Quad Statement: ಚೀನಾಗೆ ಪರೋಕ್ಷವಾಗಿ ಕುಟುಕಿದ ಕ್ವಾಡ್ ಗುಂಪು; ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಭೇಟಿ

|

Updated on: May 21, 2023 | 12:08 PM

Narendra Modi @ Japan: ಈ ಸಾಗರ ವ್ಯಾಪ್ತಿಯ ಪ್ರದೇಶದಲ್ಲಿ ಅಸ್ಥಿರತೆ ತರುವಂತಹಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಬಲವಾದ ವಿರೋಧ ಇದೆ ಎಂದು ಕ್ವಾಡ್ ಗುಂಪಿನ ನಾಯಕರು ಜಂಟಿ ಹೇಳಿಕೆಯಲ್ಲಿ ಚೀನಾ ಹೆಸರೆತ್ತದೆಯೇ ಎಚ್ಚರಿಕೆ ನೀಡಿದ್ದಾರೆ.

Quad Statement: ಚೀನಾಗೆ ಪರೋಕ್ಷವಾಗಿ ಕುಟುಕಿದ ಕ್ವಾಡ್ ಗುಂಪು; ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಭೇಟಿ
ಕ್ವಾಡ್ ಗುಂಪು
Follow us on

ಹಿರೋಷಿಮಾ: ಇಲ್ಲಿ ನಡೆಯುತ್ತಿರುವ ಕ್ವಾಡ್ ಸಭೆಯಲ್ಲಿ (Quad Meeting) ಇಂಡೋ ಪೆಸಿಫಿಕ್ ಸಾಗರ ವ್ಯಾಪ್ತಿಯ ಪ್ರದೇಶದಲ್ಲಿ ಶಾಂತಿ ಪರಿಸ್ಥಿತಿ ಪಾಲಿಸುವಂತೆ ಜಂಟಿ ಹೇಳಿಕೆ ನೀಡಲಾಗಿದೆ. ಕ್ವಾಡ್ ಗುಂಪಿನಲ್ಲಿರುವ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ದೇಶಗಳ ನಾಯಕರು ಈ ಜಂಟಿ ಹೇಳಿಕೆ ನೀಡಿದ್ದು, ಚೀನಾ ಹೆಸರೆತ್ತದೆಯೇ ಪರೋಕ್ಷವಾಗಿ ಅದರ ಮೇಲೆ ಚಾಟಿ ಬೀಸಿದ್ದಾರೆ.

ಈ ಸಾಗರ ವ್ಯಾಪ್ತಿಯ ಪ್ರದೇಶದಲ್ಲಿ ಅಸ್ಥಿರತೆ ತರುವಂತಹ ಹಾಗೂ ಬಲವಂತವಾಗಿ ಹಕ್ಕು ಕಸಿದುಕೊಳ್ಳುವಂತಹ ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ ನಮ್ಮ ಬಲವಾದ ವಿರೋಧ ಇದೆ ಎಂದು ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಈ ನಾಲ್ಕು ದೇಶಗಳ ಮುಖ್ಯಸ್ಥರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಲ್ಲದೇ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಫುಮಿಯೋ ಕಿಶಿಡ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರು ಈ ಜಂಟಿ ಹೇಳಿಕೆ ಹೊರಡಿಸಿದ್ದಾರೆ.

ಇದನ್ನೂ ಓದಿಜಪಾನ್​​ನಲ್ಲಿ ಜಿ7 ಶೃಂಗಸಭೆ: ಪ್ರಧಾನಿ ಮೋದಿ ಬಳಿ ಬಂದು ಆಲಿಂಗಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಇಂಡೋ ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಹೇರಳವಾದ ನೈಸರ್ಗಿಕ ಸಂಪನ್ಮೂಲಗಳಿವೆ. ಇಲ್ಲಿರುವ ಬಹುತೇಕ ಪ್ರದೇಶಗಳು ತನಗೆ ಸೇರಿದ್ದೆಂದು ಚೀನಾ ಹಕ್ಕು ಚಲಾಯಿಸಲು ಪ್ರಯತ್ನಿಸುತ್ತಿದೆ. ಹಲವು ಕಡೆ ಪಹರೆ ಇರಿಸಿ ತನ್ನ ಜಾಗವೆಂದು ಬಿಂಬಿಸಿಕೊಳ್ಳುತ್ತಿದೆ. ಇದು ಈ ಸಾಗರ ವ್ಯಾಪ್ತಿಗೆ ಬರುವ ಬಹುತೇಕ ಇತರ ಸಣ್ಣ ದೇಶಗಳ ಹಕ್ಕುಗಳಿಗೆ ಧಕ್ಕೆಯಾದಂತಾಗಿದೆ. ಚೀನಾದ ಈ ದುರ್ಬುದ್ಧಿ ಮತ್ತು ದುಸ್ಸಾಹಸವನ್ನು ವಿರೋಧಿಸಲೆಂದೇ ಕ್ವಾಡ್ ಗುಂಪು ರಚನೆಯಾಗಿದೆ. ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ದೇಶಗಳು ಈ ಕ್ವಾಡ್ ಗುಂಪಿನಲ್ಲಿವೆ.

ಹಿರೋಶಿಮಾದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್​ರನ್ನು ಭೇಟಿ ಮಾಡಿದ ನರೇಂದ್ರ ಮೋದಿ

ಕ್ವಾಡ್ ಸಭೆ ಬಳಿಕ ಹಿರೋಶಿಮಾದಲ್ಲಿ ಜಿ7 ಸಮಿಟ್ ನಡೆಯಲಿದೆ. ವಿಶ್ವದ ಅತ್ಯಂತ ಮುಂದುವರಿದ ದೇಶಗಳು ಈ ಗುಂಪಿನಲ್ಲಿವೆ. ಅಮೆರಿಕ, ಬ್ರಿಟನ್, ಯೂರೋಪ್ ಯೂನಿಯನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ದೇಶಗಳು ಜಿ7 ಗುಂಪಿನಲ್ಲಿವೆ. ಈ ದೇಶಗಳ ನಾಯಕರು ಈಗಾಗಲೇ ಜಪಾನ್​ನಲ್ಲಿದ್ದಾರೆ. ಭಾರತವೂ ಈ ಜಿ7 ಶೃಂಗಸಭೆಯಲ್ಲಿ ಆಹ್ವಾನಿತ ದೇಶವಾಗಿ ಪಾಲ್ಗೊಳ್ಳಲಿದೆ. ಜಪಾನ್ ಪ್ರಧಾನಿ ಜಿ7 ಸಭೆಗೆ ಬರುವಂತೆ ನರೇಂದ್ರ ಮೋದಿಗೆ ಆಹ್ವಾನ ನೀಡಿದ್ದರು.

ಇದನ್ನೂ ಓದಿG7 Summit: ನೀವು ತುಂಬಾ ಜನಪ್ರಿಯ ವ್ಯಕ್ತಿ; ಪ್ರಧಾನಿ ಮೋದಿರನ್ನು ಹೊಗಳಿದ ಅಮೆರಿಕ ಅಧ್ಯಕ್ಷ ಬೈಡನ್​​

ಇದೇ ವೇಳೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ. ಇಬ್ಬರೂ ನಾಯಕರ ಮಧ್ಯೆ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಎರಡು ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಇಲ್ಲಿಯವರೆಗಿನ ಬೆಳವಣಿಗೆ ಬಗ್ಗೆ ಇಬ್ಬರೂ ನಾಯಕರು ಅವಲೋಕಿಸುವ ಕೆಲಸ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