AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​ನಲ್ಲಿ ಸೈನಿಕ ಕಾರ್ಯಾಚರಣೆ ಮಿತಗೊಳಿಸುವ ಭರವಸೆ ಕೊಟ್ಟ ರಷ್ಯಾ: ಇದೊಂದ ನಾಟಕ ಎಂದ ಅಮೆರಿಕ

‘ಕೀವ್ ನಗರದ ಮೇಲಿನ ದಾಳಿಯನ್ನು ತೀವ್ರಗೊಳಿಸಲು ರಷ್ಯಾ ವ್ಯೂಹ ರಚಿಸುತ್ತಿದೆ. ವಿವಿಧೆಡೆ ಚೆದುರಿರುವ ತನ್ನ ಪಡೆಗಳನ್ನು ಒಂದೆಡೆಗೆ ಕರೆತರಲು ಸಮಯ ಬೇಕಿದೆ. ಹೀಗಾಗಿ ಈ ನಾಟಕ ಆಡುತ್ತಿದೆ’ ಎಂದು ಅಮೆರಿಕ ಹೇಳಿದೆ.

ಉಕ್ರೇನ್​ನಲ್ಲಿ ಸೈನಿಕ ಕಾರ್ಯಾಚರಣೆ ಮಿತಗೊಳಿಸುವ ಭರವಸೆ ಕೊಟ್ಟ ರಷ್ಯಾ: ಇದೊಂದ ನಾಟಕ ಎಂದ ಅಮೆರಿಕ
ಉಕ್ರೇನ್ ನಗರಗಳಲ್ಲಿ ಹೋರಾಟ ತೀವ್ರಗೊಂಡಿದೆ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Mar 30, 2022 | 11:38 AM

Share

ಕೀವ್: ಉಕ್ರೇನ್ ರಾಜಧಾನಿ ಕೀವ್ ನಗರದ ಸುತ್ತಮುತ್ತ ಮಿಲಿಟರಿ ಕಾರ್ಯಾಚರಣೆ ಮಿತಗೊಳಿಸುವುದಾಗಿ ರಷ್ಯಾ ಘೋಷಿಸಿದೆ. ಆದರೆ ರಷ್ಯಾದ ಈ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿರುವ ಅಮೆರಿಕ ಮತ್ತು ಇತರ ಮಿತ್ರರಾಷ್ಟ್ರಗಳು, ‘ಕೀವ್ ನಗರದ ಮೇಲಿನ ದಾಳಿಯನ್ನು ತೀವ್ರಗೊಳಿಸಲು ರಷ್ಯಾ ವ್ಯೂಹ ರಚಿಸುತ್ತಿದೆ. ವಿವಿಧೆಡೆ ಚೆದುರಿರುವ ತನ್ನ ಪಡೆಗಳನ್ನು ಒಂದೆಡೆಗೆ ಕರೆತರಲು ಸಮಯ ಬೇಕಿದೆ. ಹೀಗಾಗಿ ಈ ನಾಟಕ ಆಡುತ್ತಿದೆ’ ಎಂದು ಹೇಳಿವೆ. ಟರ್ಕಿ ರಾಜಧಾನಿ ಇಸ್ತಾಂಬುಲ್​ನಲ್ಲಿ ರಷ್ಯಾ ಮತ್ತು ಉಕ್ರೇನ್​ ನಿಯೋಗಗಳ ನಡುವೆ ಹಲವು ಸುತ್ತಿನ ಮಾತುಕತೆಗೆಳು ನಡೆದವು. ಆದರೆ ಈವರೆಗೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಯುದ್ಧದಿಂದಾಗಿ ಉಕ್ರೇನ್​ನ ಸುಮಾರು 40 ಜನರು ನಿರಾಶ್ರಿತರಾಗಿ ಇತರ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ವಿಶ್ವದ ಹಲವು ದೇಶಗಳು ವಿಧಿಸಿರುವ ನಿರ್ಬಂಧಗಳಿಂದಾಗಿ ರಷ್ಯಾದ ಆರ್ಥಿಕತೆ ಕುಸಿದಿದೆ.

ಉಕ್ರೇನ್ ಪಡೆಗಳ ಪ್ರಬಲ ಪ್ರತಿರೋಧದಿಂದಾಗಿ ರಷ್ಯಾಕ್ಕೆ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ರಷ್ಯಾ ಪಡೆಗಳು ಈಗಾಗಲೇ ಗೆಲುವು ಸಾಧಿಸಿರುವ ಪ್ರದೇಶಗಳನ್ನೂ ಉಕ್ರೇನ್ ಪಡೆಗಳು ಮತ್ತೆ ತಮ್ಮ ಸುಪರ್ದಿಗೆ ತೆಗೆದುಕೊಂಡಿವೆ. ರಷ್ಯಾ ಪಡೆಗಳು ಮುತ್ತಿಗೆ ಹಾಕಿರುವ ನಗರಗಳಲ್ಲಿ ಜನರ ಸಂಕಷ್ಟ ಮುಂದುವರಿದಿದೆ. ಶಾಂತಿ ಮಾತುಕತೆ ನಡೆಯುವ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಪರಸ್ಪರ ನಂಬಿಕೆ ಮೂಡುವಂಥ ವಾತಾವರಣ ನಿರ್ಮಾಣವಾಗುವುದು ಅತ್ಯಗತ್ಯ. ಅಂತಿಮವಾಗಿ ಒಂದು ಒಪ್ಪಂದಕ್ಕೆ ಬರಲು ಅನುಕೂಲವಾಗುವಂತೆ ನಾವು ಕೀವ್ ಮತ್ತು ಚೆರ್ನಿಹಿವ್ ನಗರಗಳ ಆಸುಪಾಸು ಮಿಲಿಟರಿ ಕಾರ್ಯಾಚರಣೆ ಕಡಿಮೆ ಮಾಡಲು ನಿರ್ಧರಿಸಿದ್ದೇವೆ ಎಂದು ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೊಮಿನ್ ಹೇಳಿದರು.

