ಉಕ್ರೇನ್​ನ ಐದು ಪ್ರಮುಖ ನಗರಗಳನ್ನು ವಶಡಿಸಿಕೊಳ್ಳಲು ರಷ್ಯಾ ಯಾಕೆ ಹವಣಿಸುತ್ತಿದೆ? ಮಾಹಿತಿ ಇಲ್ಲಿದೆ

| Updated By: ganapathi bhat

Updated on: Mar 02, 2022 | 11:42 AM

ಮೈದಾನ ಎಂದೇ ಪ್ರಸಿದ್ಧಿ ಹೊಂದಿರುವ ಕೀವ್ ನಗರ ಮಧ್ಯಭಾಗದಲ್ಲಿರುವ ಇಂಡಿಪೆಂಡೆನ್ಸ್ ಸ್ಕ್ವೇರ್ ಆರೇಂಜ್ ರೆವ್ಯೂಲೂಷನ್ ಮತ್ತು 2014ರಲ್ಲಿ ರಷ್ಯಾ ಕ್ರಿಮಿಯಾವನ್ನು ವಶಪಸಿಕೊಳ್ಳಲು ಕಾರಣವಾದ ಯೂರೋಪ್-ಪರ ದಂಗೆಯ ಕೇಂದ್ರವಾಗಿತ್ತು.

ಉಕ್ರೇನ್​ನ ಐದು ಪ್ರಮುಖ ನಗರಗಳನ್ನು ವಶಡಿಸಿಕೊಳ್ಳಲು ರಷ್ಯಾ ಯಾಕೆ ಹವಣಿಸುತ್ತಿದೆ? ಮಾಹಿತಿ ಇಲ್ಲಿದೆ
ಖಾರ್ಕಿವ್ ಇಂದು ಹೀಗಿದೆ
Follow us on

ರಷ್ಯಾದ ಸೇನೆ ಉಕ್ರೇನ್ ನ ಸಣ್ಣಪುಟ್ಟ ಪ್ರಾಂತ್ಯಗಳನ್ನು ಆಕ್ರಮಿಸಿಕೊಳ್ಳುತ್ತಾ ಅದರ ರಾಜಧಾನಿ ಕೀವ್ ನತ್ತ (Kyiv) ಮುನ್ನುಗ್ಗುತ್ತಿದೆ. ರಾಜಕೀಯ ಮತ್ತು ಯುದ್ಧ ವಿಶ್ಲೇಷಕರ ಪ್ರಕಾರ ವ್ಲಾದಿಮಿರ್ ಪುಟಿನ್ (Vladimir Putin) ಸೇನೆ ಉಕ್ರೇನ್ (Ukraine) ನ 5 ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದೆ. ಅವುಗಳು ಯಾವು ಮತ್ತು ಪುಟಿನ್ ಯಾಕೆ ಈ ನಗರಗಳ ಮೇಲೆ ಕಣ್ಣಿಟ್ಟಿದ್ದಾರೆ ಅಂತ ಈ ಸಂಧರ್ಭದಲ್ಲಿ ತಿಳಿದುಕೊಳ್ಳವುದು ಅವಶ್ಯಕವಾಗಿದೆ.

ಕೀವ್

ಉಕ್ರೇನ್ ರಾಜಧಾನಿ ಕೀವ್ ಅನ್ನು ರಷ್ಯಾ, ಉಕ್ರೆನ್ ಮತ್ತು ಸ್ಲಾವಿಕ್ ಸಾಂಪ್ರದಾಯಿಕತೆಯ ತೊಟ್ಟಿಲು ಎಂದು ಕರೆಯಲಾಗುತ್ತದೆ. ಸುವರ್ಣ ಗುಮ್ಮಟಗಳು, ಪ್ರಾಚೀನ ಚರ್ಚ್ಗಳು ಮತ್ತು ಮಠಗಳು ಈ ನಗರದ ಪ್ರಮುಖ ಆಕರ್ಷಣೆಗಳಾಗಿವೆ.
ಎರಡೂ ದೇಶಗಳು ತಮ್ಮ ಮೂಲ ಪರಂಪರೆಯನ್ನು ಮಧ್ಯಕಾಲೀನ ಕೀವಾನ್ ರುಸ್ ಸಾಮ್ರಾಜ್ಯದೊಂದಿಗೆ ಗುರುತಿಸಿಕೊಳ್ಳುತ್ತವೆ. ಸದರಿ ಸಾಮ್ರಾಜ್ಯವು ಕೀವ್ ನಗರವನ್ನು ಆವರಿಸಿತ್ತು.

ಕೀವ್ 1991 ರಿಂದ ಸ್ವತಂತ್ರ ಉಕ್ರೇನ್‌ನ ರಾಜಧಾನಿಯಾಗಿದ್ದು ಇಲ್ಲಿನ ಜನಸಂಖ್ಯೆ, ಸುಮಾರು 30 ಲಕ್ಷದಷ್ಟಿದೆ. ಈ ನಗರ ಮೊದಲ ರಷ್ಯನ್ ಹೆಸರು ಕಿವ್ ಅಂತ ಕರೆಯಲ್ಪಡುತಿತ್ತು, ಈಗ ಅದು ಕೀವ್ ಆಗಿದೆ.

