Russia Ukraine War Highlights: ಉಕ್ರೇನ್-ರಷ್ಯಾ ಮಹಾಸಮರ: ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್​ಗೆ ಸ್ಥಳಾಂತರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 14, 2022 | 6:09 AM

Russia Ukraine Conflict Highlights: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದ್ದು, ನಿನ್ನೆ 13 ಸಾವಿರ ನಾಗರಿಕರನ್ನು ಸ್ಥಳಾಂತರ ಮಾಡಲಾಗಿದೆ. ಉಕ್ರೇನ್‌ನ ವಿವಿಧ ನಗರಗಳಿಂದ ನಾಗರಿಕರ ಸ್ಥಳಾಂತರ ಮಾಡಲಾಗಿದೆ ಎಂದು ಉಕ್ರೇನ್‌ನ ಉಪ ಪ್ರಧಾನಿ ಐರಿನಾ ವೆರೆಶ್‌ಚುಕ್ ಮಾಹಿತಿ ನೀಡಿದ್ದಾರೆ.

Russia Ukraine War Highlights: ಉಕ್ರೇನ್-ರಷ್ಯಾ ಮಹಾಸಮರ: ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್​ಗೆ ಸ್ಥಳಾಂತರ
ಪ್ರಾತಿನಿಧಿಕ ಚಿತ್ರ

ಉಕ್ರೇನ್‌ಗೆ (Russia Ukraine Crisis)  ಅಮೆರಿಕ ಮತ್ತಷ್ಟು ಭದ್ರತಾ ನೆರವು ನೀಡಿದೆ. ರಕ್ಷಣಾ ಉಪಕರಣಗಳ ಖರೀದಿಗೆ ಅಮೆರಿಕದಿಂದ ಹೆಚ್ಚುವರಿಯಾಗಿ 200 ಮಿಲಿಯನ್ ಡಾಲರ್ ನೆರವು ನೀಡಲಾಗಿದೆ. ಜ.21ರಿಂದ ಈವರೆಗೆ 1.2 ಬಿಲಿಯನ್ ಡಾಲರ್ ನೆರವು ನೀಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಮಾಹಿತಿ ನೀಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದ್ದು, ನಿನ್ನೆ 13 ಸಾವಿರ ನಾಗರಿಕರನ್ನು ಸ್ಥಳಾಂತರ ಮಾಡಲಾಗಿದೆ. ಉಕ್ರೇನ್‌ನ ವಿವಿಧ ನಗರಗಳಿಂದ ನಾಗರಿಕರ ಸ್ಥಳಾಂತರ ಮಾಡಲಾಗಿದೆ ಎಂದು ಉಕ್ರೇನ್‌ನ ಉಪ ಪ್ರಧಾನಿ ಐರಿನಾ ವೆರೆಶ್‌ಚುಕ್ ಮಾಹಿತಿ ನೀಡಿದ್ದಾರೆ. ಉಕ್ರೇನ್‌ನ ಕೆಲ ನಗರಗಳಲ್ಲಿ ಜನರ ಸ್ಥಿತಿ ಭೀಕರವಾಗಿದೆ ಎಂದು ರಷ್ಯಾ ಸೇನೆ ಹೇಳಿಕೆ ನೀಡಿದೆ. ರಷ್ಯಾ ಸೇನೆ, ಮಗು ಸೇರಿದಂತೆ 7 ಜನರನ್ನ ಹತ್ಯೆ ಮಾಡಿದೆ. ಜನರನ್ನು ಸ್ಥಳಾಂತರಿಸುವ ವೇಳೆಯೇ ಹತ್ಯೆಗೈಯಲಾಗಿದೆ ಎಂದು ರಷ್ಯಾ ಸೇನೆಯ ವಿರುದ್ಧ ಉಕ್ರೇನ್ ಆರೋಪ ಮಾಡಿದೆ.

LIVE NEWS & UPDATES

The liveblog has ended.
  • 13 Mar 2022 08:23 PM (IST)

    ರಷ್ಯಾ ಬೆಂಬಲಿಸುತ್ತಿರುವ ಚೀನಾಗೆ ಅಮೆರಿಕ ವಾರ್ನಿಂಗ್

    ರಷ್ಯಾಗೆ ಬೆಂಬಲಿಸುವುದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚೀನಾಗೆ ಅಮೆರಿಕ ಖಡಕ್​ ವಾರ್ನಿಂಗ್​ ನೀಡಿದೆ.

  • 13 Mar 2022 08:16 PM (IST)

    ನಾಳೆ ಅಥವಾ ನಾಡಿದ್ದು 4ನೇ ಸುತ್ತಿನ ಶಾಂತಿ ಮಾತುಕತೆ ಸಾಧ್ಯತೆ

    ನಾಳೆ ಅಥವಾ ನಾಡಿದ್ದು ನಾಲ್ಕನೇ ಸುತ್ತಿನ ಶಾಂತಿ ಮಾತುಕತೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ 3 ಬಾರಿ ಶಾಂತಿ ಮಾತುಕತೆ ನಡೆಸಲಾಗಿದೆ. 3 ಬಾರಿ ಶಾಂತಿ ಮಾತುಕತೆ ಆಗಿದ್ರೂ ಫಲಪ್ರದವಾಗಿರಲಿಲ್ಲ. ಹೀಗಾಗಿ ಮತ್ತೆ ಮಾತುಕತೆ ಸಾಧ್ಯತೆ.


