ಖಲಿಸ್ತಾನ್ ಬೆಂಬಲಿಗರನ್ನು ದೂರವಿಡಲು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಹೊರಗೆ ಬಿಗಿ ಭದ್ರತೆ

ಲಂಡನ್‌ನಲ್ಲಿರುವ ಭಾರತೀಯ ಮಿಷನ್ ಹೊರಗೆ ಜಮಾಯಿಸಿದ ಖಲಿಸ್ತಾನ್ ಬೆಂಬಲಿಗರನ್ನು ಬುಧವಾರ ಸಂಜೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ಪೊಲೀಸ್ ಬ್ಯಾರಿಕೇಡ್‌ಗಳ ಹಿಂದೆ ಸರಿಸಲಾಗಿತ್ತು.

ಖಲಿಸ್ತಾನ್ ಬೆಂಬಲಿಗರನ್ನು ದೂರವಿಡಲು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಹೊರಗೆ ಬಿಗಿ ಭದ್ರತೆ
ಯುಕೆಯಲ್ಲಿರುವ ಭಾರತೀಯ ಹೈಕಮಿಷನ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 22, 2023 | 9:04 PM

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ (Indian High Commission )ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕೆಲವು ಖಲಿಸ್ತಾನ್ (Khalistan) ಬೆಂಬಲಿಗರು ಭಾರತೀಯ ಮಿಷನ್‌ನಲ್ಲಿ ರಾಷ್ಟ್ರೀಯ ಧ್ವಜವನ್ನು ಕೆಳಗಿಳಿದ ಕೆಲವು ದಿನಗಳ ನಂತರ ಭಾರತ ಸರ್ಕಾರ ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದೆ. ಬ್ರಿಟಿಷ್ ಹೈ ಕಮಿಷನ್ ಮತ್ತು ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರ ನವದೆಹಲಿಯ ನಿವಾಸದಿಂದ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿದರ ಬೆನ್ನಲ್ಲೇ ಲಂಡನ್‌ನಲ್ಲಿರುವ ಹೈಕಮಿಷನ್‌ನಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಂಡನ್‌ನಲ್ಲಿರುವ ಭಾರತೀಯ ಮಿಷನ್ ಹೊರಗೆ ಜಮಾಯಿಸಿದ ಖಲಿಸ್ತಾನ್ ಬೆಂಬಲಿಗರನ್ನು ಬುಧವಾರ ಸಂಜೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ಪೊಲೀಸ್ ಬ್ಯಾರಿಕೇಡ್‌ಗಳ ಹಿಂದೆ ಸರಿಸಲಾಗಿತ್ತು.

ಬ್ರಿಟಿಷ್ ಸಿಖ್ ಗುಂಪುಗಳು ಯೋಜಿತ ಪ್ರತಿಭಟನೆಗೆ ಕರೆ ನೀಡಿದ್ದರಿಂದ ಈ ವಾರದ ಆರಂಭದಲ್ಲಿ ಸಂಭವಿಸಿದ ವಿಧ್ವಂಸಕ ಕೃತ್ಯಗಳ ಪುನರಾವರ್ತನೆಯನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳು ಹಲವಾರು ವ್ಯಾನ್‌ಗಳಲ್ಲಿ ಇಂಡಿಯಾ ಹೌಸ್ ಕಟ್ಟಡದ ಹೊರಗೆ ನಿಂತಿದ್ದರು. ಖಲಿಸ್ತಾನ್ ನಾಯಕ ಅಮೃತಪಾಲ್ ಸಿಂಗ್‌ಗಾಗಿ ರಾಜ್ಯವ್ಯಾಪಿ ಹುಡುಕಾಟ ನಡೆಸುತ್ತಿರುವ ಪಂಜಾಬ್‌ನಲ್ಲಿ ಭಾರತೀಯ ಪೊಲೀಸರ ತಾರತಮ್ಯದ ಕ್ರಮಗಳನ್ನು ಪ್ರತಿಭಟಿಸುವುದಾಗಿ ಪ್ರತಿಭಟನಾಕಾರರು ಹೇಳಿಕೊಂಡಿದ್ದಾರೆ.

