Thailand Plane Crash: ಥೈಲೆಂಡ್​ನಲ್ಲಿ ವಿಮಾನ ಪತನ, 9 ಮಂದಿ ಸಾವು

ಥೈಲೆಂಡ್​ನಲ್ಲಿ ವಿಮಾನ ಪತನಗೊಂಡಿದ್ದು, 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನವು ಟೇಕ್​ ಆಫ್ ಆಗಿ 11 ನಿಮಿಷಗಳ ಬಳಿಕ ಏರ್​ ಕಂಟ್ರೋಲರ್​ನಿಂದ ಸಂಪರ್ಕ ಕಳೆದುಕೊಂಡಿತ್ತು.

Thailand Plane Crash: ಥೈಲೆಂಡ್​ನಲ್ಲಿ ವಿಮಾನ ಪತನ, 9 ಮಂದಿ ಸಾವು
ವಿಮಾನ ಅಪಘಾತ
Follow us
|

Updated on: Aug 23, 2024 | 11:09 AM

ಥೈಲೆಂಡ್​ನಲ್ಲಿ ಪ್ರಯಾಣಿಕರ ಸಣ್ಣ ವಿಮಾನವೊಂದು ಪತನಗೊಂಡಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜಧಾನಿ ಬ್ಯಾಂಕಾಂಕ್​ನಿಂದ ಟೇಕ್ ಆಫ್ ಆಗಿ ಸ್ವಲ್ಪ ಸಮಯದ ಬಳಿಕ ಪತನಗೊಂಡಿದೆ. ಥಾಯ್ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವಿಮಾನ ನಿಲ್ದಾಣದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮ್ಯಾಂಗ್ರೋವ್ ಜೌಗು ಪ್ರದೇಶದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ.

ವಿಮಾನದಲ್ಲಿ 7 ಪ್ರಯಾಣಿಕರಿದ್ದರು, ಇಬ್ಬರು ಪೈಲಟ್​ಗಳು ಇದ್ದರು, ವಿಮಾನದಲ್ಲಿದ್ದವರ ಗುರುತು ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ವಿಮಾನದಲ್ಲಿದ್ದವರಲ್ಲಿ ಹ್ಯಾಂಕಾಂಗ್​ ಐವರು, ಚೀನೀ ಪ್ರವಾಸಿಗರು ಹಾಗೂ ಸಿಬ್ಬಂದಿ ಇದ್ದರು.

ಥೈಲೆಂಡ್ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಥಾಯ್ ಫ್ಲೈಯಿಂಗ್ ಸರ್ವೀಸ್ ಕಂಪನಿಯಿಂದ ನಿರ್ವಹಿಸಲ್ಪಡುವ ಸೆಸ್ನಾ ಕಾರವಾನ್ ಗುರುವಾರ ಮಧ್ಯಾಹ್ನ 2.46ಕ್ಕೆ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು.

ಮತ್ತಷ್ಟು ಓದಿ: ಬ್ರೆಜಿಲ್ ವಿಮಾನ ಪತನ : ಜನವಸತಿ ಪ್ರದೇಶದಲ್ಲೇ ಅಪಘಾತ, 62 ಸಾವು

ಟೇಕ್ ಆಫ್ ಆದ 11 ನಿಮಿಷಗಳ ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್​ ಸಂಪರ್ಕವನ್ನು ಕಳೆದುಕೊಂಡರು. ಆ ಸಮಯದಲ್ಲಿ ವಿಮಾನವು ನಿಲ್ದಾಣದಿಂದ 35 ಕಿಲೋಮೀಟರ್​ ದೂರದಲ್ಲಿತ್ತು.ಅದು ಆಗ್ನೇಯಕ್ಕೆ 275 ಕಿಲೋಮೀಟರ್​ ದೂರದಲ್ಲಿರುವ ಟ್ರೀಟ್​ನ ಕರಾವಳಿ ಪ್ರಾಂತ್ಯದ ಕಡೆಗೆ ಹೋಗುತ್ತಿತ್ತು.

300ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಶೋಧ ಕಾರ್ಯದಲ್ಲಿ ನಿಯೋಜಿಸಲಾಗಿದ್ದು, ಅಪಘಾತದ ಕಾರಣವನ್ನು ಗುರುತಿಸಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