  • 13 Mar 2022 08:13 PM (IST)

    ಇರ್ಪಿನ್​ನಲ್ಲಿ ರಷ್ಯಾದ ಶೆಲ್​ ದಾಳಿಗೆ ಯುಎಸ್​ ಪತ್ರಕರ್ತ ಬಲಿ

    ರಷ್ಯಾದ ಶೆಲ್​ ದಾಳಿಗೆ ಅಮೆರಿಕದ ಪತ್ರಕರ್ತ ಬಲಿಯಾಗಿದ್ದಾರೆ. ಮತ್ತೊಬ್ಬ ಯುಎಸ್​ ಪತ್ರಕರ್ತನಿಗೆ ಕೂಡ ಗಾಯ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • 13 Mar 2022 08:08 PM (IST)

    1,25,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ: ಉಕ್ರೇನ್​ ಅಧ್ಯಕ್ಷ

    ಉಕ್ರೇನ್​ನಲ್ಲಿ ರಷ್ಯಾ ಸೇನೆ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ 1,25,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಉಕ್ರೇನ್​ ಅಧ್ಯಕ್ಷ ಮಾಹಿತಿ ನೀಡಿದ್ದಾರೆ.

  • 13 Mar 2022 05:07 PM (IST)

    ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪೋಲೆಂಡ್‌ಗೆ ಶಿಫ್ಟ್​

    ಉಕ್ರೇನ್​ನಲ್ಲಿ ರಷ್ಯಾ ಸೇನೆ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ ಮಾಡಲಾಗಿದೆ. ತಾತ್ಕಾಲಿಕವಾಗಿ ಪೋಲೆಂಡ್‌ಗೆ ರಾಯಭಾರ ಕಚೇರಿ ಸ್ಥಳಾಂತರ ಮಾಡಲಾಗಿದೆ.​ಭದ್ರತಾ ದೃಷ್ಟಿಯಿಂದ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ ಮಾಡಿದ್ದು, ಪರಿಸ್ಥಿತಿ ಸುಧಾರಿಸುವವರೆಗೂ ಪೋಲೆಂಡ್​ನಲ್ಲಿ ಭಾರತೀಯ ರಾಯಭಾರ ಕಚೇರಿ ಕೆಲಸ ನಿರ್ವಹಿಸಲಿದೆ.

  • 13 Mar 2022 05:02 PM (IST)

    ಎಲ್ವಿವ್ ಮಿಲಿಟರಿ ತರಬೇತಿ ಕೇಂದ್ರದ ಮೇಲೆ ಏರ್​ಸ್ಟ್ರೈಕ್​

    ಉಕ್ರೇನ್​ನಲ್ಲಿ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಎಲ್ವಿವ್​​ ಮಿಲಿಟರಿ ತರಬೇತಿ ಕೇಂದ್ರದ ಮೇಲೆ ಏರ್ ಸ್ಟ್ರೈಕ್ ಮಾಡಿದ್ದು, 35 ಜನರು ಬಲಿಯಾಗಿದ್ದಾರೆ.

  • 13 Mar 2022 04:58 PM (IST)

    ಮೈಕೋಲೈವ್ ನಗರದಲ್ಲಿ ರಷ್ಯಾದಿಂದ ಬಾಂಬ್ ದಾಳಿ; 9 ಜನರು ಬಲಿ

    ಉಕ್ರೇನ್​ನಲ್ಲಿ ರಷ್ಯಾ ಸೇನೆ ಯುದ್ಧ ಮುಂದುವರಿಸಿದ್ದು, ಮೈಕೋಲೈವ್ ನಗರದಲ್ಲಿ ರಷ್ಯಾ ಬಾಂಬ್ ದಾಳಿ ನಡೆಸಿದೆ. ರಷ್ಯಾದ ಬಾಂಬ್​ ದಾಳಿಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ.

  • 13 Mar 2022 03:59 PM (IST)

    Russia Ukraine War Live: ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಾತ್ಕಾಲಿಕ ಸ್ಥಳಾಂತರ

    ದೇಶದ ಪಶ್ಚಿಮ ಭಾಗಗಳಲ್ಲಿ ದಾಳಿಗಳು ನಡೆಯುತ್ತಿದ್ದು, ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್​ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

  • 13 Mar 2022 03:22 PM (IST)

    Russia Ukraine War Live: ಉಕ್ರೇನ್‌ನ ಎಲ್ವೀವ್‌ ಮೇಲೆ ರಷ್ಯಾದ 30 ಕ್ಷಿಪಣಿ ದಾಳಿ

    ಉಕ್ರೇನ್‌ನ ಎಲ್ವೀವ್‌ ಮೇಲೆ 30 ಕ್ಷಿಪಣಿ ದಾಳಿ ಮಾಡಲಾಗಿದೆ. ರಷ್ಯಾ ಸುಮಾರು 30 ಕ್ಷಿಪಣಿ ದಾಳಿ ನಡೆಸಿರುವ ಬಗ್ಗೆ ಎಲ್ವೀವ್‌ನ ಗವರ್ನರ್‌ ಮಾಹಿತಿ ನೀಡಿದ್ದಾರೆ.

  • 13 Mar 2022 03:16 PM (IST)

    Russia Ukraine War Live: ಮತ್ತೊಬ್ಬ ಮೇಯರ್​ ಅಪಹರಿಸಿದ ರಷ್ಯಾ ಸೇನಾಪಡೆ

    ಉಕ್ರೇನ್​ನಲ್ಲಿ ಯುದ್ಧ ಮುಂದುವರಿಸಿದ ರಷ್ಯಾ ಸೇನೆ, ಮತ್ತೊಬ್ಬ ಮೇಯರ್​ನ್ನು ಅಪಹರಿಸಿದೆ. ಈ ಹಿಂದೆ ಮೆಲಿಟೊಪೋಲ್​ ಮೇಯರ್​ನ್ನು ರಷ್ಯಾ ​ ಅಪಹರಿಸಿತ್ತು. ಇಂದು ಮತ್ತೊಬ್ಬ ಮೇಯರ್​ನನ್ನು ರಷ್ಯಾ ಕಿಡ್ನ್ಯಾಪ್​ ಮಾಡಿದೆ ಎಂದು ಝಫೋರಿಝಿಯಾ ಆಡಳಿತಾಧಿಕಾರಿ ಮಾಹಿತಿ ನೀಡಿದೆ.

