AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್‌ನಲ್ಲಿ ಪ್ಯಾಸೆಂಜರ್ ರೈಲಿನ ಮೇಲೆ ರಷ್ಯಾದ ಡ್ರೋನ್ ದಾಳಿ; 30ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಉಕ್ರೇನ್‌ನ ಸುಮಿ ಪ್ರದೇಶದಲ್ಲಿ ಅಮಾಯಕ ಜನರನ್ನು ಗುರಿಯಾಗಿಸಿಕೊಂಡು  ಪ್ರಯಾಣಿಕರ ರೈಲಿನ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ. ಇದರಿಂದಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಜನರು ಸಾವು-ನೋವಿನ ನಡುವೆ ಹೋರಾಡುತ್ತಿದ್ದಾರೆ. ಇದುವರೆಗೂ ಸಾವಿನ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಹೊರಬಿದ್ದಿಲ್ಲ. ಡಜನ್​ಗಟ್ಟಲೆ ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಇಂದು ಮಧ್ಯಾಹ್ನ ಈ ದಾಳಿ ನಡೆದಿರುವುದರಿಂದ ಇನ್ನೂ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಸಿಗಲಿದೆ.

ಉಕ್ರೇನ್‌ನಲ್ಲಿ ಪ್ಯಾಸೆಂಜರ್ ರೈಲಿನ ಮೇಲೆ ರಷ್ಯಾದ ಡ್ರೋನ್ ದಾಳಿ; 30ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ
Russian Airstrike On Ukraine Train
ಸುಷ್ಮಾ ಚಕ್ರೆ
|

Updated on: Oct 04, 2025 | 4:35 PM

Share

ಕೈವ್, ಅಕ್ಟೋಬರ್ 4: ಉಕ್ರೇನ್‌ನ ಉತ್ತರ ಸುಮಿ ಪ್ರದೇಶದ ರೈಲ್ವೆ ನಿಲ್ದಾಣದಲ್ಲಿ ರಷ್ಯಾದ ಡ್ರೋನ್ ದಾಳಿ ನಡೆದಿದೆ. ರಷ್ಯಾದ ಡ್ರೋನ್ (Russian Drone Attack) ಉಕ್ರೇನಿನ (Ukraine) ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದಿದ್ದು, ಡಜನ್​ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಸುಮಿ ಪ್ರದೇಶದ ಶೋಸ್ಟ್ಕಾದಲ್ಲಿರುವ ರೈಲ್ವೆ ನಿಲ್ದಾಣದ ಮೇಲೆ ಕ್ರೂರ ರಷ್ಯಾದ ಡ್ರೋನ್ ದಾಳಿ” ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿದ್ದಾರೆ. ಧ್ವಂಸಗೊಂಡ ರೈಲು, ಸುಟ್ಟುಹೋದ ಪ್ರಯಾಣಿಕರ ಬೋಗಿ ಮತ್ತು ಕಿಟಕಿಗಳು ಆ ದಾಳಿಯ ಭಯಾನಕತೆಯನ್ನು ತೆರೆದಿಡುತ್ತಿವೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಗರಿಕರನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸಿದೆ. ಇದರಲ್ಲಿ ಡಜನ್​ಗಟ್ಟಲೆ ಪ್ರಯಾಣಿಕರು ಮತ್ತು ರೈಲು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಶೋಸ್ಟ್ಕಾದಿಂದ ಉಕ್ರೇನ್ ರಾಜಧಾನಿ ಕೈವ್‌ಗೆ ಹೋಗುತ್ತಿದ್ದ ರೈಲಿಗೆ ಡ್ರೋನ್ ಡಿಕ್ಕಿ ಹೊಡೆದಿದೆ ಎಂದು ಪ್ರಾದೇಶಿಕ ಗವರ್ನರ್ ಒಲೆಹ್ ಹ್ರಿಹೊರೊವ್ ಹೇಳಿದ್ದಾರೆ. ವೈದ್ಯರು ಮತ್ತು ರಕ್ಷಣಾ ಪಡೆಗಳು ರೈಲಿನ ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾದೊಂದಿಗಿನ ಯುದ್ಧ ಮುಗಿದ ನಂತರ ರಾಜೀನಾಮೆ ನೀಡುತ್ತೇನೆ; ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಘೋಷಣೆ

ಈ ದಾಳಿಯಿಂದ ಸುಮಾರು 30 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಜಿಲ್ಲಾ ಆಡಳಿತದ ಮುಖ್ಯಸ್ಥ ಒಕ್ಸಾನಾ ತರಾಸಿಯುಕ್ ತಿಳಿಸಿದ್ದಾರೆ. ಸಾವಿನ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ರಷ್ಯಾ ಉಕ್ರೇನ್‌ನ ರೈಲ್ವೆ ಮೂಲಸೌಕರ್ಯದ ಮೇಲೆ ತನ್ನ ವೈಮಾನಿಕ ದಾಳಿಯನ್ನು ಹೆಚ್ಚಿಸಿದೆ. ಕಳೆದ ಎರಡು ತಿಂಗಳುಗಳಲ್ಲಿ ಬಹುತೇಕ ಪ್ರತಿದಿನ ಉಕ್ರೇನ್ ಮೇಲೆ ದಾಳಿ ಮಾಡುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ
ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ
ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!
ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!
ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು
ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು
ಇರಾನ್-ಇಸ್ರೇಲ್ ಯುದ್ಧದಿಂದ ಗ್ರ್ಯಾನೈಟ್ ಉದ್ಯಮಕ್ಕೂ ಕುತ್ತು!
ಇರಾನ್-ಇಸ್ರೇಲ್ ಯುದ್ಧದಿಂದ ಗ್ರ್ಯಾನೈಟ್ ಉದ್ಯಮಕ್ಕೂ ಕುತ್ತು!