2001 ರಲ್ಲಿ ಕೀವ್ ತನ್ನ 1,500 ನೇ ವಾರ್ಷಿಕೋತ್ಸವವನ್ನು ಆಚರಿಸಿತು ಮತ್ತು ಅದರ 16 ನೇ ಶತಮಾನದ ಕೈವ್-ಪೆಚೆರ್ಸ್ಕ್ ಲಾವ್ರಾ ಮಠ ಮತ್ತು ಸೇಂಟ್ ಸೋಫಿಯಾ ಕೆಥೀಡ್ರಲ್-ಎರಡೂ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಮೈದಾನ ಎಂದೇ ಪ್ರಸಿದ್ಧಿ ಹೊಂದಿರುವ ಕೀವ್ ನಗರ ಮಧ್ಯಭಾಗದಲ್ಲಿರುವ ಇಂಡಿಪೆಂಡೆನ್ಸ್ ಸ್ಕ್ವೇರ್ ಆರೇಂಜ್ ರೆವ್ಯೂಲೂಷನ್ ಮತ್ತು 2014ರಲ್ಲಿ ರಷ್ಯಾ ಕ್ರಿಮಿಯಾವನ್ನು ವಶಪಸಿಕೊಳ್ಳಲು ಕಾರಣವಾದ ಯೂರೋಪ್-ಪರ ದಂಗೆಯ ಕೇಂದ್ರವಾಗಿತ್ತು.

ಖಾರ್ಕಿವ್

ರಷ್ಯದ ಗಡಿಯಿಂದ ಕೇವಲ 40 ಕಿಮೀ ದೂರವಿರುವ ಖಾರ್ಕಿವ್ ಉಕ್ರೇನಿನ ಎರಡನೇ ಅತಿ ದೊಡ್ಡ ನಗರವಾಗಿದೆ. ಸುಮಾರು 14 ಲಕ್ಷ ಜನ ವಾಸವಾಗಿರುವ ಟೆಕ್ ಹಬ್ ಇದಾಗಿದ್ದು ಬಹುಪಾಲು ಜನ ರಷ್ಯನ್ ಭಾಷೆ ಮಾತಾಡುತ್ತಾರೆ.

ಕಳೆದ ಕೆಲ ದಿನಗಳಿಂದ ರಷ್ಯಾದಿಂದ ತೀವ್ರ ಸ್ವರೂಪದ ಬಾಂಬ್ ದಾಳಿಗೆ ತುತ್ತಾಗಿರುವ ಖಾರ್ಕಿವ್ ಎರಡನೇ ಮಹಾಯುದ್ಧದ ಸಮಯದಲ್ಲೂ ಎರಡು ಪ್ರಮುಖ ಟ್ಯಾಂಕ್ ಇಲ್ಲೇ ನಡೆದ ಕಾರಣ ಬಹಳ ಹಾನಿಗೊಳಗಾಗಿತ್ತು.

2014ರಿಂದ ರಷ್ಯನ್ ಬೆಂಬಲಿತ ಬಂಡುಕೋರರು ಮತ್ತು ಸರ್ಕಾರದ ಪಡೆಗಳ ನಡುವೆ ನಗರಕ್ಕೆ ಹತ್ತಿರದಲ್ಲಿರುವ ಡೊನ್ಬಾಸ್ ಪೂರ್ವ ಪ್ರಾಂತ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಕಾರಣ ಅನೇಕರು ಖಾರ್ಕಿವ್ ನಲ್ಲಿ ಬಂದು ನೆಲೆಸಿದ್ದಾರೆ.

ಮರಿಯುಪೋಲ್

ಅಜೋವ್ ಸಮುದ್ರ ತೀರದ ಕರಾವಳಿ ನಗರವಾಗಿರುವ ಮರಿಯುಪೋಲ್ ರಷ್ಯಾ ಉಕ್ರೇನ್ ಮೇಲೆ ದಂಡೆತ್ತಿ ಬಂದಾಗಿನಿಂದ ಆಕ್ರಮಣಕ್ಕೊಳಗಾಗಿದೆ.

2014ರಲ್ಲಿ ಕೀವ್ ವಿರುದ್ಧ ನಡೆದ ದಂಗೆಯ ಆರಂಭಿಕ ಹಂತದಲ್ಲಿ ಡೊನೆಟ್ಸ್ಕ್‌ ನ ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು ಮಾರಿಯುಪೋಲ್ ಅನ್ನು ಉಕ್ರೇನ್ ಸೇನೆ ವಶಪಡಿಸಿಕೊಳ್ಳುವ ಮೊದಲು ಅಲ್ಪಾವಧಿಯವರೆಗೆ ಅದನ್ನು ಅತಿಕ್ರಮಿಸಿಕೊಂಡಿದ್ದರು.

