Vladimir Putin: ಮತ್ತೊಮ್ಮೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹತ್ಯೆಗೆ ಮತ್ತೊಮ್ಮೆ ಯತ್ನ ನಡೆದಿರುವುದಾಗಿ ವರದಿಗಳಾಗಿವೆ. ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದ್ದು, ಭದ್ರತಾ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.
ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಹತ್ಯೆ ಪ್ರಯತ್ನ ನಡೆಸಲಾಗಿದೆ ಎಂದು ವರದಿಯಾಗಿವೆ. ಬುಧವಾರ ಬಿಡುಗಡೆಯಾದ ವರದಿಗಳ ಪ್ರಕಾರ, ವ್ಲಾಡಿಮಿರ್ ಪುಟಿನ್ ಅವರು ಪ್ರಯಾಣಿಸುತ್ತಿದ್ದ ಲಿಮೋಸಿನ್ ಕಾರಿನ ಮುಂಭಾಗದ ಚಕ್ರವು ಜೋರಾದ ಶಬ್ದದೊಂದಿಗೆ ಹೊಡೆದಿದೆ. ಆದಾಗ್ಯೂ, ಅಧ್ಯಕ್ಷರ ಕಾರನ್ನು ತ್ವರಿತವಾಗಿ ಸುರಕ್ಷಿತವಾಗಿ ಓಡಿಸಲಾಯಿತು. ಅದೃಷ್ಟವಶಾತ್ ಅಧ್ಯಕ್ಷರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವರದಿಗಳ ಪ್ರಕಾರ, ವ್ಲಾಡಿಮಿರ್ ಪುಟಿನ್ ತನ್ನ ಅಧಿಕೃತ ನಿವಾಸಕ್ಕೆ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪಘಾತದ ದಿನಾಂಕ ತಿಳಿದಿಲ್ಲ. ಆದರೆ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ.
ಘಟನೆಯ ನಂತರ ಅಧ್ಯಕ್ಷರ ಅಂಗರಕ್ಷಕ ಮುಖ್ಯಸ್ಥ ಮತ್ತು ಇತರ ಹಲವಾರು ಜನರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಪುಟಿನ್ ಅವರ ಚಲನವಲನದ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾತ್ರ ತಿಳಿದಿದ್ದರಿಂದ ಅಮಾನತುಕೊಳಿಸಿದ ಸಿಬ್ಬಂದಿಗಳನ್ನು ಬಂಧನದಲ್ಲಿರಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.
ಈ ವರ್ಷದ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಪುಟಿನ್ ಅವರ ಜೀವಕ್ಕೆ ಅಪಾಯವಿದೆ ಎಂಬ ವದಂತಿಗಳು ಹರಡುತ್ತಿವೆ. 2017 ರಲ್ಲಿ ಕನಿಷ್ಠ ಐದು ಹತ್ಯೆಯ ಪ್ರಯತ್ನಗಳಿಂದ ಬದುಕುಳಿದರು ಎಂದು ಅವರು ಸಾರ್ವಜನಿಕವಾಗಿ ಬಹಿರಂಗಪಡಿಸಿದರು.
ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Fri, 16 September 22