Viral Video: ಸೇತುವೆಯ ಮೇಲಿದ್ದ ಎಸ್‌ಯುವಿ ಕಾರಿನ ಮೇಲೆ ಅಪ್ಪಳಿಸಿದ ವಿಮಾನ; ಪ್ರಯಾಣಿಕರಿಗೆ ಗಾಯ
ಸಣ್ಣ ವಿಮಾನವೊಂದು ಪತನವಾಗಿ ಸೇತುವೆಯ ಮೇಲಿದ್ದ ಎಸ್‌ಯುವಿ ಮೇಲೆ ಅಪ್ಪಳಿಸಿ, ಸ್ಫೋಟಗೊಂಡಿರುವ ಘಟನೆ ಮಿಯಾಮಿ ಬಳಿ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ನವದೆಲಿ: ಮಿಯಾಮಿ ಬಳಿಯ ಸೇತುವೆಯೊಂದರ ಮೇಲೆ ಮೇ 14ರಂದು ಅಪಘಾತಕ್ಕೀಡಾದ ಸಣ್ಣ ವಿಮಾನವು ಎಸ್‌ಯುವಿ (SUV) ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೆಂಕಿ (Fire Accident) ಹೊತ್ತಿಕೊಂಡಿದೆ. ಈ ಘಟನೆಯ ವಿಡಿಯೋ ಭಾರೀ ವೈರಲ್ (Viral Video) ಆಗಿದೆ. ಎಸ್‌ಯುವಿ ವಾಹನದ ಮೇಲೆ ಅಪ್ಪಳಿಸಿದ ವಿಮಾನದಲ್ಲಿ 3 ಮಂದಿ ಇದ್ದರು ಹಾಗೇ ಎಸ್‌ಯುವಿ ಕಾರಿನಲ್ಲಿ ಕೂಡ ಮೂವರು ಪ್ರಯಾಣಿಕರಿದ್ದರು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವರದಿ ಮಾಡಿದೆ. ಸಿಂಗಲ್-ಎಂಜಿನ್ ಸೆಸ್ನಾ 172 ಹಾಲಿವುಡ್-ಫೋರ್ಟ್ ಲಾಡರ್‌ಡೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೀ ವೆಸ್ಟ್‌ಗೆ ಹೊರಟಿತ್ತು. ತಕ್ಷಣ ಆ ವಿಮಾನ ಪತನವಾಯಿತು ಎಂದು FAA ಹೇಳಿಕೆಯಲ್ಲಿ ತಿಳಿಸಿದೆ.
ಮಿಯಾಮಿ-ಡೇಡ್ ಫೈರ್ ರೆಸ್ಕ್ಯೂ ಪ್ರಕಾರ, ವಿಮಾನದಲ್ಲಿದ್ದ ಇಬ್ಬರನ್ನು ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು ಮತ್ತು ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 6ನೇ ರೋಗಿಯ ಬಗ್ಗೆ ಮಿಯಾಮಿ-ಡೇಡ್ ಪೊಲೀಸರು ಮಾಹಿತಿ ನೀಡಲಿದ್ದಾರೆ ಎಂದು ಇಲಾಖೆ ಹೇಳಿದೆ. ಸಾಮಾಜಿಕ ಮಾಧ್ಯಮದಲ್ಲಿ ಡ್ರೋನ್ ವಿಡಿಯೋವು ಹಾಲೋವರ್ ಇನ್ಲೆಟ್ ಸೇತುವೆಯ ಮೇಲೆ ಎಸ್‌ಯುವಿ ವಾಹನದ ಮೇಲೆ ವಿಮಾನವು ಕುಸಿದಿದೆ.
Awful private plane crash in #mia @nbc6 pic.twitter.com/LjJg7bgUtM
— Alex H (@lexSayzzz) May 14, 2022
ವಿಮಾನವು ಸ್ಫೋಟವಾಗಿ ಜ್ವಾಲೆಯಲ್ಲಿ ಮುಳುಗುವ ಮೊದಲು ಒಬ್ಬ ವ್ಯಕ್ತಿ ವಿಮಾನದಿಂದ ಸ್ಕ್ರಾಂಬ್ಲಿಂಗ್ ಮಾಡುವುದನ್ನು ಮತ್ತು ಇತರರು ರಸ್ತೆಯ ಬದಿಗೆ ಓಡಿಬಂದು ಸಹಾಯ ಮಾಡುವುದನ್ನು ಕಾಣಬಹುದು.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