  • 13 Mar 2022 03:09 PM (IST)

    Russia Ukraine War Live: ಬಹುಮಹಡಿ ಕಟ್ಟಡದ ಮೇಲೆ ರಷ್ಯಾ ದಾಳಿ

    ರಷ್ಯಾದ ವೈಮಾನಿಕ ದಾಳಿಯಿಂದ ಉತ್ತರದ ನಗರವಾದ ಚೆರ್ನಿಹಿವ್‌ನಲ್ಲಿ ಬಹುಮಹಡಿ ಅಪಾರ್ಟ್ಮೆಂಟ್ ಕಟ್ಟಡವನ್ನು ನಾಶಪಡಿಸಿದೆ ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದೆ. ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಏಳು ಮಂದಿಯನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಒಂಬತ್ತು ಅಂತಸ್ತಿನ ಕಟ್ಟಡದ ಮೇಲೆ ದಾಳಿ ನಡೆದಿದ್ದು, ಬೆಂಕಿ ಆವರಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ.

     

  • 13 Mar 2022 03:01 PM (IST)

    Russia Ukraine War Live: ಜನರನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನ್​ ರೈಲಿನ ಮೇಲೆ ರಷ್ಯಾ ದಾಳಿ

    ಪೂರ್ವ ಉಕ್ರೇನ್‌ನಿಂದ ಜನರುನ್ನು ಸ್ಥಳಾಂತರಿಸಲಾಗುತ್ತಿದ್ದ ರೈಲ್​ನ್ನು ರಷ್ಯಾ ಸೇನೆ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ರೈಲ್ ಕಂಡಕ್ಟರ್​ ಸಾವಾಗಿದೆ ಎಂದು ಉಕ್ರೇನ್‌ನ ರಾಷ್ಟ್ರೀಯ ರೈಲು ಕಂಪನಿ ಹೇಳಿದೆ. ಡೊನೆಟ್ಸ್ಕ್ ಪ್ರದೇಶದ ಬ್ರುಸಿನ್ ನಿಲ್ದಾಣದ ಬಳಿ ರೈಲಿನ ಮೇಲೆ ದಾಳಿ ನಡೆಸಿದ್ದು, ಕಂಡಕ್ಟರ್  ಕೊಲ್ಲಲ್ಪಟ್ಟಿದ್ದು, ಒಬ್ಬರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. 100 ಮಕ್ಕಳನ್ನು ಒಳಗೊಂಡಂತೆ ಲೈಮನ್ ನಿಲ್ದಾಣದಲ್ಲಿ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಿಂದ ನಿವಾಸಿಗಳನ್ನು ಸ್ಥಳಾಂತರಿಸುವ ರೈಲು ಇದಾಗಿತ್ತು.

  • 13 Mar 2022 02:03 PM (IST)

    Russia Ukraine War Live: 9 ಜನರ ಸಾವು, 57 ಮಂದಿಗೆ ಗಾಯ

    ಪಶ್ಚಿಮ ಉಕ್ರೇನ್‌ನ ಸೇನಾ ನೆಲೆಯೊಂದರ ಮೇಲೆ ನಡೆದ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದು, 57 ಮಂದಿ ಗಾಯಗೊಂಡಿದ್ದಾರೆ ಎಂದು ಎಲ್ವಿವ್ ಪ್ರದೇಶದ ಗವರ್ನರ್ ತಿಳಿಸಿದ್ದಾರೆ. ಯಾವೊರಿವ್ ಮಿಲಿಟರಿ ಸೌಲಭ್ಯದ ಮೇಲೆ ರಷ್ಯಾ 30 ರಾಕೆಟ್‌ಗಳನ್ನು ಹಾರಿಸಿದೆ ಎಂದು ಅವರು ಹೇಳಿದ್ದಾರೆ.

  • 13 Mar 2022 01:52 PM (IST)

    Russia Ukraine War Live: ಉಕ್ರೇನ್​ ಸೇನಾ ನೆಲೆಯಲ್ಲಿ ವಿದೇಶಿ ಸೇನೆ ಕೆಲಸ

    ರಷ್ಯಾದಿಂದ ದಾಳಿಗೊಳಗಾದ ಪೂರ್ವ ಉಕ್ರೇನ್‌ನ ಸೇನಾ ನೆಲೆಯಲ್ಲಿ ವಿದೇಶಿ ಸೇನಾ ಬೋಧಕರು ಕೆಲಸ ಮಾಡುತ್ತಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್ ಹೇಳಿದ್ದಾರೆ. ಪೋಲಿಷ್ ಗಡಿಯಿಂದ 10 ಕಿಮೀ (6 ಮೈಲುಗಳು) ದೂರದಲ್ಲಿರುವ ಶಾಂತಿಪಾಲನಾ ಮತ್ತು ಭದ್ರತಾ ಅಂತರರಾಷ್ಟ್ರೀಯ ಕೇಂದ್ರವನ್ನು ಎಂಟು ಕ್ಷಿಪಣಿಗಳು ದಾಳಿ ಮಾಡಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

  • 13 Mar 2022 01:21 PM (IST)

    Russia Ukraine War Live: ಮೃತ ರಷ್ಯಾ ಸೈನಿಕರಿಂದ ತುಂಬಿ ಹೋದ ಬೆಲಾರಸ್​ನ ಶವಾಗಾರ

    ಸ್ಥಳೀಯರ ಪ್ರಕಾರ, ಬೆಲಾರಸ್‌ನ ಶವಾಗಾರವು ರಷ್ಯಾದ ಸೈನಿಕರ ಮೃತ ದೇಹಗಳಿಂದ ತುಂಬಿ ಹೋಗಿದೆ. ದಿ ಕೈವ್ ಇಂಡಿಪೆಂಡೆಂಟ್ ಉಲ್ಲೇಖಿಸಿದ ಪ್ರಕಾರ, ಉಕ್ರೇನ್‌ನಲ್ಲಿ ಕೊಲ್ಲಲ್ಪಟ್ಟ ರಷ್ಯಾದ ಸೈನಿಕರನ್ನು ಟ್ರಕ್‌ನಲ್ಲಿ ಶವಾಗಾರಕ್ಕೆ ಕರೆತರಲಾಗುತ್ತದೆ. ನಂತರ ರೈಲು ಅಥವಾ ವಿಮಾನದ ಮೂಲಕ ರಷ್ಯಾಕ್ಕೆ ಹಿಂತಿರುಗಿಸಲಾಗುತ್ತದೆ ಎಂದು ಹೇಳಲಾಗಿದೆ.