ಪಾದಚಾರಿ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು ಕುದುರೆಗಳ ಮೇಲೆ ಪೋಲಿಸರು ಬೀದಿಯಲ್ಲಿ ಗಸ್ತು ತಿರುಗುತ್ತಿದ್ದರು. ಭಾನುವಾರ ನಡೆದ ಘಟನೆಯ ನಂತರ ಬೃಹತ್ ತ್ರಿವರ್ಣ ಧ್ವಜವು ಕಿಟಕಿಗಳ ನಡುವೆ ನೇತಾಡುತ್ತಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ. ದೆಹಲಿಯ ಶಾಂತಿಪಥ್ ನಲ್ಲಿರುವ ಯುಕೆ ಮಿಷನ್‌ ಮತ್ತು ರಾಜಾಜಿ ಮಾರ್ಗ್‌ನಲ್ಲಿರುವ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರ ನಿವಾಸದಲ್ಲಿ ಹೊರಗೆ ಹಾಕಲಾದ ಬೇಲಿಗಳನ್ನು ತೆಗೆದುಹಾಕಿದ ಕೆಲವೇ ಗಂಟೆಗಳ ನಂತರ ಹೆಚ್ಚಿನ ಭದ್ರತೆಯನ್ನು ಹೆಚ್ಚಿಸಲಾಯಿತು.

ಭಾರತ ಸರ್ಕಾರವು ತನ್ನ ರಾಜತಾಂತ್ರಿಕ ಕಾರ್ಯಾಚರಣೆಯಲ್ಲಿ ಭದ್ರತಾ ಕ್ರಮಗಳ ಕೊರತೆಯ ಬಗ್ಗೆ ಬಲವಾದ ಪ್ರತಿಭಟನೆ ದಾಖಲಿಸಿದೆ. ಇದರ ಪರಿಣಾಮವಾಗಿ ಪ್ರತಿಭಟನಾಕಾರರು ಖಾಲಿಸ್ತಾನ್ ಧ್ವಜಗಳನ್ನು ಬೀಸಿದ್ದು, ಕಿಟಕಿಗಳನ್ನು ಒಡೆದು ತ್ರಿವರ್ಣ ಧ್ವಜವನ್ನು ಎಳೆಯಲು ಪ್ರಯತ್ನಿಸಿದರು. ಏತನ್ಮಧ್ಯೆ, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಪಂಜಾಬ್‌ನಲ್ಲಿನ ಘಟನೆಗಳ ಬಗ್ಗೆ ವಿಶೇಷವಾಗಿ ಪ್ರತ್ಯೇಕತಾವಾದಿ ಗುಂಪು ‘ವಾರಿಸ್ ಪಂಜಾಬ್ ದೇ’ ವಿರುದ್ಧದ ಜಾರಿ ಕ್ರಮಗಳ ಬಗ್ಗೆ ಹರಡಿರುವ ತಪ್ಪು ಮಾಹಿತಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ. ಯುಕೆಯಲ್ಲಿರುವ ನಮ್ಮ ಎಲ್ಲಾ ಸ್ನೇಹಿತರಿಗೆ, ವಿಶೇಷವಾಗಿ ಪಂಜಾಬ್‌ನಲ್ಲಿರುವ ಸಂಬಂಧಿಕರು,ಸಹೋದರ ಸಹೋದರಿಯರಿಗೆ, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಸುಳ್ಳುಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ನಾನು ಭರವಸೆ ನೀಡುತ್ತೇನೆ ಎಂದು, ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Pakistan Earthquake: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ 9 ಸಾವು, 150ಕ್ಕೂ ಹೆಚ್ಚು ಜನರಿಗೆ ಗಾಯ

ನಿಮ್ಮ ಪೂರ್ವಜರ ತಾಯ್ನಾಡಿನ ಪರಿಸ್ಥಿತಿ ವರದಿಯಾಗುತ್ತಿಲ್ಲ. ರಾಜ್ಯದ ಚುನಾಯಿತ ಮುಖ್ಯಮಂತ್ರಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ದೂರದರ್ಶನದಲ್ಲಿ ಸಂದರ್ಶನಗಳು ಸೇರಿದಂತೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ, ದಯವಿಟ್ಟು ಇವುಗಳನ್ನು ವೀಕ್ಷಿಸಿ. ಬೆರಳೆಣಿಕೆಯಷ್ಟು ಜನರು ಕಾಲ್ಪನಿಕ ಮತ್ತು ತಪ್ಪು ಮಾಹಿತಿ ಹರಡಿರುವುದನ್ನು ನಂಬಬೇಡಿ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