Watch: ಲಂಡನ್‌ನಲ್ಲಿ ಖಲಿಸ್ತಾನಿ ಹಿಂಸಾಚಾರದ ವಿರುದ್ಧ ಭಾರತೀಯರ ಪ್ರತಿಭಟನೆ

ಹೇಳಿಕೆಗಳನ್ನು ಬಿಡುಗಡೆ ಮಾಡುವ ಬದಲು ಸರ್ಕಾರ ಮತ್ತು ಮೇಯರ್ ಕ್ರಮವನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ

Watch: ಲಂಡನ್‌ನಲ್ಲಿ ಖಲಿಸ್ತಾನಿ ಹಿಂಸಾಚಾರದ ವಿರುದ್ಧ ಭಾರತೀಯರ ಪ್ರತಿಭಟನೆ
ಲಂಡನ್ ನಲ್ಲಿ ಪ್ರತಿಭಟನೆ
Follow us
|

Updated on: Mar 21, 2023 | 9:51 PM

ಲಂಡನ್‌ನಲ್ಲಿರುವ (London) ಭಾರತೀಯ ಹೈಕಮಿಷನ್‌ನ (Indian High Commission) ಮೇಲೆ ಹಾರುತ್ತಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿರುವುದರ ವಿರುದ್ಧ ಪ್ರಬಲ ಪ್ರತಿಭಟನೆಯನ್ನು ದಾಖಲಿಸಿದ ಭಾರತೀಯ ವಲಸಿಗರು ಈ ಬಗ್ಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕಚೇರಿಯ ಹೊರಗೆ ಜಮಾಯಿಸಿದ್ದಾರೆ. ಭಾರತೀಯ ಧ್ವಜವನ್ನು ಅಗೌರವಿಸಿದ ಖಲಿಸ್ತಾನಿ ಬೆಂಬಲಿಗರ (Khalistani violence) ವಿರುದ್ಧ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಬ್ರಿಟಿಷ್ ಸರ್ಕಾರ ಮತ್ತು ಲಂಡನ್ ಮೇಯರ್ ಸಾದಿಕ್ ಖಾನ್ ಅವರಲ್ಲಿ ಭಾರತೀಯ ವಲಸಿಗರು ಒತ್ತಾಯಿಸಿದ್ದಾರೆ.ಖಲಿಸ್ತಾನಿ ಪರ ಚಟುವಟಿಕೆ ವಿರುದ್ಧ ಬ್ರಿಟನ್‌ನಲ್ಲಿರುವ ಎನ್‌ಆರ್‌ಐಗಳಿಂದ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗುತ್ತಿರುವುದನ್ನು ವಿರೋಧಿಸಿ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾರತೀಯ ಧ್ವಜಗಳನ್ನು ಬೀಸುತ್ತಿರುವುದು ಕಂಡುಬಂದಿದೆ.

ಹೇಳಿಕೆಗಳನ್ನು ಬಿಡುಗಡೆ ಮಾಡುವ ಬದಲು ಸರ್ಕಾರ ಮತ್ತು ಮೇಯರ್ ಕ್ರಮವನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ. ಮತ್ತೊಬ್ಬ ಪ್ರತಿಭಟನಾಕಾರರು ‘ಅವಮಾನಕರ’ ಕೃತ್ಯದ ಬಗ್ಗೆ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದು ಧ್ವಜ ಕೆಳಗಿಳಿಸಿದರ ವಿರುದ್ಧ ಸಮುದಾಯವು ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದ್ದಾರೆ.

ಬ್ರಿಟಿಷ್ ಪೊಲೀಸ್ ಅಧಿಕಾರಿಯೊಬ್ಬರು ‘ಸ್ಲಮ್‌ಡಾಗ್ ಮಿಲಿಯನೇರ್’ ಚಿತ್ರದ ‘ಜೈ ಹೋ’ ಹಾಡಿಗೆ ವಲಸೆಗಾರರ ಜೊತೆ ಹೆಜ್ಜೆಹಾಕಿದ್ದು ಕಂಡುಬಂದಿದೆ.

ಖಲಿಸ್ತಾನಿ ಚಳವಳಿಯನ್ನು ಖಂಡಿಸಿದ ಪ್ರತಿಭಟನಾಕಾರರ ವಿಡಿಯೊಗಳನ್ನು ಪಿಟಿಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ಇದು ಎಂದಿಗೂ ಗೆಲ್ಲುವುದಿಲ್ಲ ಏಕೆಂದರೆ ಇದು ಭಯೋತ್ಪಾದನೆಯನ್ನು ಆಧರಿಸಿದ ಆಂದೋಲನವಾಗಿದೆ” ಎಂದು ಫ್ರೆಂಡ್ಸ್ ಆಫ್ ಇಂಡಿಯಾ ಸೊಸೈಟಿ ಇಂಟರ್ನ್ಯಾಷನಲ್ (FISI) ನ ಜಯು ಶಾ ಹೇಳಿದ್ದಾರೆ.

