Watch ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ II ಪಾರ್ಥಿವ ಶರೀರವನ್ನಿರಿಸಿದ್ದ ವೇಳೆ ಕುಸಿದು ಬಿದ್ದ ರಾಯಲ್ ಗಾರ್ಡ್

ಸ್ಥಿರತೆ ಇಲ್ಲದಂತೆ ವಾಲಿಕೊಂಡ ಆತ ಥಟ್ಟನೆ ಮುಂದಕ್ಕೆ ಮುಗ್ಗಿರಿಸಿ ಬೀಳುತ್ತಿರುವುದು ವಿಡಿಯೊದಲ್ಲಿದೆ. ಆತ ಬಿದ್ದಾಗ ಆತನಿಗೆ ಸಹಾಯ ಮಾಡಲು ಇಬ್ಬರು ತಕ್ಷಣವೇ ಧಾವಿಸಿದ್ದಾರೆ.

Watch ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ II ಪಾರ್ಥಿವ ಶರೀರವನ್ನಿರಿಸಿದ್ದ ವೇಳೆ ಕುಸಿದು ಬಿದ್ದ ರಾಯಲ್ ಗಾರ್ಡ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 15, 2022 | 3:52 PM

ರಾಣಿ ಎಲಿಜಬೆತ್ II (Queen Elizabeth II) ಪಾರ್ಥಿವ ಶರೀರವನ್ನು ಬುಧವಾರ ವೆಸ್ಟ್‌ಮಿನಿಸ್ಟರ್ (Westminster Hall) ಹಾಲ್‌ನಲ್ಲಿರಿಸಿದಾಗ ಅಲ್ಲೇ ಸಮೀಪದಲ್ಲಿಯೇ ನಿಂತಿದ್ದ ರಾಯಲ್ ಗಾರ್ಡ್ ಕುಸಿದು ಬಿದ್ದ ಘಟನೆ ನಡೆದಿದೆ. ಕಪ್ಪು ಸಮವಸ್ತ್ರವನ್ನು ಧರಿಸಿರುವ ಗಾರ್ಡ್ ಮೊದಲಿಗೆ ರಾಣಿಯ ಶವಪೆಟ್ಟಿಗೆಯನ್ನು ಇರಿಸಲಾಗಿರುವ ಎತ್ತರದ ವೇದಿಕೆಯಾದ ಕ್ಯಾಟಫಾಲ್ಕ್‌ನಲ್ಲಿ ಮುಗ್ಗಿರಿಸಿ ಬೀಳುತ್ತಿರುವ ವಿಡಿಯೊ ವೈರಲ್ ಆಗಿದೆ. ಸ್ಥಿರತೆ ಇಲ್ಲದಂತೆ ವಾಲಿಕೊಂಡ ಆತ ಥಟ್ಟನೆ ಮುಂದಕ್ಕೆ ಮುಗ್ಗಿರಿಸಿ ಬೀಳುತ್ತಿರುವುದು ವಿಡಿಯೊದಲ್ಲಿದೆ. ಆತ ಬಿದ್ದಾಗ ಆತನಿಗೆ ಸಹಾಯ ಮಾಡಲು ಇಬ್ಬರು ತಕ್ಷಣವೇ ಧಾವಿಸಿದ್ದಾರೆ, ಪೊಲೀಸರು ಮತ್ತು ಇತರರು ಆತನಿಗೆ ಸಹಾಯ ಮಾಡುತ್ತಿದ್ದಂತೆ ಸಮಾರಂಭವನ್ನು ಲೈವ್-ಸ್ಟ್ರೀಮ್ ಮಾಡುತ್ತಿದ್ದ ಬಿಬಿಸಿ ಅದರ ಪ್ರಸಾರವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿದೆ.

ಅಂಗರಕ್ಷಕ, ಹೌಸ್‌ಹೋಲ್ಡ್ ಡಿವಿಷನ್ ಅಥವಾ ಲಂಡನ್ ಗೋಪುರದ ಯೋಮನ್ ವಾರ್ಡರ್‌ಗಳ ಸಿಬ್ಬಂದಿ ರಾಣಿಯ ಶವಪೆಟ್ಟಿಗೆಯನ್ನು ರಕ್ಷಿಸಲು ನಿರಂತರವಾಗಿ ಕರ್ತವ್ಯದಲ್ಲಿರುತ್ತಾರೆ.

ಸೋಮವಾರ (ಸೆಪ್ಟೆಂಬರ್ 19) ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ನಡೆಯುವ ಸರ್ಕಾರಿ ಅಂತ್ಯಕ್ರಿಯೆಯ ಮೊದಲು ರಾಣಿ ಪಾರ್ಥಿವ ಶರೀರವನ್ನು ರಾಜಧಾನಿಯ ವೆಸ್ಟ್‌ಮಿನ್‌ಸ್ಟರ್ ಹಾಲ್‌ನಲ್ಲಿ ಇರಿಸಲಾಗಿದೆ. 70 ವರ್ಷಗಳ ಕಾಲ ಅಧಿಕಾರದಲ್ಲಿದ್ದ  ರಾಣಿ ತಮ್ಮ 96 ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 8 ರಂದು ನಿಧನರಾದರು.

ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ 48 ಗಂಟೆಗಳಿಗೂ ಹೆಚ್ಚು ಕಾಲ ಕಾದ ನಂತರ  ಹತ್ತಾರು ಜನರ ಸಮ್ಮುಖದಲ್ಲಿ ಶವಪೆಟ್ಟಿಗೆಯನ್ನು ಬುಧವಾರ ಅಂತಿಮ ಬಾರಿಗೆ ಬಕಿಂಗ್ಹ್ಯಾಮ್ ಅರಮನೆಯಿಂದ ಹೊರತೆಗೆಯಲಾಯಿತು. ರಾಣಿ ಎಲಿಜಬೆತ್ II ಅವರಿಗೆ ಗುರುವಾರವಿಡೀ ಅಂತಿಮ ವಿದಾಯ ಹೇಳುವ ಅವಕಾಶ ಇಲ್ಲಿನ ಜನರಿಗೆ ನೀಡಲಾಗಿದೆ.

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