ಸಂಘರ್ಷದಲ್ಲಿ ನಾನು ಸಾವಿಗೀಡಾದೆ ಎಂದು ತೋರಿಸಿ ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು: ಇಮ್ರಾನ್ ಖಾನ್
ನ್ಯಾಯಾಲಯದ ಸಂಕೀರ್ಣವನ್ನು ಪೊಲೀಸ್ ಸಿಬ್ಬಂದಿ ಸುತ್ತುವರಿಯುವ ದೃಶ್ಯಗಳನ್ನು ಹಂಚಿಕೊಂಡ ಇಮ್ರಾನ್ ಖಾನ್, ಸಂಘರ್ಷವನ್ನುಂಟು ಮಾಡಿ ನನ್ನನ್ನು "ನಿರ್ಮೂಲನೆ" ಮಾಡುವ ಯೋಜನೆಯಾಗಿದೆ ಇದು ಎಂದು ಹೇಳಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ವಿಡಿಯೊ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಅವಕಾಶ ನೀಡುವಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ಮುಖ್ಯ ನ್ಯಾಯಮೂರ್ತಿ ಉಮರ್ ಅಟ್ಟಾ ಬಂಡಿಯಾಲ್ ಅವರನ್ನು ಒತ್ತಾಯಿಸಿದ್ದಾರೆ. ಬಂಡಿಯಾಲ್‌ಗೆ ಬರೆದ ಪತ್ರದಲ್ಲಿ ತಾನು ಖುದ್ದಾಗಿ ಹಾಜರಾದರೆ ಅವರು ನನ್ನನ್ನು ಕೊಲ್ಲಬಹುದು ಎಂದು ಹೇಳಿರುವ ಖಾನ್ ತಮ್ಮ ವಿರುದ್ಧ ದಾಖಲಾದ ಪ್ರಕರಣಗಳನ್ನು ಒಟ್ಟು ಸೇರಿಸಲು ವಿನಂತಿಸಿದ್ದಾರೆ. ಸೋಮವಾರ ದೇಶವನ್ನುದ್ದೇಶಿಸಿ ಮಾತನಾಡಿದ ಖಾನ್ ಶನಿವಾರ ಇಸ್ಲಾಮಾಬಾದ್‌ನ ನ್ಯಾಯಾಲಯ ಸಂಕೀರ್ಣದಲ್ಲಿ ತೋಷಖಾನಾ ಉಡುಗೊರೆ ಪ್ರಕರಣದ ವಿಚಾರಣೆಗೆ ಹಾಜರಾಗಲು ಬಂದಾಗ ತನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ನನ್ನನ್ನು ಕೊಲ್ಲಲು ಸುಮಾರು 20 ಅಪರಿಚಿತ ಜನರು ಅಲ್ಲಿದ್ದರು ಎಂದು ಖಾನ್ ಹೇಳಿದ್ದಾರೆ.
ನ್ಯಾಯಾಲಯದ ಸಂಕೀರ್ಣವನ್ನು ಪೊಲೀಸ್ ಸಿಬ್ಬಂದಿ ಸುತ್ತುವರಿಯುವ ದೃಶ್ಯಗಳನ್ನು ಹಂಚಿಕೊಂಡ ಇಮ್ರಾನ್ ಖಾನ್, ಸಂಘರ್ಷವನ್ನುಂಟು ಮಾಡಿ ನನ್ನನ್ನು “ನಿರ್ಮೂಲನೆ” ಮಾಡುವ ಯೋಜನೆಯಾಗಿದೆ ಇದು ಎಂದು ಹೇಳಿದ್ದಾರೆ.
ನಾನು ನ್ಯಾಯಾಂಗ ಸಂಕೀರ್ಣದ ಗೇಟ್‌ಗಳನ್ನು ಪ್ರವೇಶಿಸಿದಾಗ ನನಗೆ ಎದುರಾದ ದೃಶ್ಯಗಳು. ‘ಅಜ್ಞಾತ’-ನಮಾಲೂಮ್ ಅಫ್ರಾಡ್-ನೊಂದಿಗೆ ಈ ಶಕ್ತಿಯು ನನ್ನನ್ನು ಜೈಲಿಗೆ ಹಾಕಲು ಅಲ್ಲ, ಆದರೆ ಅಣಕು ಹೋರಾಟವನ್ನು ನಡೆಸುವ ಮೂಲಕ ಮತ್ತು ನನ್ನ ಸಾವು ಅಪಘಾತ ಎಂದು ಬಿಂಬಿಸುವ ಮೂಲಕ ನನ್ನನ್ನು ನಿರ್ಮೂಲನೆ ಮಾಡುವ ಸಂಚು ಇತ್ತು ಎಂಬುದರಲ್ಲಿ ಯಾವುದೇ ಸಂದೇಹ ಬೇಡ. ಆದರೆ ರಕ್ಷಕನಾದ ಅಲ್ಲಾನು ಇತರ ಯೋಜನೆಗಳನ್ನು ಹೊಂದಿದ್ದನು ಎಂದು ಖಾನ್ ಟ್ವೀಟ್ ಮಾಡಿದ್ದಾರೆ.
ಅಲ್ಲಿದ್ದ ವ್ಯಕ್ತಿಗಳು ತಾವು ಹಿಡಿದಿದ್ದ ಹಗ್ಗದಿಂದ ಖಾನ್ ಅವರನ್ನು ಕತ್ತು ಹಿಸುಕಲು ಯೋಜಿಸಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಆರೋಪಿಸಿದೆ.
ಈ “ಅಪರಿಚಿತ ಜನರು” ಹೇಗೆ ಹೆಚ್ಚಿನ ಭದ್ರತಾ ವಲಯವನ್ನು (ನ್ಯಾಯಾಂಗ ಸಂಕೀರ್ಣ) ಪ್ರವೇಶಿಸಲು ಯಶಸ್ವಿಯಾದರು ಎಂಬುದರ ಕುರಿತು ತನಿಖೆ ನಡೆಸುವಂತೆ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಮುಖ್ಯ ನ್ಯಾಯಾಧೀಶರನ್ನು ವಿನಂತಿಸಿದ್ದಾರೆ. ನಾನು ಹೀಗೆ ಹೊರ ಬಂದರೆ ಅವರು ನನ್ನನ್ನು ಕೊಲ್ಲಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ” ಎಂದು ಖಾನ್ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Tue, 21 March 23