Sri Lanka: ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ದಾಳಿ, ಪ್ರತ್ಯೇಕ ಘಟನೆಯಲ್ಲಿ 14 ಮಂದಿಯ ಬಂಧನ
ಸಮುದ್ರ ಗಡಿ ಉಲ್ಲಂಘನೆ ಆರೋಪದ ಮೇಲೆ 14 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ. ಬಂಧನ ನಂತರ ತಮಿಳುನಾಡಿನ ಮೀನುಗಾರನೊಬ್ಬನ ಕಣ್ಣಿಗೆ ಗಾಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀಲಂಕಾ: ಸಮುದ್ರ ಗಡಿ ಉಲ್ಲಂಘನೆ ಆರೋಪದ ಮೇಲೆ 14 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ. ಬಂಧನ ನಂತರ ತಮಿಳುನಾಡಿನ ಮೀನುಗಾರನೊಬ್ಬನ ಕಣ್ಣಿಗೆ ಗಾಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡಿರುವ ಮೀನುಗಾರನನ್ನು ರಾಮೇಶ್ವರಂನ ಜಾನ್ಸನ್ ಎಂದು ಗುರುತಿಸಲಾಗಿದ್ದು, ಬುಧವಾರ ತಡರಾತ್ರಿ ಲಂಕಾ ನೌಕಾ ಸಿಬ್ಬಂದಿ ದಾಳಿ ನಡೆಸಿದಾಗ ಆತನ ಕಣ್ಣಿಗೆ ಗಾಯವಾಗಿದೆ ಎಂದು ಅವರು ಹೇಳಿದರು.
ರಾಜ್ಯದ ನಾಗಪಟ್ಟಣಂ ಜಿಲ್ಲೆಗೆ ಸೇರಿದ 14 ಮೀನುಗಾರರನ್ನು ಲಂಕಾ ನೌಕಾಪಡೆ ಬಂಧಿಸಿದೆ. ಅವರ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ. ಅವಳಿ ಘಟನೆಗಳು ಮೀನುಗಾರರಲ್ಲಿ ಹೆಚ್ಚಿನ ಆತಂಕವನ್ನು ಉಂಟುಮಾಡಿದೆ ಎಂದು ಮೀನುಗಾರರ ಪ್ರತಿನಿಧಿಗಳು ತಿಳಿಸಿದ್ದಾರೆ. ಕಳೆದ ತಿಂಗಳು, ಮೈಲಾಡುತುರೈ ಜಿಲ್ಲೆಯ ವನಗಿರಿ ಗ್ರಾಮದ ಮೀನುಗಾರ ಶ್ರೀಲಂಕಾದ ಕಡಲ ಗಡಿಯ ಸಮೀಪವಿರುವ ಪಾಲ್ಕ್ ಕೊಲ್ಲಿಯಲ್ಲಿ ಅನುಮಾನಾಸ್ಪದ ದೋಣಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ ಭಾರತೀಯ ನೌಕಾಪಡೆಯು ಗುಂಡಿನ ದಾಳಿ ನಡೆಸಿತ್ತು.
ಬಂಗಾಳಕೊಲ್ಲಿ ಪ್ರದೇಶದಲ್ಲಿ ಕಡಿಮೆ ಒತ್ತಡ ಉಂಟಾಗಿರುವ ಕಾರಣ, ತಮಿಳುನಾಡು ಮೀನುಗಾರಿಕೆ ಇಲಾಖೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಆಳ ಸಮುದ್ರದಲ್ಲಿರುವವರು ಹತ್ತಿರದ ಬಂದರುಗಳಿಗೆ ಹಿಂತಿರುಗಿ ತಮ್ಮ ದೋಣಿಗಳನ್ನು ಸುರಕ್ಷಿತವಾಗಿರಿಸಲು ಅಧಿಕಾರಿಗಳು ಸೂಚಿಸಿದ್ದಾರೆ.
f