Ukraine Russia War: ಉಕ್ರೇನ್-ರಷ್ಯಾ ಪರಸ್ಪರ ದಾಳಿ: ಪುಟಿನ್ ಸ್ಥಳಾಂತರ, 21 ನಾಗರಿಕರು ಸಾವು, ಆಸ್ತಿಪಾಸ್ತಿ ನಾಶ
ರಷ್ಯಾ(Russia) ಮತ್ತು ಉಕ್ರೇನ್(Ukraine) ನಡುವಿನ ಯುದ್ಧ ಮತ್ತೊಂದು ಅಪಾಯಕಾರಿ ಹಂತಕ್ಕೆ ತಲುಪಿದೆ. ಉಕ್ರೇನ್ -ಹಾಗೂ ರಷ್ಯಾ ಪರಸ್ಪರ ದಾಳಿ ನಡೆಸಿದೆ.
ರಷ್ಯಾ(Russia) ಮತ್ತು ಉಕ್ರೇನ್(Ukraine) ನಡುವಿನ ಯುದ್ಧ ಮತ್ತೊಂದು ಅಪಾಯಕಾರಿ ಹಂತಕ್ಕೆ ತಲುಪಿದೆ. ಉಕ್ರೇನ್ -ಹಾಗೂ ರಷ್ಯಾ ಪರಸ್ಪರ ದಾಳಿ ನಡೆಸಿದೆ. ರಷ್ಯಾ ಅಧ್ಯಕ್ಷ ವಾಸವಿದ್ದ ಕಟ್ಟಡದ ಮೇಲೆ ದಾಳಿ ನಡೆದಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಉಕ್ರೇನ್ ಸಂಚು ರೂಪಿಸಿದೆ ಎಂದು ರಷ್ಯಾ ಆರೋಪಿಸಿದೆ. ಇತ್ತೀಚಿಗೆ ಮಾಸ್ಕೋದಲ್ಲಿರೋ ಕ್ರೆಮ್ಲಿನ್ ಕಟ್ಟಡದ ಮೇಲೆ ಉಕ್ರೇನ್ 2 ಡ್ರೋನ್‌ಗಳನ್ನು ಉಡಾಯಿಸಿತ್ತು. 2 ಡ್ರೋನ್ಗಳನ್ನ ರಷ್ಯಾ ಹೊಡೆದುರುಳಿಸಿದೆ. ದಾಳಿಯಿಂದ ಪುಟಿನ್ಗೆ ಯಾವುದೇ ಅಪಾಯಗಳಾಗಿಲ್ಲ. ಜೊತೆಗೆ ಕ್ರೆಮ್ಲಿನ್ ಕಟ್ಟಡಕ್ಕೂ ಗಂಭೀರ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಇತ್ತ ಉಕ್ರೇನ್ ಮೇಲೆ ರಷ್ಯಾ ಸೇನೆ ವೈಮಾನಿಕ ದಾಳಿ ನಡೆಸಿದ್ದು, 21 ಮಂದಿ ಮೃತಪಟ್ಟಿದ್ದು, 48 ಜನರಿಗೆ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಖೇರ್ಸನ್ ನಗರದ ವಸತಿ ಪ್ರದೇಶದಲ್ಲಿ ಕ್ಷಿಪಣಿ ದಾಳಿ ನಡೆಸಿದೆ ರಷ್ಯಾ ಸೇನೆ ವಿರುದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆರೋಪ ಮಾಡಿದ್ದಾರೆ.