  • 13 Mar 2022 01:02 PM (IST)

    Russia Ukraine War Live: ಸ್ಥಳಾಂತರಿಸುವಿಕೆ ಮುಂದುವರಿಕೆ

    ಉಕ್ರೇನ್‌ನ ಮುತ್ತಿಗೆ ಹಾಕಿದ ನಗರಗಳಿಂದ ಜನರನ್ನು ಸ್ಥಳಾಂತರಿಸಲು ಸಹಾಯ ಮಾಡುವ ಮಾನವೀಯ ಕಾರಿಡಾರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ದೈನಂದಿನ ಸ್ಥಳಾಂತರಿಸುವಿಕೆ, ಸುಮಾರು 13,000 ಜನರಷ್ಟು ದ್ವಿಗುಣಗೊಳ್ಳುತ್ತಿದೆ. ಬಂದರು ನಗರವಾದ ಮರಿಯುಪೋಲ್‌ಗೆ ಮಾನವೀಯ ಸರಬರಾಜುಗಳು ಇಂದು ಬರಲಿವೆ.

  • 13 Mar 2022 12:32 PM (IST)

    Russia Ukraine War Live: ಮೇಯರ್ ನಗರದ ವಿಮಾನ ನಿಲ್ದಾಣದ ಮೇಲೆ ದಾಳಿ

    ಪಶ್ಚಿಮ ನಗರವಾದ ಇವಾನೊ-ಫ್ರಾಂಕಿವ್ಸ್ಕ್‌ನಲ್ಲಿ ಸ್ಫೋಟಗಳು ನಡೆಯುತ್ತಿದ್ದು, ಈಗ ಮೇಯರ್ ನಗರದ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂದು ಬೆಳಗ್ಗೆ ವಿಮಾನ ನಿಲ್ದಾಣದ ಮೇಲೆ ದಾಳಿ ಸಂಭವಿಸಿದೆ ಎಂದು ರುಸ್ಲಾನ್ ಮಾರ್ಟ್ಸಿಂಕಿವ್ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ. ಶಾಂತಿ ಮತ್ತು ಭಯವನ್ನು ಬಿತ್ತುವುದು ಶತ್ರುಗಳ ಗುರಿ ಎಂದು ನಾನು ನಿಮಗೆ ನೆನಪಿಸುತ್ತೇನೆ ಎಂದು ಕೂಡ ಅವರು ಬರೆದುಕೊಂಡಿದ್ದಾರೆ. ನಗರವು ಎಲ್ವಿವ್‌ನ ದಕ್ಷಿಣಕ್ಕೆ ಸುಮಾರು 114km (70 ಮೈಲುಗಳು) ದೂರದಲ್ಲಿದೆ. ಅಲ್ಲಿ ಮಿಲಿಟರಿ ತರಬೇತಿಗಾಗಿ ಬಳಸಲಾದ ಬೇಸ್​ನ್ನು ಸಹ ಹೊಡೆದುರುಳಿಸಲಾಗಿದೆ.

  • 13 Mar 2022 11:58 AM (IST)

    Russia Ukraine War Live: ಎಲ್ವಿನ್​ ಪ್ರದೇಶವನ್ನು ಗುರಿಯಾಗಿಸಿಕೊಂಡ ರಷ್ಯಾ ಸೇನೆ

    ಎಲ್ವಿವ್ ನಗರದ ಹೊರಗಿನ ಮಿಲಿಟರಿ ತರಬೇತಿ ಕೇಂದ್ರದ ಮೇಲೆ ರಷ್ಯಾದ ಪಡೆ ಕ್ಷಿಪಣಿ ದಾಳಿ ನಡೆಸಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳಿದ್ದಾರೆ. ಎಲ್ವಿವ್ ಪೋಲಿಷ್ ಗಡಿಯಿಂದ ಕೇವಲ 80km (50 ಮೈಲುಗಳು) ದೂರದಲ್ಲಿದೆ. ದೇಶದ ಇತರ ಭಾಗಗಳಿಂದ ಸ್ಥಳಾಂತರಗೊಂಡ ಅನೇಕ ಉಕ್ರೇನಿಯನ್ನರ ತಾಣವಾಗಿದೆ . ಯುದ್ದದ ಆರಂಭಿಕ ದಿನಗಳಲ್ಲಿ, ರಷ್ಯಾ ಪಡೆ ರಾಜಧಾನಿ ಕೈವ್ ಸೇರಿದಂತೆ ಉತ್ತರ, ಪೂರ್ವ ಮತ್ತು ದಕ್ಷಿಣದ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಷ್ಯಾದ ಸೇನೆ ಮಧ್ಯಭಾಗದಲ್ಲಿರುವ ಡ್ನಿಪ್ರೊ ಮತ್ತು ಪಶ್ಚಿಮದ ಇವಾನೊ-ಫ್ರಾಂಕಿವ್ಸ್ಕ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ.

  • 13 Mar 2022 11:48 AM (IST)

    Russia Ukraine War Live: ಉಕ್ರೇನ್​​ನ ಇವಾನೊ – ಫ್ರಾಂಕಿವ್ಸ್ಕ್‌ನಲ್ಲಿ ಸ್ಪೋಟ

    ಉಕ್ರೇನಿಯಾದ ಪಶ್ಚಿಮ ನಗರವಾದ ಇವಾನೊ-ಫ್ರಾಂಕಿವ್ಸ್ಕ್‌ನಲ್ಲಿ ಸ್ಫೋಟಗಳ ಶಬ್ದ ಕೇಳಿಬರುತ್ತಿದೆ ಎಂದು ಹೇಳಲಾಗುತ್ತಿದೆ. ಉಕ್ರೇನಿಯನ್ ಸುದ್ದಿವಾಹಿನಿಗಳು ಸಹ ಇದೇ ರೀತಿಯ ಸ್ಫೋಟಗಳ ಕುರಿತು ವರದಿ ಮಾಡುತ್ತಿವೆ.

