ಫೈಜರ್ ಲಸಿಕೆ ಸ್ವೀಕರಿಸಿದ 48 ಗಂಟೆಯಲ್ಲಿ ಆರೋಗ್ಯ ಕಾರ್ಯಕರ್ತೆ ಸಾವು.. ಕಾರಣಕ್ಕಾಗಿ ಹುಡುಕಾಟ
ಫೈಜರ್ ಸಂಸ್ಥೆಯ ಲಸಿಕೆ ಸ್ವೀಕರಿಸಿದ ಹಲವರಲ್ಲಿ ಸಮಸ್ಯೆ ತಲೆದೋರಿರುವ ಕುರಿತು ಈ ಹಿಂದೆ ವರದಿಗಳಾಗಿದ್ದವು. ಆದರೆ, ಈ ಪ್ರಕರಣದಲ್ಲಿ ಕೊರೊನಾ ಲಸಿಕೆ ಸ್ವೀಕರಿಸಿದ ನಂತರ ಸೋನಿಯಾ ಆರೋಗ್ಯದಲ್ಲಿ ಏರುಪೇರಾಗಿರುವ ಲಕ್ಷಣಗಳೇನೂ ಕಂಡುಬಂದಿರಲಿಲ್ಲ.
ಲಿಸ್ಬನ್: ಫೈಜರ್ ಸಂಸ್ಥೆಯ ಕೊವಿಡ್ ಲಸಿಕೆ ಸ್ವೀಕರಿಸಿದ್ದ ಆರೋಗ್ಯ ಕಾರ್ಯಕರ್ತೆ ಇದ್ದಕ್ಕಿದ್ದಂತೆ ಮೃತಪಟ್ಟಿರುವ ಆಘಾತಕಾರಿ ಘಟನೆ ಪೋರ್ಚುಗಲ್ನಲ್ಲಿ ನಡೆದಿದೆ. 41 ವರ್ಷ ವಯಸ್ಸಿನ ಆರೋಗ್ಯ ಕಾರ್ಯಕರ್ತೆ, ಸೋನಿಯಾ ಅಕೆವೆಡೋ ಎಂಬಾಕೆ ಲಸಿಕೆ ಸ್ವೀಕರಿಸಿದ 48 ಗಂಟೆಯಲ್ಲಿ ಸಾವಿಗೀಡಾಗಿದ್ದಾಳೆ.
ಫೈಜರ್ ಸಂಸ್ಥೆಯ ಲಸಿಕೆ ಸ್ವೀಕರಿಸಿದ ಹಲವರಲ್ಲಿ ಸಮಸ್ಯೆ ತಲೆದೋರಿರುವ ಕುರಿತು ಈ ಹಿಂದೆ ವರದಿಗಳಾಗಿದ್ದವು. ಆದರೆ, ಈ ಪ್ರಕರಣದಲ್ಲಿ ಕೊರೊನಾ ಲಸಿಕೆ ಸ್ವೀಕರಿಸಿದ ನಂತರ ಸೋನಿಯಾ ಆರೋಗ್ಯದಲ್ಲಿ ಏರುಪೇರಾಗಿರುವ ಲಕ್ಷಣಗಳೇನೂ ಕಂಡುಬಂದಿರಲಿಲ್ಲ. ಅದಾಗ್ಯೂ ಆಕೆಯ ಸಾವಿಗೆ ಕಾರಣಗಳೇನು? ಲಸಿಕೆಯಿಂದ ಸಾವು ಸಂಭವಿಸಿರಬಹುದೇ? ಎಂಬ ವಿಚಾರಗಳು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಬಯಲಾಗಬೇಕಿದೆ.
ಸೋನಿಯಾ ಅಕಾಲಿಕ ಸಾವಿನಿಂದ ದಿಗ್ಭ್ರಾಂತರಾಗಿರುವ ಆಕೆಯ ತಂದೆ ಅಬಿಲಿಯೋ ಅಕೆವೆಡೋ, ತನ್ನ ಮಗಳಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಲಸಿಕೆ ಸ್ವೀಕರಿಸಿದ ನಂತರವೂ ಸಮಸ್ಯೆಗಳೇನೂ ಕಂಡುಬಂದಿಲ್ಲ. ಆಕೆ ಯಾವ ಕಾರಣದಿಂದ ಸಾವನ್ನಪ್ಪಿದ್ದಾಳೆ ಎಂದು ನನಗೆ ಗೊತ್ತಾಗುತ್ತಿಲ್ಲ. ಸದ್ಯಕ್ಕೆ ನನಗೆ ನನ್ನ ಮಗಳ ಸಾವು ಹೇಗಾಯಿತು ಎಂದು ಉತ್ತರ ಬೇಕಿದೆ ಎಂದು ಹೇಳಿರುವುದಾಗಿ ಡೈಲಿಮೇಲ್ ವರದಿ ಮಾಡಿದೆ.
Portuguese health worker, 41, dies two days after getting the Pfizer covid vaccine https://t.co/3rbwycD0Qi
— Daily Mail Online (@MailOnline) January 4, 2021
ಊಹೆಗೂ ಮೀರಿ ಅಡ್ಡಪರಿಣಾಮ ಬೀರುತ್ತಿದೆ ಫೈಜರ್ ಕೊರೊನಾ ಲಸಿಕೆ – ಡಾ. ಮಾನ್ಸೆಫ್ ಸ್ಲಾಯ್
Published On - 1:24 pm, Tue, 5 January 21