ಮತ್ತಷ್ಟು ಓದಿ:Russia-Ukraine War: ಉಕ್ರೇನ್ನ ಅಪಾರ್ಟ್ಮೆಂಟ್ ಮೇಲೆ ರಷ್ಯಾದ ಕ್ಷಿಪಣಿ ದಾಳಿ; 30 ಮಂದಿ ಸಾವು, 12 ಜನರ ಸ್ಥಿತಿ ಗಂಭೀರ
ಡ್ರೋನ್ ದಾಳಿಯನ್ನು ಯೋಜಿತ ಭಯೋತ್ಪಾದನಾ ಕೃತ್ಯ ಎಂದು ರಷ್ಯಾ ಕಿಡಿಕಾರಿದೆ. ಅಲ್ಲದೆ ರಷ್ಯಾ ಫೆಡರೇಷನ್‌ನ ಅಧ್ಯಕ್ಷರ ಜೀವಕ್ಕೆ ಹಾನಿ ಮಾಡುವ ಪ್ರಯತ್ನ ಎಂದು ಪರಿಗಣಿಸಿರುವುದಾಗಿ ರಷ್ಯಾ ಹೇಳಿದೆ. ರಷ್ಯಾ ಅಧ್ಯಕ್ಷ ಪುಟಿನ್ ಮನೆಯ ಮೇಲೆ ಶಸ್ತ್ರಾಸ್ತ್ರ ತುಂಬಿದ 2 ಡ್ರೋನ್‌ಗಳು ದಾಳಿ ಮಾಡಿದ್ದೇ ತಡ, ಜಗತ್ತಿಗೆ ಈ ಸುದ್ದಿ ಮಿಂಚಿನ ವೇಗದಲ್ಲಿ ತಲುಪಿದೆ. ಮತ್ತೊಂದ್ಕಡೆ ಪುಟಿನ್ ಮನೆ ಮೇಲೆ ದಾಳಿ ನಡೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ ಪುಟಿನ್ ಜೀವ ಉಳಿಸಲು ಕ್ರೆಮ್ಲಿನ್ ಮನೆಯಿಂದ 32 ಕಿ.ಮೀ. ದೂರದ ಬಂಕರ್‌ಗೆ ಪುಟಿನ್ ಅವರನ್ನು ಸ್ಥಳಾಂತರಿಸಲಾಗಿದೆ.
ಉಕ್ರೇನ್ ನಡೆಸಿದೆ ಎನ್ನಲಾದ ಡ್ರೋನ್ ದಾಳಿ ಬಗ್ಗೆ ರಷ್ಯಾ ಖಾರವಾಗಿ ಪ್ರತಿಕ್ರಿಯೆ ನೀಡಿದೆ. ರಷ್ಯಾವು ಯಾವಾಗ ಮತ್ತು ಎಲ್ಲಿ ಸೂಕ್ತ ಎನಿಸುತ್ತದೆಯೋ ಆಗ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕುಗಳನ್ನು ಹೊಂದಿದೆ. ಎರಡು ಮಾನವರಹಿತ ಡ್ರೋನ್‌ಗಳು ಕ್ರೆಮ್ಲಿನ್ ಕಡೆ ಧಾವಿಸುತ್ತಿದ್ದವು. ಎರಡನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ ಎಂದು ರಷ್ಯಾ ಹೇಳಿಕೆ ನೀಡಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಮನೆ ಮೇಲೆ ದಾಳಿ ನಡೆಯುತ್ತಿದ್ಧಂತೆ ಉಕ್ರೇನ್ ವಿರುದ್ಧ ರಷ್ಯಾ ಸೇನೆ ಭೀಕರ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ಉಕ್ರೇನ್ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ. ದಾಳಿಯಲ್ಲಿ ನಮ್ಮ ಪಾತ್ರವಿಲ್ಲ ಅಂತಾ ಸ್ವತಃ ಉಕ್ರೇನ್ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಇಂತಹ ದಾಳಿಯಿಂದ ಸಮಸ್ಯೆಗೆ ನಾವು ಪರಿಹಾರ ಹುಡುಕಲು ಆಗುವುದಿಲ್ಲ. ಇದು ನಮಗೆ ತಿಳಿದಿರುವ ಕಾರಣ ರಷ್ಯಾ ಅಧ್ಯಕ್ಷರ ಮನೆ ಮೇಲೆ ದಾಳಿ ಮಾಡುವ ಕೃತ್ಯಕ್ಕೆ ಕೈಹಾಕಲ್ಲ. ಇದು ನಮ್ಮ ಕೆಲಸವಲ್ಲ ಎಂದು ಉಕ್ರೇನ್ ಹೇಳಿದೆ.
ಇದ್ರ ಬೆನ್ನೇಲ್ಲೆ ಕ್ರೆಮ್ಲಿನ್ ಪ್ಯಾಲೇಸ್‌ನ ಮುಖ್ಯ ಕಟ್ಟಡದ ಹಿಂಭಾಗದಲ್ಲಿ ಹೊಗೆ ಏಳುತ್ತಿರುವ ವಿಡಿಯೋವನ್ನ ಸೇನಾ ಸುದ್ದಿಸಂಸ್ಥೆ ಜೆವ್ಡಾ ಚಾನೆಲ್ ವರದಿ ಮಾಡಿದೆ. ಇದಾದ ಬಳಿಕ ಮಾಸ್ಕೋದಲ್ಲಿ ಅನಧಿಕೃತ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