  • 13 Mar 2022 11:42 AM (IST)

    Russia Ukraine War Live: ಎಲ್ವಿವ್​ನ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ

    ರಷ್ಯಾದ ಪಡೆಗಳು ಅಂತರರಾಷ್ಟ್ರೀಯ ಶಾಂತಿಪಾಲನಾ ಮತ್ತು ಭದ್ರತಾ ಕೇಂದ್ರದ ಮೇಲೆ ಎಂಟು ಕ್ಷಿಪಣಿಗಳನ್ನು ಹಾರಿಸಿ ವಾಯುದಾಳಿ ನಡೆಸಿವೆ ಎಂದು ಎಲ್ವಿವ್ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರವು ಯವೊರಿವ್ ಜಿಲ್ಲೆಯಲ್ಲಿದೆ. ಎಲ್ವಿವ್‌ನ ವಾಯುವ್ಯಕ್ಕೆ ಸುಮಾರು 30 ಕಿಮೀ ದೂರದಲ್ಲಿದ್ದು, ಇದು ಮಿಲಿಟರಿ ತರಬೇತಿ ಮೈದಾನವಾಗಿದೆ.

  • 13 Mar 2022 11:34 AM (IST)

    Russia Ukraine War Live: ನವೀನ್ ದೇಹ ತರೋ ಬಗ್ಗೆ ಮಾತುಕತೆ ನಡೀತಿದೆ

    ಯುಕ್ರೇನ್​ನಲ್ಲಿರುವ ಭಾರತೀಯರ ಸ್ಥಳಾಂತರ ಅಂತಿಮ‌ ಹಂತಕ್ಕೆ ಬಂದಿದೆ. ನವೀನ್ ದೇಹ ತರೋ ಬಗ್ಗೆ ಮಾತುಕತೆ ನಡೀತಿದೆ. ಉಕ್ರೇನ್​ನಲ್ಲಿ ಬಾಂಬಿಂಗ್ ಇನ್ನೂ ನಡೀತಿದೆ. ದಾಳಿ ನಿಂತ ನಂತರ ದೇಹ ತರುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಉಕ್ರೇನ್​ನಲ್ಲಿ ಉಳಿದವರಿಗೂ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಲು ಭಾರತ ಮುಂದಾಗಿದೆ.

  • 13 Mar 2022 11:29 AM (IST)

    Russia Ukraine War Live: ಕೀವ್ ವಶಕ್ಕೆ ಪಡೆಯಲು ರಷ್ಯಾದಿಂದ ಅಂತಿಮ ತಯಾರಿ

    ರಷ್ಯಾ ಕೀವ್ ವಶಪಡಿಸಿಕೊಳ್ಳಲು ಅಂತಿಮ ದಾಳಿಗೆ ತಯಾರಿ ನಡೆಸುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ರಾಸಾಯನಿಕ ಅಸ್ತ್ರಗಳನ್ನು ಬಳಸಬಹುದು ಎಂದು ನ್ಯಾಟೋ ಎಚ್ಚರಿಕೆ ನೀಡಿದೆ.

  • 13 Mar 2022 11:25 AM (IST)

    ಕೀವ್ ವಶಕ್ಕೆ ಪಡೆಯಲು ರಷ್ಯಾ ಸಿದ್ಧತೆ

    ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ಪಡೆಯಲು ರಷ್ಯಾ ಅಂತಿಮ ಸಿದ್ಧತೆ ನಡೆಸುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ರಾಸಾಯನಿಕ ಅಸ್ತ್ರ ಬಳಸಬಹುದು ಎಂದು ನ್ಯಾಟೊ ಎಚ್ಚರಿಕೆಯ ಸಂದೇಶ ನೀಡಿದೆ.

  • 13 Mar 2022 11:22 AM (IST)

    ಉಕ್ರೇನ್ ಜನರಿಗೆ ಗೂಗಲ್ ನೆರವು: ಅಂಡ್ರಾಯ್ಡ್ ಫೋನ್​ಗಳಿಗೆ ಅಲರ್ಟ್ ರವಾನೆ

    ಉಕ್ರೇನ್ ಜನರಿಗೆ ಸಹಾಯ ಮಾಡಲು ಗೂಗಲ್ ಮುಂದಾಗಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ವೈಮಾನಿಕ ದಾಳಿ ಬಗ್ಗೆ ಮುಂಚಿತವಾಗಿಯೇ ಎಚ್ಚರಿಕೆಯ ಸಂದೇಶ ರವಾನಿಸುವುದಾಗಿ ಗೂಗಲ್ ಘೋಷಿಸಿದೆ. ಜನರ ಜೀವ ಉಳಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ಗೂಗಲ್ ಹೇಳಿದೆ.

