ಹುಷಾರು! ಈ ರೋಗ ಲಕ್ಷಣಗಳು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ..

ವಾಷಿಂಗ್ಟನ್: ಕಿಲ್ಲರ್ ಕೊರೊನಾ ಆರ್ಭಟಕ್ಕೆ ಸಿಲುಕಿ ಇಡೀ ಜಗತ್ತೇ ನಡುಗಿ ಹೋಗಿದೆ. ಚೀನಾದಲ್ಲಿ ಜನಿಸಿದ ಕೊರೊನಾಗೆ 2 ಲಕ್ಷಕ್ಕೂ ಹೆಚ್ಚು ಮಂದಿ ವಿಶ್ವದಾದ್ಯಂತ ಬಲಿಯಾಗಿದ್ದಾರೆ. ಇನ್ನೂ ಈ ಮಹಾಮಾರಿಗೆ ಈವರೆಗೆ ಯಾರೂ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಹಿಂದೆ ಅಮೆರಿಕದ ಆರೋಗ್ಯ ಸಂಸ್ಥೆ ಕೊರೊನಾ ವೈರಸ್​ನ ಕೇವಲ 3 ಲಕ್ಷಣಗಳನ್ನು ಮಾತ್ರ ಪಟ್ಟಿಮಾಡಿತ್ತು. ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಗಳನ್ನು ತಿಳಿಸಿತ್ತು. ಆದ್ರೆ ಇದೀಗ ಮಹಾಮಾರಿ ಕೊವಿಡ್ 19 ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಇದೀಗ ಅಮೆರಿಕದ ಆರೋಗ್ಯ […]

ಹುಷಾರು! ಈ ರೋಗ ಲಕ್ಷಣಗಳು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ..
ಸಾಧು ಶ್ರೀನಾಥ್​

Updated on: Apr 29, 2020 | 5:18 PM

ವಾಷಿಂಗ್ಟನ್: ಕಿಲ್ಲರ್ ಕೊರೊನಾ ಆರ್ಭಟಕ್ಕೆ ಸಿಲುಕಿ ಇಡೀ ಜಗತ್ತೇ ನಡುಗಿ ಹೋಗಿದೆ. ಚೀನಾದಲ್ಲಿ ಜನಿಸಿದ ಕೊರೊನಾಗೆ 2 ಲಕ್ಷಕ್ಕೂ ಹೆಚ್ಚು ಮಂದಿ ವಿಶ್ವದಾದ್ಯಂತ ಬಲಿಯಾಗಿದ್ದಾರೆ. ಇನ್ನೂ ಈ ಮಹಾಮಾರಿಗೆ ಈವರೆಗೆ ಯಾರೂ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಈ ಹಿಂದೆ ಅಮೆರಿಕದ ಆರೋಗ್ಯ ಸಂಸ್ಥೆ ಕೊರೊನಾ ವೈರಸ್​ನ ಕೇವಲ 3 ಲಕ್ಷಣಗಳನ್ನು ಮಾತ್ರ ಪಟ್ಟಿಮಾಡಿತ್ತು. ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಗಳನ್ನು ತಿಳಿಸಿತ್ತು. ಆದ್ರೆ ಇದೀಗ ಮಹಾಮಾರಿ ಕೊವಿಡ್ 19 ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಇದೀಗ ಅಮೆರಿಕದ ಆರೋಗ್ಯ ಸಂಸ್ಥೆ ಮತ್ತೆ ಹೊಸದಾಗಿ 6 ಕೊರೊನಾ ಲಕ್ಷಣಗಳನ್ನು ಕಂಡುಹಿಡಿದಿದೆ.

ಕೊರೊನಾ ವೈರಸ್​ನ ಹೊಸ ರೋಗ ಲಕ್ಷಣಗಳು:

* ಶೀತ,
* ಮೈ ನಡುಗುವಿಕೆ,
* ಸ್ನಾಯು ಸೆಳೆತ,
* ತಲೆನೋವು,
* ಗಂಟಲು ನೋವು ಮತ್ತು
* ರುಚಿ, ವಾಸನೆ ಕಂಡುಹಿಡಿಯುವ ಸಾಮರ್ಥ್ಯ ಕಳೆದುಕೊಳ್ಳುವುದು

Published On - 5:13 pm, Wed, 29 April 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us