Vladimir Putin: ರಷ್ಯಾ ಅಧ್ಯಕ್ಷ ಪುಟಿನ್ಗೆ ಗುಣಪಡಿಸಲಾಗದ ನಿಗೂಢ ಕಾಯಿಲೆ, ಇದು ಉಕ್ರೇನ್‌ನಲ್ಲಿ ನಡೆಯುತ್ತಿರುವ ಭೀಕರತೆಯ ಪರಿಣಾಮ ಎಂದ ಮಾಜಿ ಬ್ರಿಟನ್ ಗುಪ್ತಚರ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತೀವ್ರ ಅಸ್ವಸ್ಥರಾಗಿದ್ದಾರೆ. ಇದು ಉಕ್ರೇನ್‌ನಲ್ಲಿ(Russian Ukraine War) ನಡೆಯುತ್ತಿರುವ ಭೀಕರತೆಯ ಭಾಗ ಎಂದು ಮಾಜಿ ಬ್ರಿಟನ್ ಗುಪ್ತಚರ ಹೇಳಿದ್ದಾರೆ.
ದೆಹಲಿ: ಕಳೆದ ಕೆಲ ದಿನಗಳಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ (Vladimir Putin) ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಪುಟಿನ್ ಗಂಭೀರ ಕಾಯಿಲೆ, ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈಗ ಈ ಬಗ್ಗೆ ಬಿಟನ್ ಮಾಜಿ ಗುಪ್ತಚರ ಕೆಲವು ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತೀವ್ರ ಅಸ್ವಸ್ಥರಾಗಿದ್ದಾರೆ. ಇದು ಉಕ್ರೇನ್‌ನಲ್ಲಿ(Russian Ukraine War) ನಡೆಯುತ್ತಿರುವ ಭೀಕರತೆಯ ಭಾಗ ಎಂದು ಮಾಜಿ ಬ್ರಿಟನ್ ಗುಪ್ತಚರ ಹೇಳಿದ್ದಾರೆ.
“ಪುಟಿನ್ಗೆ ಕಾಡುತ್ತಿರುವ ಅನಾರೋಗ್ಯವು ನಿಖರವಾಗಿ ಏನೆಂದು ಸ್ಪಷ್ಟವಾಗಿಲ್ಲ. ಆದ್ರೆ ಇದು ಗುಣಪಡಿಸಲಾಗದ ಅಥವಾ ಟರ್ಮಿನಲ್ ಯಾವುದಾದರೂ ಆಗಿರಬಹುದು. ಆದರೆ ಖಂಡಿತವಾಗಿಯೂ, ಇದು ಯುದ್ಧದ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ,” ಎಂದರು.
ಈ ಹಿಂದೆ ಡೊನಾಲ್ಡ್ ಟ್ರಂಪ್ ಕುರಿತು ಬರೆದಿದ್ದ ಹಾಗೂ 2016 ರ ಯುಎಸ್ ಚುನಾವಣಾ ಪ್ರಚಾರದಲ್ಲಿ ರಷ್ಯಾದ ಹಸ್ತಕ್ಷೇಪವಿತ್ತು ಎಂದು ಆರೋಪಿಸಿದ್ದ ಕ್ರಿಸ್ಟೋಫರ್ ಸ್ಟೀಲ್, ಖಂಡಿತವಾಗಿಯೂ, ರಷ್ಯಾ ಮತ್ತು ಇತರೆಡೆಗಳ ಮೂಲಗಳಿಂದ ನಾವು ಕೇಳುತ್ತಿರುವ ಪುಟಿನ್ ಅನಾರೋಗ್ಯದ ಸಂಗತಿಗಳು ವಾಸ್ತವವಾಗಿ ನಿಜ. ಪುಟನ್ ಸಾಕಷ್ಟು ತೀರ್ವವಾಗಿ ಖಾಯಿಲೆಗೊಳಗಾಗಿದ್ದಾರೆ ಎಂದು ಹೇಳಿದ್ದಾರೆ.