  • 13 Mar 2022 11:20 AM (IST)

    ನವೀನ್ ದೇಹದ ತರುವ ಬಗ್ಗೆ ಕ್ರಮ: ಸಿಎಂ ಬೊಮ್ಮಾಯಿ

    ಬೆಂಗಳೂರು: ಉಕ್ರೇನ್​ನಲ್ಲಿರುವ ಭಾರತೀಯರ ಸ್ಥಳಾಂತರ ಕಾರ್ಯಾಚರಣೆ ಅಂತಿಮಹಂತಕ್ಕೆ ಬಂದಿದೆ. ಮೃತ ನವೀನ್ ಅವರ ಪಾರ್ಥಿವ ಶರೀರ ತರುವ ತರೋ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ನಿರಂತರ ಬಾಂಬಿಂಗ್ ಮತ್ತು ದಾಳಿ ನಡೆಯುತ್ತಿರುವುದರಿಂದ ತಕ್ಷಣಕ್ಕೆ ದೇಹ ತರುವುದು ಸಾಧ್ಯವಾಗುತ್ತಿಲ್ಲ. ದಾಳಿ ನಿಂತ ನಂತರ ದೇಹ ತರುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಉಕ್ರೇನ್​ನಲ್ಲಿರುವ ಇತರ ದೇಶೀಯರಿಗೂ ಹಲವು ರೀತಿಯಲ್ಲಿ ಸಹಾಯ ಮಾಡಲು ಭಾರತ ಮುಂದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

  • 13 Mar 2022 11:17 AM (IST)

    ಮಿಲಿಟರಿ ಚಟುವಟಿಕೆ ಬಗ್ಗೆ ಪೋಸ್ಟ್ ಬೇಡ: ಝೆಲೆನ್​ಸ್ಕಿ ಮನವಿ

    ಉಕ್ರೇನ್ ಮಿಲಿಟರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕಬೇಡಿ ಎಂದು ಸಾಮಾಜಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮನವಿ ಮಾಡಿದ್ದಾರೆ.

  • 13 Mar 2022 10:35 AM (IST)

    Russia Ukraine War Live: ಎಲ್ವಿವ್ನಲ್ಲಿ ಸ್ಫೋಟಗಳ ಶಬ್ದ

    ಪ್ರತ್ಯಕ್ಷದರ್ಶಿಗಳ ಪ್ರಕಾರ ಉಕ್ರೇನಿಯನ್‌ಗೆ ಪಶ್ಚಿಮ ನಗರವಾದ ಎಲ್ವಿವ್‌ನಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಹೇಳಿದ್ದಾರೆ. ನಗರದಲ್ಲಿ ಎರಡು ಪ್ರಬಲ ಸ್ಫೋಟಗಳು ಸಂಭವಿಸಿವೆ ಎಂದು ವರದಿ ಮಾಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು UNIAN ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಎಲ್ವಿವ್ ಮತ್ತು ಉಕ್ರೇನ್‌ನ ಇತರ ಹಲವು ಪ್ರದೇಶಗಳಲ್ಲಿ ರಾತ್ರಿಯಿಡೀ ವಾಯುದಾಳಿ ಸೈರನ್‌ ಶಬ್ದಗಳು ಕೇಳಿಬಂದಿವೆ.

  • 13 Mar 2022 10:08 AM (IST)

    Russia Ukraine War Live: ನಮಗೆ ಖಂಡಿತವಾಗಿಯೂ ಹೊರಗಿನ ಸಹಾಯ ಬೇಕು

    ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ನಿರಾಶ್ರಿತರಿಗೆ ಮನೆ ಮತ್ತು ಕಾಳಜಿ ವಹಿಸಲು ಮೊಲ್ಡೊವನ್ ನಾಗರಿಕರು ಸಹಾಯ ಮಾಡುತ್ತಿದ್ದಾರೆ ಎಂದು ಎಂಎಸ್​ ಗವ್ರಿಲಿಟಾ ಹೇಳಿದರು. ಯುದ್ಧದ ಆರ್ಥಿಕ ಪರಿಣಾಮಗಳ ಬಗ್ಗೆ ನಾವು ತುಂಬಾ ಚಿಂತಿತರಾಗಿದ್ದೇವೆ. ಮೊಲ್ಡೊವಾ ಇದು ಯುರೋಪ್‌ನ ಅತ್ಯಂತ ಬಡ ದೇಶಗಳಲ್ಲಿ ಒಂದು.  ನಮಗೆ ಖಂಡಿತವಾಗಿಯೂ ಹೊರಗಿನ ಸಹಾಯ ಬೇಕು ಎಂದಿದ್ದಾರೆ.

  • 13 Mar 2022 09:26 AM (IST)

    Russia Ukraine War Live: ಕೈವ್‌ನಲ್ಲಿ ಸ್ಫೋಟಕ ಡ್ರೋನ್ ಪತನ

    ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಶನಿವಾರ ಮಧ್ಯಾಹ್ನ ಕೈವ್‌ನಲ್ಲಿ ಉಕ್ರೇನಿಯನ್ ಭದ್ರತಾ ಪಡೆಗಳು ಡ್ರೋನ್​ನ್ನು ನೆಲಸಮಗೊಳಿಸಿದ್ದಾರೆ. ಡ್ರೋನ್‌ನಲ್ಲಿ ಮೂರು ಕಿಲೋಗ್ರಾಂ ಸ್ಫೋಟಕವಿತ್ತು ಎಂದು ಹೇಳಲಾಗಿದೆ. ಇದು ಕೈವ್‌ನ ಪೊಡಿಲ್ ನೆರೆಹೊರೆಯಲ್ಲಿ ಅಪ್ಪಳಿಸಿದ್ದು, ಬ್ಯಾಂಕ್​ವೊಂದರಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ.

  • 13 Mar 2022 09:17 AM (IST)

    Russia Ukraine War Live: ಉಕ್ರೇನ್‌ನಲ್ಲಿ ಈವರೆಗೆ 597 ನಾಗರಿಕರ ಸಾವು

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಉಕ್ರೇನ್‌ನಲ್ಲಿ ಈವರೆಗೆ 597 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯಿಂದ ಮಾಹಿತಿ ನೀಡಲಾಗಿದೆ.