ಮರಿಯುಪೋಲ್ ಮತ್ತು ಇತರ ನಗರಗಳಲ್ಲಿ ನಡೆಯುತ್ತಿರುವ ತೀವ್ರ ಹೋರಾಟದ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮಾತ್ರ ಎಂದಿನಂತೆ ರಷ್ಯಾಕ್ಕೆ ಸೆಡ್ಡು ಹೊಡೆಯುವ ಮಾತುಗಳನ್ನು ಆಡಿದ್ದಾರೆ. ‘ಉಕ್ರೇನಿಯನ್ನರು ಹೇಡಿಗಳಲ್ಲ. ದಾಳಿಕೋರರೊಂದಿಗೆ 34 ದಿನ ಸತತ ಹೋರಾಟ ಮಾಡಿದ್ದಾರೆ. ಕಳೆದ 8 ವರ್ಷಗಳಿಂದಲೂ ಡೊನ್​ಬಾಸ್​ನ ಪ್ರತ್ಯೇಕತಾವಾದಿಗಳೊಂದಿಗೆ ಹೋರಾಟ ಸಾಗಿದೆ. ಗಟ್ಟಿ ಫಲಿತಾಂಶ ಹೊರತುಪಡಿಸಿ ಮತ್ಯಾವುದನ್ನೂ ಅವರು ನಂಬುವ ಸ್ಥಿತಿಯಲ್ಲಿಲ್ಲ.

ರಷ್ಯಾದ ಈ ನಡೆಯನ್ನು ಉಕ್ರೇನ್​ನ ಸೇನಾ ಮುಖ್ಯಸ್ಥರು ಅನುಮಾನದಿಂದಲೇ ನೋಡುತ್ತಿದ್ದಾರೆ. ರಷ್ಯಾ ತನ್ನ ಸೇನಾ ತುಕಡಿಗಳನ್ನು ಸ್ಥಳಾಂತರಿಸಬೇಕು ಎಂದುಕೊಂಡಿದೆ. ಹೀಗಾಗಿ ನಮ್ಮನ್ನು ದಾರಿತಪ್ಪಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ರಷ್ಯಾ ಸಹ ಉಕ್ರೇನ್ ಮೇಲೆ ಹಲವು ಆರೋಪಗಳನ್ನು ಮಾಡಿದೆ. ನಾಗರಿಕರ ಹಸ್ತಾಂತರಕ್ಕೆಂದು ನಾವು ನೀಡುವ ಕದನ ವಿರಾಮ ರಿಯಾಯ್ತಿಯನ್ನು ಉಕ್ರೇನ್ ಸೇನೆ ತನ್ನ ವ್ಯೂಹ ಸರಿಪಡಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ. ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸ್ಫೋಟಕಗಳ ದಾಸ್ತಾನು ಮತ್ತು ಯುದ್ಧವ್ಯೂಹ ರಚನೆಗೆ ಬಳಸಿಕೊಳ್ಳುತ್ತಿದೆ ಎಂದು ರಷ್ಯಾ ದೂರಿದೆ. ಉಕ್ರೇನ್ ಮೇಲೆ ಶೀಘ್ರದಲ್ಲಿಯೇ ಮತ್ತೊಂದು ಸುತ್ತಿನ ದೊಡ್ಡಮಟ್ಟದ ದಾಳಿ ನಡೆಯಲಿದೆ. ಕೀವ್ ನಗರಕ್ಕೆ ರಷ್ಯಾದಿಂದ ಇರುವ ಆತಂಕ ಇನ್ನೂ ಪೂರ್ಣವಾಗಿ ಪರಿಹಾರವಾಗಿಲ್ಲ. ಉತ್ತರದಲ್ಲಿರುವ ತನ್ನ ಸೇನೆಯನ್ನು ಪೂರ್ವದ ಡೊನೆಟ್​ಸ್ಕ್ ಮತ್ತು ಲುಹಾನ್​ಸ್ಕ್ ಪ್ರದೇಶಗಳಿಗೆ ಸ್ಥಳಾಂತರಿಸಲು ರಷ್ಯಾ ಉದ್ದೇಶಿಸಿದೆ ಎಂದು ಬ್ರಿಟನ್​ನ ಗುಪ್ತಚರ ಇಲಾಖೆ ವರದಿ ಮಾಡಿದೆ.

ಇದನ್ನೂ ಓದಿ: Russia Ukraine Conflict: ರಷ್ಯಾಕ್ಕೆ ಎಂದಿಗೂ ಶರಣಾಗುವುದಿಲ್ಲ ಎಂದ ಝೆಲೆನ್​ಸ್ಕಿ: ರಷ್ಯಾ ಉಕ್ರೇನ್ ಸಂಘರ್ಷದ 10 ಪ್ರಮುಖ ಬೆಳವಣಿಗೆಗಳಿವು

ಇದನ್ನೂ ಓದಿ: Russia Ukraine War: ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