ಆಸ್ಪತ್ರೆಗೆ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದ್ದರೂ.. ರೋಗಿಯನ್ನು ಬಿಟ್ಟು ಹೊರ ಬಾರದ ವೈದ್ಯರು; ಜೀವವನ್ನೇ ಪಣಕ್ಕಿಟ್ಟು ಸರ್ಜರಿ ನಡೆಸಿದರು
ಬೆಂಕಿಹೊತ್ತಿಕೊಂಡಿದೆ ಎಂದು ಆಪರೇಶನ್ ಅರ್ಧಕ್ಕೆ ಬಿಟ್ಟಿದ್ದರೆ ಆ ರೋಗಿ ಉಳಿಯುತ್ತಿರಲಿಲ್ಲ. ಹಾಗಾಗಿ ಸರ್ಜರಿಯನ್ನು ಪೂರ್ಣಗೊಳಿಸಲಾಯಿತು. ನಂತರ ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು.
ಒಂದೆಡೆ ಆಸ್ಪತ್ರೆ ಹೊತ್ತಿ ಉರಿಯುತ್ತಿದೆ.. ಇನ್ನೊಂದೆಡೆ ವೈದ್ಯರು ರೋಗಿಯೊಬ್ಬರಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.. ಇಂಥದ್ದೊಂದು ಅಪರೂಪದ ಘಟನೆ ಇದೀಗ ವಿಶ್ವಾದ್ಯಂತ ಸುದ್ದಿಯಾಗಿದ್ದು, ವೈದ್ಯರ ತಂಡವನ್ನು ಪ್ರಶಂಸಿಸಲಾಗುತ್ತಿದೆ. ಅಂದು ಆ ರೋಗಿಗೆ ಓಪನ್ ಹಾರ್ಟ್ ಸರ್ಜರಿ ಮಾಡಲೇಬೇಕಿತ್ತು. ಅದರಂತೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು. ಅದೇ ಸಮಯಕ್ಕೆ ಬೆಂಕಿ ಬಿದ್ದು, ಜ್ವಾಲೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿತ್ತು. ಆದರೆ ಈ ವೈದ್ಯರ ತಂಡ ಧೈರ್ಯವಾಗಿ ನಿಂತು ಸರ್ಜರಿಯನ್ನು ಪೂರ್ಣಗೊಳಿಸಿದೆ.
ಈ ಘಟನೆ ನಡೆದದ್ದು ರಷ್ಯಾದ ಬ್ಲಾಗೊವೆಶ್ಚೆನ್ಸ್ಕ್ ಆಸ್ಪತ್ರೆಯಲ್ಲಿ. ಬೆಂಕಿಯನ್ನು ನಂದಿಸಲು ಹೊರಗೆ ಅಗ್ನಿಶಾಮಕ ದಳದವರು ಹೋರಾಡುತ್ತಿದ್ದರೆ, ಒಳಗೆ ರೋಗಿಯನ್ನು ಉಳಿಸಲು ವೈದ್ಯರ ತಂಡ ಇನ್ನಿಲ್ಲದಂತೆ ಪ್ರಯತ್ನ ಮಾಡುತ್ತಿತ್ತು. ಆಸ್ಪತ್ರೆಯಿಂದ ಸುಮಾರು 120 ಮಂದಿಯನ್ನು ಸ್ಥಳಾಂತರ ಮಾಡಲಾಯಿತಾದರೂ, ಆಪರೇಶನ್ ಥಿಯೇಟರ್ನಲ್ಲಿದ್ದ 8 ವೈದ್ಯರು, ಉಳಿದ ಸಿಬ್ಬಂದಿ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದರು. ಒಂದು ಹಂತದಲ್ಲಿ ತಮ್ಮ ಜೀವವನ್ನೇ ಒತ್ತೆಯಿಟ್ಟು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇನ್ನು ಆಪರೇಶನ್ ಕೋಣೆಗೆ ಎಲೆಕ್ಟ್ರಿಕಲ್ ಕೇಬಲ್ ಮೂಲಕ ವಿದ್ಯುತ್ ಸರಬರಾಜು ಮಾಡಲಾಗಿತ್ತು.
ಆಸ್ಪತ್ರೆಗೆ ಬೆಂಕಿ ಬಿದ್ದರೂ, ವೈದ್ಯರ ತಂಡ ಶಸ್ತ್ರಚಿಕಿತ್ಸೆ ನೀಡಿದ ಸಂದರ್ಭವನ್ನು ರಷ್ಯಾದ ತುರ್ತು ಪರಿಸ್ಥಿತಿಗಳ ಸಚಿವಾಲಯದ ಮುಖ್ಯ ನಿರ್ದೇಶನಾಲಯದ ಉಪಮುಖ್ಯಸ್ಥ ಕಾನ್ಸ್ಟಾಂಟಿನ್ ರೈಬಾಲ್ಕೊ ತಿಳಿಸಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಕ್ಕಟ್ಟಿನ ಸಂದರ್ಭದಲ್ಲೂ ಕರ್ತವ್ಯ ಬದ್ಧತೆ ಮೆರೆದ ವೈದ್ಯರು, ಸಿಬ್ಬಂದಿಯನ್ನು ಜನರು ಸಿಕ್ಕಾಪಟೆ ಹೊಗಳುತ್ತಿದ್ದಾರೆ.
ಬೆಂಕಿಹೊತ್ತಿಕೊಂಡಿದೆ ಎಂದು ಆಪರೇಶನ್ ಅರ್ಧಕ್ಕೆ ಬಿಟ್ಟಿದ್ದರೆ ಆ ರೋಗಿ ಉಳಿಯುತ್ತಿರಲಿಲ್ಲ. ಹಾಗಾಗಿ ಸರ್ಜರಿಯನ್ನು ಪೂರ್ಣಗೊಳಿಸಲಾಯಿತು. ನಂತರ ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ವೈದ್ಯರನ್ನೂ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಇನ್ನು ಈ ಆಸ್ಪತ್ರೆ ತುಂಬ ಹಳೆಯದು. 1907ರಲ್ಲಿ ಕಟ್ಟಿದ ಕಟ್ಟಡ. ಮರದ ಮೇಲ್ಛಾವಣಿಯಾಗಿದ್ದರಿಂದ ತುಂಬ ಬೇಗ ಬೆಂಕಿ ಪಸರಿಸಿದೆ ಎಂದು ತುರ್ತು ಪರಿಸ್ಥಿತಿಗಳ ಸಚಿವಾಲಯದ ಮುಖ್ಯ ನಿರ್ದೇಶನಾಲಯ ತಿಳಿಸಿದೆ.
ಮಾಡಿದ ತಪ್ಪನ್ನು ಜಾಸ್ತಿ ದಿನ ಮುಚ್ಚಿಡೋಕಾಗಲ್ಲ ಅಲ್ವಾ?; ಸುದೀಪ್ ನೇರ ಪ್ರಶ್ನೆಗೆ ಶಮಂತ್ ತಬ್ಬಿಬ್ಬು
Published On - 5:20 pm, Mon, 5 April 21