  • 13 Mar 2022 09:14 AM (IST)

    Russia Ukraine War Live: ಜಗತ್ತು ಭವಿಷ್ಯದತ್ತ ಹಜ್ಜೆ ಹಾಕುವ ಬದಲು ಭೂತಕಾಲಕ್ಕೆ ಮರಳುತ್ತಿದೆ

    ಉಕ್ರೇನ್‌ನ ಮೇಲಿನ ರಷ್ಯಾದ ಆಕ್ರಮಣವು ಜಗತ್ತು ಭವಿಷ್ಯ ದತ್ತ ಹೆಜ್ಜೆ ಹಾಕುವ ಧೈರ್ಯದ ಬದಲು ಭೂತಕಾಲಕ್ಕೆ ಮರಳುತ್ತಿದೆ ಎಂಬುದರ ಸೂಚನೆಯಾಗಿದೆ ಎಂದು ವ್ಯಾಟಿಕನ್ ಹಿರಿಯ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ. ಪೋಪ್ ಫ್ರಾನ್ಸಿಸ್ ನಂತರ ಕ್ಯಾಥೋಲಿಕ್ ಚರ್ಚ್‌ನಲ್ಲಿ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ವ್ಯಾಟಿಕನ್ ಸ್ಟೇಟ್ ಸೆಕ್ರೆಟರಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್, ಉಕ್ರೇನ್‌ನೊಂದಿಗೆ ಮಾತುಕತೆ ನಡೆಸಲು ರಷ್ಯಾಕ್ಕೆ ಕರೆ ನೀಡಿದರು. ಮಧ್ಯಸ್ಥಿಕೆ ಮಾತುಕತೆಗಳನ್ನು ವ್ಯಾಟಿಕನ್ ಸಿಟಿ ಆಯೋಜಿಸಲು ಪ್ರಸ್ತಾಪ ಮಾಡಿದ್ದು, ಶಾಂತಿಯುತ ಸಹಬಾಳ್ವೆಯೊಂದಿಗೆ ಭವಿಷ್ಯದ ಕಡೆಗೆ ಹೆಜ್ಜೆಗಳನ್ನು ಇಡುವುದು ಮುಖ್ಯವಾಗಿದೆ ಎಂದು ಹೇಳಿದರು.

  • 13 Mar 2022 08:59 AM (IST)

    Russia Ukraine War Live: 1.6 ಮಿಲಿಯನ್​ಗಿಂತಲೂ ಹೆಚ್ಚು ಜನರ ಸ್ಥಳಾಂತರ

    ಎರಡು ವಾರಗಳ ಹಿಂದೆ ಯುದ್ದ ಪ್ರಾರಂಭವಾದಾಗಿನಿಂದ 1.6 ಮಿಲಿಯನ್‌ಗಿಂತಲೂ ಹೆಚ್ಚು ಜನರು ಈಗ ಉಕ್ರೇನ್‌ನಿಂದ ಪೋಲೆಂಡ್‌ಗೆ ಸ್ಥಳಾಂತರ  ಮಾಡಿದ್ದಾರೆ ಎಂದು ಪೋಲಿಷ್ ಬಾರ್ಡರ್ ಗಾರ್ಡ್‌ಗಳು ಹೇಳಿದ್ದಾರೆ.

  • 13 Mar 2022 08:51 AM (IST)

    Russia Ukraine War Live: ಉಕ್ರೇನ್ ದೇಶವನ್ನ ಒಡೆಯಲು ರಷ್ಯಾ ಪ್ರಯತ್ನ

    ಉಕ್ರೇನ್ ದೇಶವನ್ನ ಒಡೆಯುವುದಕ್ಕೆ ರಷ್ಯಾ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಹೊಸ ಹುಸಿ ಗಣರಾಜ್ಯಗಳನ್ನು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪ ಮಾಡಿದ್ದಾರೆ.

  • 13 Mar 2022 08:49 AM (IST)

    Russia Ukraine War Live: ಈವರೆಗೆ 1,300 ಉಕ್ರೇನಿಯನ್ ಸೈನಿಕರ ಸಾವು; ಉಕ್ರೇನ್​ ಅಧ್ಯಕ್ಷ ಹೇಳಿಕೆ

    ರಷ್ಯಾ ಉಕ್ರೇನ್​ ಯುದ್ದ ನಡೆದಿದ್ದು, ಈವರೆಗೆ 1,300 ಉಕ್ರೇನಿಯನ್ ಸೈನಿಕರು ಮಹಾ ಸಮರದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

  • 13 Mar 2022 08:41 AM (IST)

    Russia Ukraine War Live: ಉಕ್ರೇನ್ ವಿರುದ್ಧ ರಷ್ಯಾ ಗೆಲುವು ಸಾಧಿಸಲು ಸಾಧ್ಯವಿಲ್ಲ; ವೊಲೊಡಿಮಿರ್ ಝೆಲೆನ್ಸ್ಕಿ

    ಉಕ್ರೇನ್ ವಿರುದ್ಧ ರಷ್ಯಾ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತೊಂದು ಭಾಷಣದಲ್ಲಿ ಹೇಳಿದ್ದಾರೆ. ರಷ್ಯಾದ ಆಕ್ರಮಣಕಾರರು ನಮ್ಮನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಅಷ್ಟು ಶಕ್ತಿ ಇಲ್ಲ. ಅವರಿಗೆ ಅಂತಹ ಧೈರ್ಯ ಇಲ್ಲ. ಅವರು ಹಿಂಸೆಯನ್ನು ಮಾತ್ರ ಮಾಡಬಹುದು. ಆಯುಧಗಳೊಂದಿಗೆ ನಮ್ಮನ್ನು ಹೆದರಿಸಬಹುದು ಅಷ್ಟೇ. ನಮ್ಮ ವಿರುದ್ಧ ರಷ್ಯಾ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.

  • 13 Mar 2022 08:26 AM (IST)

    Russia Ukraine War Live: ರಷ್ಯಾ ಉಕ್ರೇನ್ ಯುದ್ಧ ಹಲವು ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ

    ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷವು ಲೋಹೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಈ ಎರಡೂ ದೇಶಗಳು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ. ಈ ದೇಶಗಳು ಪರಸ್ಪರ ಕಾದಾಡುತ್ತ ನಿಕ್ಷೇಪಗಳ ಉತ್ಖನನದಿಂದ ತೊಡಗಿ ಲೋಹಗಳ ರಫ್ತಿನ ವರೆಗೆ ಎಲ್ಲದಕ್ಕೂ ಹಿನ್ನಡೆಯಾಗಿ, ಅದು ಅನೇಕ ದೇಶಗಳ ಮೇಲೆ, ವಿಶೇಷವಾಗಿ ಯುರೋಪಿನ ಮೇಲೆ, ದೂರಗಾಮಿ ಪರಿಣಾಮವನ್ನು ಬೀರುತ್ತಿದೆ.

