಎಸ್​ ಸಂಕೇತದ ತಡೆ ಸಾಧ್ಯತೆ ಎಂದ ನಾಸಾ

ಸೂರ್ಯನಿಂದ ಚಿಮ್ಮುವ ಸೌರ ಜ್ವಾಲೆಗಳು ಭೂಮಿಯ ಜಿಪಿಎಸ್​ ವ್ಯವಸ್ಥೆಗೆ ಅಡೆತಡೆ ಒಡ್ಡಬಹುದು ಎಂದು ನಾಸಾ ವರದಿ ಮಾಡಿದೆ. ಆ ಬಗ್ಗೆ ವಿವರ ಇಲ್ಲಿದೆ.

Sun Flare: ಸೂರ್ಯನಿಂದ ಸೌರ ಜ್ವಾಲೆಗಳ ಸಿಡಿತ; ಭೂಮಿಯ ಜಿಪಿಎಸ್​ ಸಂಕೇತದ ತಡೆ ಸಾಧ್ಯತೆ ಎಂದ ನಾಸಾ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 30, 2021 | 1:10 PM

ಬಾಹ್ಯಾಕಾಶದ ಹವಾಮಾನ ಘಟನೆಗಳನ್ನು ಟ್ರ್ಯಾಕ್ ಮಾಡುವ ಅಮೆರಿಕದ ಸ್ಪೇಸ್​ ವೆದರ್ ಪ್ರೆಡಿಕ್ಷನ್ ಸೆಂಟರ್ (SWPC) ಪ್ರಮುಖ ಸಂಗತಿಯನ್ನು ತಿಳಿಸಿದೆ. ಸೂರ್ಯನಲ್ಲಿನ X1- ಕ್ಲಾಸ್ ಜ್ವಾಲೆಗಳು ತಾತ್ಕಾಲಿಕ, ಆದರೆ ಪ್ರಬಲವಾದ ರೇಡಿಯೋ ತಡೆಯನ್ನು ದಕ್ಷಿಣ ಅಮೆರಿಕದ ಮಧ್ಯದಲ್ಲಿ ಇರುವಂತೆ ರಶ್ಮಿ ಎಲ್ಲೆಲ್ಲಿ ಬೀಳುತ್ತದೋ ಆ ಕಡೆಯ ಭೂಮಿಯ ಮಧ್ಯದಲ್ಲಿ ಒಡ್ಡಬಹುದು ಎಂದು ತಿಳಿಸಿದೆ. ಈ ಜ್ವಾಲೆ ಸೂರ್ಯನಲ್ಲಿ ಕಾಣಿಸಿಕೊಳ್ಳುವ ಸ್ಥಳವನ್ನು AR2887 ಎಂದು ಕರೆಯಲಾಗುತ್ತದೆ. ಅದು ಸದ್ಯಕ್ಕೆ ಸೂರ್ಯನ ಮಧ್ಯಭಾಗದಲ್ಲಿ ಇದ್ದು, ಭೂಮಿಯ ಕಡೆಗೆ ಮುಖ ಮಾಡಿದೆ ಎಂದು spaceweather.com ವರದಿ ಮಾಡಿದೆ. ಈ ಸೌರ ಜ್ವಾಲೆಗಳು ರೇಡಿಯೇಷನ್​ನ ಪ್ರಬಲ ಸಿಡಿತವಾಗಿದೆ. ಈ ಜ್ವಾಲೆಯಿಂದ ಹೊರಸೂಸುವ ಹಾನಿಕಾರಕ ರೇಡಿಯೇಷನ್ ಭೂಮಿಯ ವಾತಾವರಣದಲ್ಲಿ ಹಾದುಹೋಗಲು ಸಾಧ್ಯವಿಲ್ಲ. ಆದ್ದರಿಂದ ಭೌತಿಕವಾಗಿ ಮನುಷ್ಯರ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ. ಆದರೆ ಜಿಪಿಎಸ್ ಮತ್ತು ಸಂವಹನದ ಸಂಕೇತಗಳು ಪಯಣಿಸುವ ವಾತಾವರಣದ ಪದರದಲ್ಲಿ ಈ ರೇಡಿಯೇಷನ್​ನಿಂದ ತೊಂದರೆ ಎದುರಾಗಬಹುದು. ಇದರಿಂದ ಭೂಮಿಯ ಉತ್ತರ ಬೆಳಕು (auroras) ಸೂಪರ್​ಚಾರ್ಜ್ ಕೂಡ ಆಗಬಹುದು.