ದೇಶದ ಇತರೆ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಷ್ಯಾದ ನಾಯಕನೊಂದಿಗೆ ನಿಕಟ ಸಂಬಂಧ ಹೊಂದಿರುವ ಒಲಿಗಾರ್ಚ್ “ಪುಟಿನ್ ರಕ್ತದ ಕ್ಯಾನ್ಸರ್ನಿಂದ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ” ಎಂದು ಹೇಳಿರುವುದು ವರದಿಯಾಗಿದೆ. ಯುಎಸ್ ಮ್ಯಾಗಜೀನ್ ನ್ಯೂ ಲೈನ್ಸ್ ಪಡೆದ ರೆಕಾರ್ಡಿಂಗ್‌ನಲ್ಲಿ, ಹೆಸರಿಸದ ಒಲಿಗಾರ್ಚ್ ಪಾಶ್ಚಿಮಾತ್ಯ ಸಾಹಸೋದ್ಯಮ ಬಂಡವಾಳಗಾರರೊಂದಿಗೆ ಪುಟಿನ್ ಅವರ ಆರೋಗ್ಯದ ಬಗ್ಗೆ ಚರ್ಚಿಸುವುದನ್ನು ಕೇಳಿದೆ.
"The tough guy" #Putin is the only one who shows weakness during today's parade and sits under a blanket and holds his hands! ?#RussiaWarCrimes pic.twitter.com/nm2wI9BT0q
— ??? ???? ?? ??? (@Top_dog_mindset) May 9, 2022
ಉಕ್ರೇನ್ ಯುದ್ಧದ ನಂತರ ರಷ್ಯಾದ ಅಧ್ಯಕ್ಷರ ಅನಾರೋಗ್ಯದ ಸುತ್ತಲಿನ ಊಹಾಪೋಹಗಳು ಹೆಚ್ಚಾಗಿವೆ, ಏಕೆಂದರೆ ಕಳೆದ ವಾರ ವಿಜಯ ದಿನಾಚರಣೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪುಟಿನ್ ನಿಶ್ಶಕ್ತರಾಗಿದ್ದರು. ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿ ಮಿಲಿಟರಿ ಮೆರವಣಿಗೆಯನ್ನು ವೀಕ್ಷಿಸಲು ಎರಡನೇ ಮಹಾಯುದ್ಧದ ಪರಿಣತರು ಮತ್ತು ಹಿರಿಯ ಗಣ್ಯರ ನಡುವೆ ಕುಳಿತಿದ್ದ ಪುಟಿನ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಫೋಟೋಗಳು ಮತ್ತು ವೀಡಿಯೊಗಳಲ್ಲಿ ತನ್ನ ಕಾಲುಗಳ ಮೇಲೆ ದಪ್ಪವಾದ ಹಸಿರು ಹೊದಿಕೆಯನ್ನು ಹಾಕಿಕೊಂಡಿದ್ದರು. ಕಪ್ಪು ಬಾಂಬರ್ ಜಾಕೆಟ್‌ನಲ್ಲಿದ್ದ ಪುಟಿನ್ ಕೆಮ್ಮುತ್ತಿರುವುದನ್ನೂ ಸಹ ಗುರುತಿಸಲಾಗಿದೆ. ಪುಟಿನ್ ಅವರ ಫೋಟೋಗಳು ಅನಾರೋಗ್ಯದ ಊಹಾಪೋಹಕ್ಕೆ ಉತ್ತೇಜನ ನೀಡಿವೆ.
ಇತ್ತೀಚೆಗೆ, ಪುಟಿನ್ ಮತ್ತು ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ನಡುವೆ ನಡೆದ ಸಭೆಯ 12 ನಿಮಿಷದ ವಿಡಿಯೋವೊಂದರಲ್ಲಿ ಪುಟಿನ್ ಟೇಬಲನ್ನು ಬಿಗಿಯಾಗಿ ಹಿಡಿದು ಕೂತಿರುವುದು ಸೆರೆಯಾಗಿದೆ. ಇವುಗಳನ್ನು ನೋಡಿದರೆ ಅವರು ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಒಳಲುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ಸಿಗುತ್ತಿದೆ.
dictators can be brutalthey can be capricious but they can’t be weak
serious problem for putin pic.twitter.com/OGFejK09i9
— ian bremmer (@ianbremmer) April 22, 2022
Published On - 9:00 pm, Sun, 15 May 22