  • 13 Mar 2022 08:13 AM (IST)

    Russia Ukraine War Live: ಉಕ್ರೇನ್​ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ರಷ್ಯಾ ಶೆಲ್ ದಾಳಿ

    ಉಕ್ರೇನಿಯನ್ ರಾಜ್ಯ ತುರ್ತು ಸೇವೆ (SES) ಹೇಳುವ ಪ್ರಕಾರ, ಲುಹಾನ್ಸ್ಕ್ ಪ್ರದೇಶದ ಸೆವೆರೊಡೊನೆಟ್ಸ್ಕ್ ಮತ್ತು ರುಬಿಜ್ನೆ ನಗರಗಳಲ್ಲಿ ರಷ್ಯಾದ ಶೆಲ್ ದಾಳಿ ಮಾಡಿದ್ದು, ಅಪಾರ್ಟ್‌ಮೆಂಟ್‌ಗಳನ್ನು ಹಾನಿಗೊಳಿಸಿದೆ. ಜೊತೆಗೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಪರಿಶೀಲನೆ ನಡೆಸಿದ ಸರ್ಕಾರದ ಅಂದಾಜಿನ ಪ್ರಕಾರ ಖಾಸಗಿ ಮನೆಗಳು ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳು ಸೇರಿದಂತೆ ಸುಮಾರು 60 ಕಟ್ಟಡಗಳು ರಾತ್ರೋರಾತ್ರಿ ದಾಳಿ ಮಾಡಿ ಹೊಡೆದುರುಳಿಸಲಾಗಿದೆ.

  • 13 Mar 2022 08:06 AM (IST)

    Russia Ukraine War Live: ಉಕ್ರೇನ್‌ನ ಹಲವು ನಗರಗಳಲ್ಲಿ ಸೈರನ್ ಸೌಂಡ್

    ಉಕ್ರೇನ್‌ನ ಹಲವು ನಗರಗಳಲ್ಲಿ ಸೈರನ್ ಸೌಂಡ್ ಮಾಡಲಾಗಿದೆ. ಕೀವ್, ಖಾರ್ಕಿವ್, ಎಲ್ವಿವ್, ಒಡೆಸಾದಲ್ಲಿ ಸೈರನ್ ಮಾಡಲಾಗಿದ್ದು, ಹತ್ತಿರವಿರುವ ಬಂಕರ್‌ಗಳಿಗೆ ತೆರಳುವಂತೆ ಅಲರ್ಟ್ ಮಾಡಲಾಗಿದೆ.

  • 13 Mar 2022 08:03 AM (IST)

    Russia Ukraine War Live: ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಸೇನೆ ದಾಳಿ

    ಉಕ್ರೇನ್‌ನಲ್ಲಿ ರಷ್ಯಾ ಸೇನೆಯ ದಾಳಿ ಮುಂದುವರೆಸಿದೆ. ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಸೇನೆ ದಾಳಿ ಮಾಡುತ್ತಿದೆ. ಸೆವೆರೊಡೊನೆಟ್ಸ್​ಕ್ ಪಟ್ಟಣದ ಮೇಲೆ ರಷ್ಯಾ ದಾಳಿ ಮಾಡಿದ್ದು, ಅವಳಿ ಮಕ್ಕಳು ಹಾಗೂ ತಾಯಿಗೆ ಗಂಭೀರ ಗಾಯವಾಗಿದೆ. ಸದ್ಯ ಅವಳಿ ಮಕ್ಕಳು, ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • 13 Mar 2022 07:59 AM (IST)

    Russia Ukraine War Live: ಟ್ಯಾಂಕರ್ ದಾಳಿಗೆ ಪತಿ, ಪತ್ನಿ, ಪುಟ್ಟ ಮಗು ದುರ್ಮರಣ

    ಉಕ್ರೇನ್‌ನ ಸುಮಿ ನಗರದಲ್ಲಿ ರಷ್ಯಾ ಸೈನಿಕರು ಅಟ್ಟಹಾಸ ಮೇರೆದಿದ್ದು, ಪತಿ, ಪತ್ನಿ, ಮಗು ಮೇಲೆ ಯುದ್ಧ ಟ್ಯಾಂಕರ್‌ನಿಂದ ದಾಳಿ ಮಾಡಿದ್ದಾರೆ. ಕಾರಿನಲ್ಲಿ ಇದ್ದ ಮೈಖೈಲೊ ಕುಟುಂಬದ ಮೇಲೆ ದಾಳಿ ಮಾಡಿದ್ದು, ಟ್ಯಾಂಕರ್ ದಾಳಿಗೆ ಪತಿ, ಪತ್ನಿ, ಪುಟ್ಟ ಮಗು ದುರ್ಮರಣ ಹೊಂದಿದೆ.

  • 13 Mar 2022 07:57 AM (IST)

    Russia Ukraine War Live: ರಷ್ಯಾ ಜತೆ ಶಾಂತಿಯುತ ಮಾತುಕತೆಗೆ ಝೆಲೆನ್‌ಸ್ಕಿ ಯತ್ನ

    ರಷ್ಯಾ ಜತೆ ಶಾಂತಿಯುತ ಮಾತುಕತೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪ್ರಯತ್ನ ಮಾಡಿದ್ದಾರೆ. ಇದೇ ವಿಚಾರವಾಗಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಝೆಲೆನ್‌ಸ್ಕಿ ಚರ್ಚೆ ಮಾಡಲಿದ್ದಾರೆ.

Published On - 7:54 am, Sun, 13 March 22

Follow us on