ಇದನ್ನೂ ಓದಿ: ಇಂಗ್ಲಿಷ್ ಪರೀಕ್ಷಾ ಹಗರಣ: ವೀಸಾ ಹಿಂಪಡೆದುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುಕೆ ಪ್ರಧಾನಿ ರಿಷಿ ಸುನಕ್‌ಗೆ ಭಾರತೀಯ ವಿದ್ಯಾರ್ಥಿಗಳ ಮನವಿ

ಸಿಖ್ಖರಿಗಾಗಿ ಉದ್ದೇಶಿತ ಸ್ವತಂತ್ರ ರಾಷ್ಟ್ರವಾದ ಖಲಿಸ್ತಾನದ ರಚನೆಗಾಗಿ ಹೋರಾಡುತ್ತಿರುವ ತೀವ್ರಗಾಮಿ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ತ್ರಿವರ್ಣ ಧ್ವಜವನ್ನು ಕೆಳಗಿಳಿಸಲಾಗಿದೆ. ಸೋಮವಾರ, ಸಿಖ್ ಸಮುದಾಯದ ಸದಸ್ಯರು ದೆಹಲಿಯ ಯುಕೆ ಮಿಷನ್ ಹೊರಗೆ ಪ್ರತಿಭಟನೆ ನಡೆಸುವ ಮೂಲಕ ಭಾರತದೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ನವದೆಹಲಿಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರತಿಭಟನೆಯನ್ನು ಸಲ್ಲಿಸಲು ಅತ್ಯಂತ ಹಿರಿಯ ಬ್ರಿಟಿಷ್ ರಾಜತಾಂತ್ರಿಕರನ್ನು ಕರೆಸಿದೆ.

ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಮಂಗಳವಾರ ಟ್ವೀಟ್‌ನಲ್ಲಿ ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲಿನ ದಾಳಿಯನ್ನು ‘ಅವಮಾನಕರ’ ಎಂದು ಟೀಕಿಸಿದ್ದಾರೆ.ಭಾರತದ ಹೈಕಮಿಷನ್‌ನ ಜನರು ಮತ್ತು ಆವರಣದ ವಿರುದ್ಧ ಇಂದು ಅವಮಾನಕರ ಕೃತ್ಯಗಳನ್ನು ನಾನು ಖಂಡಿಸುತ್ತೇನೆ. ಇದು ಒಪ್ಪುವಂಥದ್ದಲ್ಲ ಎಂದಿದ್ದಾರೆ.

ತಾಜಾ ಸುದ್ದಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್​ ಅಶೋಕ್
ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್​ ಅಶೋಕ್
ಮಾಜಿ ಸಿಎಂಗಳಾದ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯವರದ್ದು ಒಂದೇ ಮಾತು!
ಮಾಜಿ ಸಿಎಂಗಳಾದ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯವರದ್ದು ಒಂದೇ ಮಾತು!
ದರ್ಶನ್​ ನೋಡಲು ಬಂದ ಸಾಧು ಕೋಕಿಲ ಈ ರೀತಿ ರಿಯಾಕ್ಷನ್​ ಕೊಟ್ಟಿದ್ದು ಯಾಕೆ?
ದರ್ಶನ್​ ನೋಡಲು ಬಂದ ಸಾಧು ಕೋಕಿಲ ಈ ರೀತಿ ರಿಯಾಕ್ಷನ್​ ಕೊಟ್ಟಿದ್ದು ಯಾಕೆ?
ಶಿವಕುಮಾರ್ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸ: ಆಶ್ವಥ್ ನಾರಾಯಣ
ಶಿವಕುಮಾರ್ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸ: ಆಶ್ವಥ್ ನಾರಾಯಣ
ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ;ಸಿಎಂ
ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ;ಸಿಎಂ
ಕನ್ನಡಿಗರಿಗೆ ಮೋಸ ಮಾಡಿದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಲಿ: ವಾಟಾಳ್
ಕನ್ನಡಿಗರಿಗೆ ಮೋಸ ಮಾಡಿದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಲಿ: ವಾಟಾಳ್
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ
ನಾನು ಓಡಿ ಹೋಗಲ್ಲ, ಹಾಸನದ ರಾಜಕಾರಣ ಎಂದಿನಂತೆ ನಡೆಯಲಿದೆ: ಸೂರಜ್ ರೇವಣ್ಣ
ನಾನು ಓಡಿ ಹೋಗಲ್ಲ, ಹಾಸನದ ರಾಜಕಾರಣ ಎಂದಿನಂತೆ ನಡೆಯಲಿದೆ: ಸೂರಜ್ ರೇವಣ್ಣ