ಈಜುತ್ತ ಎಂಜಾಯ್ ಮಾಡುತ್ತಿದ್ದ 12 ವರ್ಷದ ಬಾಲಕಿಯನ್ನು ಜೀವಂತವಾಗಿ ನುಂಗಿದ ಮೊಸಳೆ

|

Updated on: Jul 10, 2024 | 9:55 PM

ಆಸ್ಟ್ರೇಲಿಯಾದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ತನ್ನ ಕುಟುಂಬದೊಂದಿಗೆ ಈಜುತ್ತಿದ್ದ 12 ವರ್ಷದ ಬಾಲಕಿಯನ್ನು ಮೊಸಳೆ ಜೀವಂತವಾಗಿ ತಿಂದಿದೆ. ಉತ್ತರ ಆಸ್ಟ್ರೇಲಿಯಾದಲ್ಲಿ ಕಳೆದ ವಾರ ಈ ದುರಂತ ಘಟನೆ ನಡೆದಿದೆ. ಈ ದಾಳಿಯು ಉತ್ತರ ಪ್ರಾಂತ್ಯದಲ್ಲಿ ಮೊಸಳೆಗಳ ಸಂಖ್ಯೆಯನ್ನು ನಿಯಂತ್ರಿಸಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬೇಕೇ? ಬೇಡವೇ? ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಈಜುತ್ತ ಎಂಜಾಯ್ ಮಾಡುತ್ತಿದ್ದ 12 ವರ್ಷದ ಬಾಲಕಿಯನ್ನು ಜೀವಂತವಾಗಿ ನುಂಗಿದ ಮೊಸಳೆ
ಮೊಸಳೆ
Follow us on

ತನ್ನ ಕುಟುಂಬದೊಂದಿಗೆ ಈಜುತ್ತಿದ್ದಾಗ 12 ವರ್ಷದ ಬಾಲಕಿಯನ್ನು ಮೊಸಳೆಯೊಂದು ಜೀವಂತವಾಗಿ ನುಂಗಿ ಕೊಂದಿರುವ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಬಳಿಕ ಜನರು ಆ 14 ಅಡಿ ಉದ್ದದ ಬೃಹತ್ ಗಾತ್ರದ ಮೊಸಳೆಯನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2018ರ ನಂತರ ಈ ಹುಡುಗಿಯ ಸಾವು ಉತ್ತರ ಆಸ್ಟ್ರೇಲಿಯಾ ಪ್ರಾಂತ್ಯದಲ್ಲಿ ನಡೆದ ಮೊದಲ ಮಾರಣಾಂತಿಕ ಮೊಸಳೆ ದಾಳಿಯಾಗಿದೆ.

2018ರಲ್ಲಿ ಕೂಡ ಸ್ಥಳೀಯ ಮಹಿಳೆಯೊಬ್ಬರು ನದಿಯಲ್ಲಿ ಮಸ್ಸೆಲ್ಸ್ ಸಂಗ್ರಹಿಸುವಾಗ ಮೊಸಳೆಯಿಂದ ಕೊಲ್ಲಲ್ಪಟ್ಟಿದ್ದರು. ಈ ದಾಳಿಯು ಉತ್ತರ ಪ್ರಾಂತ್ಯದಲ್ಲಿ ಮೊಸಳೆಗಳ ಸಂಖ್ಯೆಯನ್ನು ನಿಗ್ರಹಿಸಲು ಕ್ರಮ ತೆಗೆದುಕೊಳ್ಳಬೇಕೇ? ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಉತ್ತರ ಆಸ್ಟ್ರೇಲಿಯಾದ ಹೊರವಲಯದ ಸ್ಥಳೀಯ ಸಮುದಾಯವಾದ ಪಲುಂಪ ಬಳಿಯ ಮ್ಯಾಂಗೋ ಕ್ರೀಕ್‌ನಲ್ಲಿ ಕಳೆದ ವಾರ ಬಾಲಕಿಯ ಮೇಲೆ ದಾಳಿ ನಡೆದಾಗಿನಿಂದ ರೇಂಜರ್‌ಗಳು ಮೊಸಳೆಯನ್ನು ಬಲೆಗೆ ಬೀಳಿಸಲು ಅಥವಾ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಬುಲ್ಡೋಜರ್​ನಲ್ಲಿ ಮಂಟಪಕ್ಕೆ ಮದುಮಗ ಎಂಟ್ರಿ; ಯೋಗಿ ಅಭಿಮಾನಿಯ ವಿಡಿಯೋ ವೈರಲ್

ಅನೇಕ ಸ್ಥಳೀಯ ಆಸ್ಟ್ರೇಲಿಯನ್ನರು ಉಪ್ಪುನೀರಿನ ಮೊಸಳೆಗಳನ್ನು ಟೋಟೆಮ್ ಎಂದು ಪರಿಗಣಿಸಲಾಗುತ್ತದೆ. ಇದೇ ಬಾಲಕಿಯನ್ನು ಕೊಂದ ಪ್ರಾಣಿ ಎಂದು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:54 pm, Wed, 10 July 24