ಕಪ್ಪು ಸಮುದ್ರದಲ್ಲಿ ಮಾಸ್ಕ್ವಾ ಹಡಗು ಮುಳುಗಡೆಯಾಗಿ ಓರ್ವ ಸಾವು, 27 ಮಂದಿ ನಾಪತ್ತೆ; ರಷ್ಯಾ ಮಾಹಿತಿ

| Updated By: ಸುಷ್ಮಾ ಚಕ್ರೆ

Updated on: Apr 23, 2022 | 9:53 AM

ಮಾಸ್ಕ್ವಾ ಕ್ಷಿಪಣಿ ಕ್ರೂಸರ್ ಮುಳುಗಿದ ಹಿನ್ನೆಲೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಷ್ಯಾ ಮಾಹಿತಿ ನೀಡಿದೆ.

ಕಪ್ಪು ಸಮುದ್ರದಲ್ಲಿ ಮಾಸ್ಕ್ವಾ ಹಡಗು ಮುಳುಗಡೆಯಾಗಿ ಓರ್ವ ಸಾವು, 27 ಮಂದಿ ನಾಪತ್ತೆ; ರಷ್ಯಾ ಮಾಹಿತಿ
ರಷ್ಯಾದ ಹಡಗು ಮುಳುಗಡೆ
Follow us on

ನವದೆಹಲಿ: ಕಳೆದ ವಾರ ರಷ್ಯಾದ ಪ್ರಮುಖ ಯುದ್ಧ ನೌಕೆಯೊಂದು ಸಮುದ್ರದಲ್ಲಿ ಮುಳುಗಿತ್ತು. ಮಾಸ್ಕ್ವಾ ಕ್ಷಿಪಣಿ ಕ್ರೂಸರ್ (Moskva missile cruiser) ಮುಳುಗಿದ ಹಿನ್ನೆಲೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಷ್ಯಾ ಘೋಷಿಸಿದೆ. ಈ ದುರಂತದ ನಂತರದ ನಷ್ಟವನ್ನು ಮಾಸ್ಕೋ (Moscow) ಮೊದಲ ಬಾರಿಗೆ ಒಪ್ಪಿಕೊಂಡಿದೆ. ನೆಪ್ಚೂನ್ ಕ್ಷಿಪಣಿ ಅಪ್ಪಳಿಸಿದ್ದರಿಂದ ಯುದ್ಧ ನೌಕೆ ಮುಳುಗಿತ್ತು. ರಷ್ಯಾದ (Russia) ಕಪ್ಪು ಸಮುದ್ರದ ಫ್ಲೀಟ್‌ನ ಪ್ರಮುಖ ಶಿಪ್ ಉಕ್ರೇನ್‌ನಲ್ಲಿ ಸುಮಾರು ಎರಡು ತಿಂಗಳ ಸಂಘರ್ಷದಲ್ಲಿ ರಷ್ಯಾದ ನೌಕಾಪಡೆಯ ಪ್ರಯತ್ನವನ್ನು ಮುನ್ನಡೆಸಿತ್ತು. ಬಂದರು ನಗರವಾದ ಮರಿಪೋಲ್‌ನ ಮುತ್ತಿಗೆಯಲ್ಲಿ ಈ ಕ್ಷಿಪಣಿ ಪ್ರಮುಖ ಪಾತ್ರ ವಹಿಸಿತ್ತು.

ರಷ್ಯಾದ ಸೇನೆಯ ಮುತ್ತಿಗೆಗೆ ಒಳಗಾಗಿರುವ ಉಕ್ರೇನ್​ನ ಆಯಕಟ್ಟಿನ ಬಂದರು ನಗರ ಮರಿಪೋಲ್​ನಲ್ಲಿ ಈ ನೌಕೆಯನ್ನು ನಿಯೋಜನೆ ಮಾಡಲಾಗಿತ್ತು. ಈ ನಡುವೆ ಗಡಿಯುದ್ದಕ್ಕೂ ಆಕ್ರಮಣದ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೀವ್ ವಿರುದ್ಧದ ಕ್ಷಿಪಣಿ ದಾಳಿಯನ್ನು ಹೆಚ್ಚಿಸಲಾಗುವುದು ಎಂದು ರಷ್ಯಾ ಎಚ್ಚರಿಕೆ ನೀಡಿತ್ತು. ಈ ಕಾರ್ಖಾನೆಯಲ್ಲಿ ನೆಪ್ಚೂನ್ ಕ್ಷಿಪಣಿ ಉತ್ಪಾದಿಸಲಾಗುತ್ತಿದ್ದು, ಈ ಕ್ಷಿಪಣಿಯನ್ನು ಬಳಸಿ ರಷ್ಯಾದ ಯುದ್ಧನೌಕೆಯನ್ನು ಮುಳುಗಿಸುವುದಾಗಿ ಉಕ್ರೇನ್ ಹೇಳಿತ್ತು.