441,000 ಜನರಿರುವ ಆಗ್ನೇಯ ದಿಕ್ಕಿಗಿರುವ ನಗರವು ಪ್ರತ್ಯೇಕತಾವಾದಿಗಳು ಮತ್ತು ಕ್ರಿಮಿಯನ್ ಪರ್ಯಾಯ ದ್ವೀಪದ ನಡುವೆ ಇದೆ. 2014 ರಲ್ಲಿ ಇದನ್ನು ಮಾಸ್ಕೋ ಸ್ವಾಧೀನಪಡಿಸಿಕೊಂಡಿತು.

ಇಲ್ಲಿನ ಪ್ರತ್ಯೇತವಾದಿಗಳ ಜೊತೆ ಸಂಪರ್ಕದಲ್ಲಿರುವುದಾಗಿ ರಷ್ಯಾ ಪಡೆಗಳು ಮಂಗಳವಾರ ಹೇಳಿವೆ.

ಬರ್ಡ್ಯಾನ್ಸ್ಕ್

ಕ್ರಿಮಿಯಾನಿಂದ ಮುಂದೆ ಸಾಗಿ ಅಜೋವ್ ಸಮುದ್ರ ತೀರದಲ್ಲಿರುವ ಬರ್ಡ್ಯಾನ್ಸ್ಕ್ ನಗರದ ಬಂದರನ್ನು ವಶಪಡಿಸಿಕೊಂಡಿರುವುದಾಗಿ ರಷ್ಯಾ ಸೋಮವಾರ ಹೇಳಿಕೊಂಡಿದೆ. ಸುಮಾರು 1,15,000 ಜನ ವಾಸವಾಗಿರುವ ಬರ್ಡ್ಯಾನ್ಸ್ಕ್ ಸುಂದರ ಬೀಚ್ ಮತ್ತು ಮಣ್ಣಿನ ಸ್ನಾನಕ್ಕೆ ಹೆಸರುವಾಸಿಯಾಗಿದೆ. ಪ್ರತಿವರ್ಷ ಇಲ್ಲಿಗೆ 5 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ.

ಈ ನಗರವು ಮರಿಯುಪೋಲ್ ಕರಾವಳಿ ಪ್ರದೇಶದಿಂದ ಕೇವಲ 84 ಕಿಮೀ ದೂರದಲ್ಲಿದೆ.

ಖೆರ್ಸನ್

ಕ್ರಿಮಿಯಾ ಮೂಲಕ ರಷ್ಯಾದ ಪಡೆಗಳಿಂದ ಮುತ್ತಿಗೆ ಹಾಕಲ್ಪಟ್ಟಿರುವ ಖೆರ್ಸನ್ ಡ್ನೀಪರ್ ನದಿಯ ಪಶ್ಚಿಮ ದಂಡೆಯಲ್ಲಿರುವ ಒಂದು ಕಾರ್ಯತಂತ್ರದ ಬಂದರಾಗಿದ್ದು ಕ್ರಿಮಿಯನ್ ಪರ್ಯಾಯ ದ್ವೀಪದ ಮಾರ್ಗಗಳನ್ನು ನಿಯಂತ್ರಿಸುತ್ತದೆ.

ಹಿಂದೆ ಇದು ರಷ್ಯಾದ ಕಪ್ಪು ಸಮುದ್ರ ನೌಕಾಪಡೆಯ ನೆಲೆಯಾಗಿತ್ತು, ಅದರ ಪತನವು ಪಶ್ಚಿಮದಲ್ಲಿ ಒಡೆಸ್ಸಾಗೆ ದಾರಿ ಮಾಡಿದಂತಾಗಿದೆ. ರಷ್ಯನ್ ಮಾತನಾಡುವ ಜನಸಂಖ್ಯೆ ಇಲ್ಲಿ ಅಗಾಧವಾಗಿದೆ ಮತ್ತು ನ್ಯಾಟೋ-ಸದಸ್ಯ ರಾಷ್ಟ್ರಗಳಾದ ರುಮೇನಿಯಾ ಮತ್ತು ಮೊಲ್ಡೊವಾದೊಂದಿಗೆ ಗಡಿಗಳನ್ನು ಹೊಂದಿದೆ. ಹಡಗು ನಿರ್ಮಾಣಕ್ಕೆ ಹೆಸರಾಗಿರುವ ಈ ನಗರ 2,87,000 ಜನಸಂಖ್ಯೆಯನ್ನು ಹೊಂದಿದೆ.

ಉಕ್ರೇನಿನ ಈ 5 ನಗರಗಳನ್ನು ವಶಪಡಿಸಿಕೊಳ್ಳುವುದು ರಷ್ಯಾದ ಹವಣಿಕೆಯಾಗಿದೆ.

ಇದನ್ನೂ ಓದಿ:  Russia-Ukraine War: ಮುಗಿಯದ ಯುದ್ಧ; ರಷ್ಯಾ, ಉಕ್ರೇನ್ ನಡುವೆ ಮಾ. 2ಕ್ಕೆ ಎರಡನೇ ಸುತ್ತಿನ ಮಾತುಕತೆ

Published On - 9:06 am, Wed, 2 March 22