Cyclone Ida | ವಾಷಿಂಗ್ಟನ್: ಅಮೆರಿಕದಲ್ಲಿ ಭಾರೀ ಚಂಡಮಾರುತ ಅಪ್ಪಳಿಸಿದ್ದು, ಇದಕ್ಕೆ ಇಡಾ (Hurricane Ida) ಎಂದು ಹೆಸರಿಡಲಾಗಿದೆ. ಚಂಡಮಾರುತ ಅಬ್ಬರದ ಜೊತೆಗೆ ಭೂಕುಸಿತವೂ ಉಂಟಾಗುತ್ತಿದೆ. ಭಾನುವಾರ ಅಪ್ಪಳಿಸಿರುವ ಇಡಾ ಚಂಡಮಾರುತದ ಪರಿಣಾಮದಿಂದ ಮಿಸಿಸಿಪ್ಪಿ ನದಿ (Mississippi River) ಹಿಮ್ಮುಖವಾಗಿ ಹರಿಯುತ್ತಿದೆ. ಈ ಬಾರಿ ಎದ್ದಿರುವ ಇಡಾ ಚಂಡಮಾರುತ ಭಾರೀ ಅಪಾಯದಿಂದ ಕೂಡಿದ್ದು, ಮಿಸಿಸಿಪ್ಪಿ ನದಿ ದಕ್ಷಿಣದಿಂದ ಉತ್ತರ ದಿಕ್ಕಿನತ್ತ ಹರಿಯಲಾರಂಭಿಸಿದೆ.
ಮಿಸಿಸಿಪ್ಪಿ ನದಿ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸಮುದ್ರದಲ್ಲಿ ಭೀಕರ ಚಂಡಮಾರುತ ಎದ್ದಿರುವುದರಿಂದ ನದಿ ಹಿಮ್ಮುಖವಾಗಿ ಹರಿಯತೊಡಗಿದೆ. ಅಮೆರಿಕದ ನ್ಯೂ ಒರ್ಲಿಯನ್ಸ್ ಕರಾವಳಿ ತೀರದಲ್ಲಿ ಎದ್ದಿರುವ ಈ ಚಂಡಮಾರುತದಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಅನೇಕ ಮನೆಗಳು ನಾಶವಾಗಿವೆ. ಈ ಭಾಗದಲ್ಲಿ ಗಂಟೆಗೆ 240 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.
Mississippi River flowing in reverse as Hurricane Ida forces vast volumes of sea water ashore!#HurricaneIda #Ida pic.twitter.com/qyzemVAofz
— Global Report (@AmerikaDC) August 29, 2021
ನ್ಯೂ ಒರ್ಲಿಯನ್ಸ್ ಭಾಗದಲ್ಲಿ ಉಂಟಾಗಿರುವ ಇಡಾ ಚಂಡಮಾರುತದಿಂದ ಲೂಸಿಯಾನದ ರಾಜಧಾನಿ ಬ್ರಾಟನ್ ರೂಜ್ ಸುತ್ತಮುತ್ತ ಜನಜೀವನ ಅಸ್ತವ್ಯಸ್ತವಾಗಿದೆ. ಈ ಭಾಗದಲ್ಲಿ ಮನೆ ಮೇಲೆ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಇನ್ನೊಂದು ಸಾವಿನ ಪ್ರಕರಣ ಕೂಡ ಇದೇ ಭಾಗದಲ್ಲಿ ದಾಖಲಾಗಿದೆ. ಇಡಾ ಚಂಡಮಾರುತದ ಅಬ್ಬರ ಇನ್ನೂ ಮೂರ್ನಾಲ್ಕು ದಿನ ಇರುವ ಸಾಧ್ಯತೆಯಿದೆ.
Goodmorning omg the Mississippi river is flowing BACKWARDS.
My son lives in Algiers Point, where it is at its deepest — 20 feet!!
And. it. is. flowing. backwards.#lawx #mswx #ida pic.twitter.com/u9UgnZk03I
— Lisa Marie Mary (@LisaMarieMary) August 29, 2021
ಇಡಾ ಚಂಡಮಾರುತದಿಂದ ಈಗಾಗಲೇ 3,02,000 ಮನೆಗಳು ಹಾಗೂ ಕಾರ್ಖಾನೆ, ಕಂಪನಿಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿದೆ. ಈ ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಉಂಟಾಗಿರುವ ಅತಿ ಪ್ರಬಲ ಚಂಡಮಾರುತ ಇದಾಗಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.
Power outages power lines down blocking roads out storm surge coming up the channels and the Mississippi River now. Incredibly dangerous weather event. #disasterrecovery #businesscontinuity #cre #ifma #boma #iicrc #propertymanagement #facilitiesmanagementpic.twitter.com/VUtAd9MgKT
— SERVPROguy (@PlanetSERVPRO) August 29, 2021
ಇದನ್ನೂ ಓದಿ: Viral Video: ಮೊಬೈಲ್ ಕಿತ್ತುಕೊಂಡು ಹಾರಿಹೋಯ್ತು ಗಿಳಿ; ಆಮೇಲಾಗಿದ್ದು ಊಹೆಗೂ ನಿಲುಕದ್ದು!
Turkey Floods: ಟರ್ಕಿಯಲ್ಲಿ ಭೀಕರ ಪ್ರವಾಹ; ಸಾವಿನ ಸಂಖ್ಯೆ 70ಕ್ಕೆ ಏರಿಕೆ, 40 ಜನ ನಾಪತ್ತೆ
(Shocking Video: Hurricane Ida Lashes Louisiana Mississippi River To Flow in Reverse Ida Cyclone)
Published On - 2:25 pm, Mon, 30 August 21