ಇನ್ನೂ ಮುಂದುವರಿದು ನಾಸಾ (NASA) ವಿವರಿಸಿರುವಂತೆ, X-Class ಅಂದರೆ ಬಹಳ ತೀಕ್ಷ್ಣವಾದ ಜ್ವಾಲೆಗಳು. ಇನ್ನು ಆ ಸಂಖ್ಯೆಯು ಅದರ ಸಾಮರ್ಥ್ಯದ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ನೀಡುತ್ತದೆ. X2 ಎಂಬುದು X1ಗಿಂತ ದುಪ್ಪಟ್ಟು ತೀಕ್ಷ್ಣವಾಗಿರುತ್ತದೆ. ಇನ್ನು X3 ಎಂಬುದು ಮೂರು ಪಟ್ಟು ಹೆಚ್ಚು ತೀಕ್ಷ್ಣ. X10 ಎಂದು ಗುರುತಿಸುವ ವರ್ಗೀಕರಿಸುವ ಜ್ವಾಲೆಗಳು ಹೆಚ್ಚು ತೀಕ್ಷ್ಣವಾಗಿರುತ್ತವೆ. SpaceWeather.com ಪ್ರಕಾರ, ಇದು “ಭಾರೀ ಪ್ರಮಾಣದ ಪ್ಲಾಸ್ಮಾ ಸುನಾಮಿಯನ್ನು ಸೌರ ಮೇಲ್ಮೈಯಲ್ಲಿ ಸೃಷ್ಟಿಸಿದೆ: ಪ್ಲಾಸ್ಮಾ ಅಲೆಗಳು 1,00,000 ಕಿಲೋಮೀಟರ್ ಎತ್ತರಕ್ಕೆ ಇದ್ದು ಮತ್ತು ಸೂರ್ಯನ ವಾತಾವರಣದಲ್ಲಿ ಗಂಟೆಗೆ 16 ಲಕ್ಷ ಮೈಲಿಗೂ ಹೆಚ್ಚಿನ ವೇಗದಲ್ಲಿ ಚಲಿಸುತ್ತಿದೆ,” ಎನ್ನಲಾಗಿದೆ.

NOAA ವಿಶ್ಲೇಷಕರ ಅಂದಾಜಿನ ಪ್ರಕಾರ, ಇದು ಭೂಮಿಯನ್ನು “ಶೇ 60ರಷ್ಟು ಸಾಧ್ಯತೆಗಳು M-ಕ್ಲಾಸ್ ಜ್ವಾಲೆಗಳು ಮತ್ತು ಶೇ 25ರಷ್ಟು ಸಾಧ್ಯತೆಗಳು X-ಜ್ವಾಲೆಗಳು ಮುಂದಿನ 24 ಗಂಟೆಯಲ್ಲಿ ತಲುಪುವ ಸಾಧ್ಯತೆ ಇದೆ.” M-ಕ್ಲಾಸ್ ಜ್ವಾಲೆಗಳು ಮಧ್ಯಮ ಗಾತ್ರದ್ದು: ಅವುಗಳು ಅಲ್ಪ ಪ್ರಮಾಣದ ರೇಡಿಯೋ ತಡೆಗಳನ್ನು ಒಡ್ಡಬಹುದು. ಇದರಿಂದ ಭೂಮಿಯ ಧ್ರುವ ಪ್ರದೇಶದ ಮೇಲೆ ಪರಿಣಾಮ ಬೀರಬಹುದು. C-ಕ್ಲಾಸ್ ಜ್ವಾಲೆಗಳು ಕಡಿಮೆ ಪ್ರಮಾಣದ್ದಾಗಿದ್ದು, ಅಲ್ಪ ಪ್ರಮಾಣದ ಗಮನಾರ್ಹವಾದ ಪರಿಣಾಮವನ್ನು ಭೂಮಿ ಮೇಲೆ ಬೀರುತ್ತದೆ.

ಇದನ್ನೂ ಓದಿ: ನಾಸಾದ ಹಬಲ್ ಹಂಚಿಕೊಂಡ ಆಕರ್ಷಕ ಗೆಲಾಕ್ಸಿ ಫೋಟೋಗಳು ವಿಶ್ವದ ಸುಂದರ ಚಿತ್ರಣಕ್ಕೆ ಸಾಕ್ಷಿಯಾಗಿದೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್