ಸೊಮಾಲಿಯಾ: ಸೊಮಾಲಿಯಾ (Somalia) ದೇಶದ ರಾಜಧಾನಿಯ ಹಯಾತ್ ಹೋಟೆಲ್‌ನಲ್ಲಿ ಅಲ್ ಖೈದಾ ಜೊತೆ ಲಿಂಕ್ ಇರುವ ಅಲ್ ಶಬಾಬ್ ಸಂಘಟನೆಯ ಉಗ್ರಗಾಮಿಗಳು ಮುತ್ತಿಗೆ ಹಾಕಿದ್ದರು. ಈ ದಾಳಿಯನ್ನು ಭದ್ರತಾ ಪಡೆಗಳು ಅಂತ್ಯಗೊಳಿಸಿವೆ. ಈ ಉಗ್ರರ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 117 ಜನರು ಗಾಯಗೊಂಡಿದ್ದಾರೆ. ಮೊಗಾದಿಶುವಿನ ಹಯಾತ್ ಹೋಟೆಲ್‌ನಲ್ಲಿ ನಡೆದ ದಾಳಿ ವೇಳೆ ಒತ್ತೆಯಾಳಾಗಿದ್ದ ಹಲವು ಜನರನ್ನು ಬಿಡುಗಡೆ ಮಾಡಲಾಯಿತು.
ಶಾಸಕರು ಮತ್ತು ಇತರ ಸರ್ಕಾರಿ ಅಧಿಕಾರಿಗಳು ಯಾವಾಗಲೂ ಭೇಟಿ ನೀಡುತ್ತಿದ್ದ ಈ ಜನಪ್ರಿಯ ಹೋಟೆಲ್‌ಗೆ ನುಗ್ಗಿದ್ದ ಉಗ್ರರು ಬಾಂಬ್ ಸ್ಫೋಟಿಸಿ, ಗುಂಡು ಹಾರಿಸಿದ ನಂತರ ಶುಕ್ರವಾರ ಸಂಜೆಯಿಂದ ಎಲೈಟ್ ಸಶಸ್ತ್ರ ಪಡೆಗಳು ಉಗ್ರಗಾಮಿಗಳೊಂದಿಗೆ 30 ಗಂಟೆಗಳ ಕಾಲ ಹೋರಾಟ ನಡೆಸಿದರು. ಈ ದಾಳಿಯಲ್ಲಿ ಇಲ್ಲಿಯವರೆಗೆ 21 ಜನ ಮೃತಪಟ್ಟಿದ್ದಾರೆ ಮತ್ತು 117 ಜನರು ಗಾಯಗೊಂಡಿದ್ದಾರೆ ಎಂದು ನಾವು ಖಚಿತಪಡಿಸಿದ್ದೇವೆ ಎಂದು ಆರೋಗ್ಯ ಸಚಿವ ಅಲಿ ಹಾಜಿ ತಿಳಿಸಿದ್ದಾರೆ.
ಇದನ್ನೂ ಓದಿ: Big News: ಸೊಮಾಲಿಯಾದ ಹೋಟೆಲ್‌ಗೆ ನುಗ್ಗಿ ಅಲ್ ಶಬಾಬ್ ಉಗ್ರರಿಂದ ಗುಂಡಿನ ದಾಳಿ, ಬಾಂಬ್ ಸ್ಫೋಟ
ದಾಳಿಯಲ್ಲಿ ಮೃತಪಟ್ಟವರನ್ನು ಆಸ್ಪತ್ರೆಗಳಿಗೆ ಕೊಂಡೊಯ್ಯದೆ ಅವರ ಸಂಬಂಧಿಕರು ಹೂಳಿರುವ ಸಾಧ್ಯತೆ ಇದೆ. ಸಾವಿನ ಸಂಖ್ಯೆ ಮತ್ತು ಸಾವು-ನೋವುಗಳು ಆಸ್ಪತ್ರೆಗಳಿಗೆ ಕೊಂಡೊಯ್ಯಲ್ಪಟ್ಟ ಅಂಕಿ-ಅಂಶವನ್ನು ಆಧರಿಸಿವೆ ಎಂದು ಸಚಿವರು ಹೇಳಿದ್ದಾರೆ. ಎಷ್ಟು ಮಂದಿ ಉಗ್ರರು ದಾಳಿ ನಡೆಸಿದ್ದರು ಎಂಬುದು ಇನ್ನೂ ಖಚಿತವಾಗಿಲ್ಲ. 1 ದಶಕಕ್ಕೂ ಹೆಚ್ಚು ಕಾಲದಿಂದ ಹಾರ್ನ್ ಆಫ್ ಆಫ್ರಿಕಾ ದೇಶದಲ್ಲಿ ಸರ್ಕಾರವನ್ನು ಉರುಳಿಸಲು ಹೋರಾಡುತ್ತಿರುವ ಅಲ್ ಖೈದಾ-ಸಂಬಂಧಿತ ಅಲ್ ಶಬಾಬ್ ಗುಂಪು ಈ ಭಯೋತ್ಪಾದಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
More than 30 already feared killed in Mumbai-like siege of Hayat Hotel in Somalia’s #Mogadishu. Toll likely to increase.
