Hajj 2021: ಪವಿತ್ರ ಹಜ್ ಯಾತ್ರೆಗೆ ವಿದೇಶಿಯರಿಗಿಲ್ಲ ಅವಕಾಶ, ಸ್ಥಳೀಯ 60 ಸಾವಿರ ಯಾತ್ರಾರ್ಥಿಗಳಿಗಷ್ಟೇ ದರ್ಶನ ಭಾಗ್ಯ

| Updated By: guruganesh bhat

Updated on: Jun 12, 2021 | 9:21 PM

Saudi Arabia: ಸೌದಿ ಅರೇಬಿಯಾವು ಜನರ ಜೀವ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ. ಹೀಗಾಗಿ ವಿದೇಶಿಯವರಿಗೆ ಅವಕಾಶ ನೀಡದೇ, ದೇಶದ 60 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. 

Hajj 2021: ಪವಿತ್ರ ಹಜ್ ಯಾತ್ರೆಗೆ ವಿದೇಶಿಯರಿಗಿಲ್ಲ ಅವಕಾಶ, ಸ್ಥಳೀಯ 60 ಸಾವಿರ ಯಾತ್ರಾರ್ಥಿಗಳಿಗಷ್ಟೇ ದರ್ಶನ ಭಾಗ್ಯ
ಮೆಕ್ಕಾ
Follow us on

ರಿಯಾದ್: ಈ ವರ್ಷ ಕೊವಿಡ್ ಸೋಂಕಿನ ಕಾರಣದಿಂದ ಪವಿತ್ರ ಹಜ್ ಯಾತ್ರೆಗೆ ವಿದೇಶಿ ಯಾತ್ರಾರ್ಥಿಗಳಿಗೆ ಅವಕಾಶ ನೀಡದಿರುವುದಾಗಿ ಸೌದಿ ಅರೇಬಿಯಾ ತಿಳಿಸಿದೆ. ಈ ಕುರಿತು ಇಂದು (ಜೂನ್ 12) ಅಧಿಕೃತ ಪ್ರಕಟಣೆ ಹೊರಡಿಸಿರುವ ಸೌದಿ ಅರೇಬಿಯಾದ ಆರೋಗ್ಯ ಮತ್ತು ಹಜ್ ಸಚಿವಾಲಯ, ಈ ಬಾರಿ ಒಟ್ಟು 60 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಪವಿತ್ರ ಹಜ್ ಯಾತ್ರೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದೆ. ಅಲ್ಲದೇ, ಸೌದಿ ಅರೇಬಿಯಾ ಸರ್ಕಾರ ನಿಗಡಿಪಡಿಸಿರುವ ನಿಯಮಗಳ ಪ್ರಕಾರ ಈಗಾಗಲೇ ಕೊವಿಡ್ ಲಸಿಕೆ ಪಡೆದುಕೊಂಡವರು, ಕನಿಷ್ಠ 14 ದಿನಗಳ ಹಿಂದಾದರೂ ಲಸಿಕೆ ಪಡೆದವರು ಮತ್ತು ಕೊವಿಡ್​ನಿಂದ ಗುಣಮುಖರಾದ ನಂತರ ಲಸಿಕೆ ಪಡೆದವರಿಗೆ ಮಾತ್ರ ಹಜ್ ದರ್ಶನ ಒದಗಿಸಲಾಗುವುದು ಎಂದು ವರದಿಯಾಗಿದೆ.

ಈ ವರ್ಷದ ಜುಲೈ ತಿಂಗಳ ಮಧ್ಯಭಾಗದಲ್ಲಿ ಆರಂಭವಾಗುವ ಮುಸ್ಲಿಂ ಸಮುದಾಯದ ಪವಿತ್ರ ಕ್ಷೇತ್ರದ ದರ್ಶನಕ್ಕೆ 18ರಿಂದ 65 ವರ್ಷದ ಒಳಗಿನವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕಳೆದ ವರ್ಷವೂ ಕೊವಿಡ್​ ಪಿಡುಗಿನ ಕಾರಣದಿಂದ ಅತ್ಯಲ್ಪ ಯಾತ್ರಾರ್ಥಿಗಳಿಗಷ್ಟೇ ಹಜ್ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಕುರಿತು ಹೊರಡಿಸಿರುವ ಪ್ರಕಟಣೆಯಲ್ಲಿ, ಸೌದಿ ಅರೇಬಿಯಾವು ಜನರ ಜೀವ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ. ಹೀಗಾಗಿ ವಿದೇಶಿಯವರಿಗೆ ಅವಕಾಶ ನೀಡದೇ, ದೇಶದ 60 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ:  ಕೊವಿಡ್​ ಅಸ್ಪತ್ರೆಗಳ ನೆಲದ ಮೇಲೆ ಸಾರ್ಸ್-ಕೊವ್-2 ವೈರಸ್ ಅಲ್ಲದಿದ್ದರೂ ಅದರ ಆನುವಂಶಿಕ ಸ್ವರೂಪ ಇರುತ್ತದೆ: ವರದಿ

ಮೈಸೂರಿನಲ್ಲಿ ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ಯಶಸ್ವಿಯಾಗುವ ಭರವಸೆ

(Saudi arabia bans foreigners to Hajj for Covid Pandemic)

Published On - 9:18 pm, Sat, 12 June 21