ಮಾಸ್ಕ್ವಾ ಯುದ್ಧನೌಕೆ ಮುಳುಗಿದ ನಂತರ ಹಡಗಿನಲ್ಲಿ ಸೇವೆ ಸಲ್ಲಿಸಿದ ನಾವಿಕರ ಪೋಷಕರು ಮತ್ತು ಇತರ ಕುಟುಂಬದ ಸದಸ್ಯರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಕ್ಕಳು ಕಾಣೆಯಾಗಿದ್ದಾರೆ, ನಮಗೆ ಈ ಬಗ್ಗೆ ಉತ್ತರಗಳು ಬೇಕಾಗಿವೆ ಎಂದು ಹೇಳಿದ್ದಾರೆ. ಏಪ್ರಿಲ್ 13ರಂದು ಬೆಂಕಿಯ ಪರಿಣಾಮವಾಗಿ ಮದ್ದುಗುಂಡುಗಳ ಸ್ಫೋಟದಿಂದಾಗಿ ಮಾಸ್ಕ್ವಾ ಕ್ಷಿಪಣಿ ಕ್ರೂಸರ್ ಗಂಭೀರವಾಗಿ ಹಾನಿಗೊಳಗಾಯಿತು ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಡರಾತ್ರಿ ರಷ್ಯಾದ ಸುದ್ದಿ ಸಂಸ್ಥೆಗಳು ನಡೆಸಿದ ಹೇಳಿಕೆಯಲ್ಲಿ ತಿಳಿಸಿದೆ.

ಈ ದುರಂತದಲ್ಲಿ ಓರ್ವ ಸೈನಿಕ ಸಾವನ್ನಪ್ಪಿದ್ದಾರೆ. ಮತ್ತೋರ್ವ 27 ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಉಳಿದ 396 ಸದಸ್ಯರನ್ನು ಸ್ಥಳಾಂತರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಮಾಸ್ಕ್ವಾ ಯುದ್ಧನೌಕೆಯು ಕಪ್ಪು ಸಮುದ್ರದಲ್ಲಿ ಮುಳುಗುವ ಮೊದಲು ಎರಡು ಉಕ್ರೇನಿಯನ್ ಕ್ಷಿಪಣಿಗಳಿಂದ ಹೊಡೆದಿದೆ ಎಂದು ಪೆಂಟಗನ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಲಾ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮೊದಲು ಹೇಳಿದ ನಂತರ ರಷ್ಯಾದ ರಕ್ಷಣಾ ಸಚಿವಾಲಯವು ಈ ಘೋಷಣೆ ಮಾಡಿದೆ.

ರಷ್ಯಾದ ರಕ್ಷಣಾ ಸಚಿವಾಲಯವು ಮೃತರು ಮತ್ತು ಕಾಣೆಯಾದವರ ಕುಟುಂಬಗಳು ಮತ್ತು ಸ್ನೇಹಿತರಿಗೆ ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಾಯವನ್ನು ನೀಡುತ್ತಿದೆ ಎಂದು ಹೇಳಿಕೆ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ, ರಷ್ಯಾದ ಹಲವಾರು ಪೋಷಕರು ತಮ್ಮ ಕಾಣೆಯಾದ ಮಕ್ಕಳ ಬಗ್ಗೆ ಆದಷ್ಟು ಬೇಗ ಮಾಹಿತಿ ನೀಡಬೇಕೆಂದು ಹೇಳಿದ್ದಾರೆ. ಆದರೆ, ಕ್ರೆಮ್ಲಿನ್ ಈ ಹಿಂದೆ 680 ನಾವಿಕರು ಸಾಗಿಸುವ ಯುದ್ಧನೌಕೆಯಲ್ಲಿನ ಸಾವುನೋವುಗಳ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ಮಾಸ್ಕ್ವಾ ಯುದ್ಧನೌಕೆ ಮುಳುಗಿದಾಗ ಸುಮಾರು 500 ಜನರು ಹಡಗಿನಲ್ಲಿದ್ದರು.

ಇದನ್ನೂ ಓದಿ: Russia Ukraine War: ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ

Russia Ukraine War: 3ನೇ ಮಹಾಯುದ್ಧ; ಈ ಮೂರು ಕಾರಣಗಳಿಗಾಗಿ ರಷ್ಯಾ ವಿರುದ್ಧ ನ್ಯಾಟೊ ಯುದ್ಧ ಘೋಷಿಸಬೇಕಾದೀತು