Al Qaeda-linked Al Shabaab carrying out the attack.
Jihad never sleeps. pic.twitter.com/SqcfzT4Gsp— Abhijit Majumder (@abhijitmajumder) August 20, 2022
ಹಯಾತ್‌ನಲ್ಲಿ ಶುಕ್ರವಾರ ನಡೆದ ದಾಳಿಯು ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಮೇನಲ್ಲಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಪ್ರಮುಖ ಘಟನೆಯಾಗಿದೆ. ದಾಳಿಕೋರರು ಹೊಟೇಲ್ ಕಾಂಪೌಂಡ್ ಗೋಡೆಯ ಕಡೆಗೆ ಓಡಿಹೋದ ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ. ಬದುಕುಳಿದ ಅಡೆನ್ ಅಲಿ ಮೊದಲ ಸ್ಫೋಟವನ್ನು ಕೇಳಿದಾಗ ಅವರು ಹೋಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದರು. ಉಗ್ರರು ಅವರತ್ತ ಗುಂಡು ಹಾರಿಸುತ್ತಿದ್ದಂತೆ ಅವರು ಇತರರೊಂದಿಗೆ ಕಾಂಪೌಂಡ್ ಗೋಡೆಯ ಕಡೆಗೆ ಓಡಿದರು. ಆಗ ಅವರ ಮೇಲೆ ಗುಂಡು ಹಾರಿಸಲಾಗಿದೆ. ಅದೃಷ್ಟವಶಾತ್ ಅವರು ಬದುಕುಳಿದಿದ್ದಾರೆ.
ಹೋಟೆಲ್‌ನ ಮೇಲಿನ ಮಹಡಿಯಲ್ಲಿನ ತಮ್ಮ ಕೊಠಡಿಗಳಲ್ಲಿ ಬೀಗ ಹಾಕಿಕೊಂಡಿದ್ದ ಕೆಲವರನ್ನು ಹಲವು ಗಂಟೆಗಳ ನಂತರ ಭದ್ರತಾ ಪಡೆಗಳು ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿವೆ. ಹೋಟೆಲ್ನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 106 ಜನರನ್ನು ಹೊರಗೆ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಹಿರಿಯ ಪೊಲೀಸ್ ಕಮಾಂಡರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಕನ್ನಡಿಗ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ನೇಮಕ
ಭಾನುವಾರ ಬಾಂಬ್ ಸ್ಫೋಟಗೊಂಡ ಹೋಟೆಲ್ ಸುತ್ತಲೂ ನಿವಾಸಿಗಳು ಮಿಲ್ಲಿಂಗ್ ಮಾಡುತ್ತಿದ್ದರು. ಕಟ್ಟಡಕ್ಕೆ ವ್ಯಾಪಕ ಹಾನಿಯಾಗಿದೆ. ಹೋಟೆಲ್‌ನ ಸುತ್ತಲೂ ಚೆಲ್ಲಾಪಿಲ್ಲಿಯಾಗಿರುವ ಅನೇಕ ಪ್ಲಾಸ್ಟಿಕ್ ಚೀಲಗಳ ಸ್ಫೋಟಗಳ ಬಗ್ಗೆ ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆ ಎಂದು ಘಟನಾ ಸ್ಥಳದಲ್ಲಿದ್ದ ಮಿಲಿಟರಿ ಅಧಿಕಾರಿ ಮೊಹಮ್ಮದ್ ಅಲಿ ಹೇಳಿದ್ದಾರೆ.
Published On - 9:10 am, Mon, 22 August 22